ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಕೇರ್ ಬೈ ಬಿಎಲ್‌ಆರ್’ ವೈಯಕ್ತಿಕ ಪ್ರಯಾಣಿಕ ಸೇವೆ ಆರಂಭ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಪ್ರಯಾಣಿಕರ ಅನುಭವವನ್ನು ಇನ್ನಷ್ಟು ಸುಗಮ, ಅನುಕೂಲಕರ ಮತ್ತು ವೈಯಕ್ತಿಕ ಅಗತ್ಯಗಳಿಗೆ ಹೊಂದುವಂತೆ ರೂಪಿಸಲುಕೇರ್ ಬೈ ಬಿಎಲ್‌ಆರ್ಎಂಬ ವೈಯಕ್ತಿಕ ಪ್ರಯಾಣಿಕ ಸೇವಾ ಬ್ರಾಂಡ್ ಅನ್ನು ಪರಿಚಯಿಸಿದೆ. ಈ ಸೇವೆಯಡಿ ವಿಮಾನ ನಿಲ್ದಾಣ ಪ್ರಯಾಣದ ವಿವಿಧ ಹಂತಗಳಿಗೆ ಹೊಂದುವಂತೆ ವಿನ್ಯಾಸಗೊಳಿಸಲಾದ ಹಲವು ಪ್ರೀಮಿಯಂ ಸೇವೆಗಳನ್ನು ಒಟ್ಟುಗೂಡಿಸಲಾಗಿದೆ.

ಟರ್ಮಿನಲ್ 1 ಮತ್ತು ಟರ್ಮಿನಲ್ 2 ಎರಡರಲ್ಲಿಯೂ ಲಭ್ಯವಿರುವ ಈ ಸೇವೆಗಳು, ಪ್ರಯಾಣಿಕರ ಆಗಮನ, ನಿರ್ಗಮನ, ಟ್ರಾನ್ಸ್‌ಫರ್, ಬ್ಯಾಗೇಜ್ ನಿರ್ವಹಣೆ ಮತ್ತು ಇತರೆ ವೈಯಕ್ತಿಕ ಸೇವೆಗಳಂತಹ ಪ್ರಮುಖ ಹಂತಗಳನ್ನು ಒಳಗೊಂಡಿವೆ. ವಿಮಾನ ವೇಳಾಪಟ್ಟಿಗೆ ಅನುಗುಣವಾಗಿ ಈ ಸೇವೆಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತವೆ. ಪ್ರಯಾಣಿಕರು ಬಿಎಲ್‌ಆರ್ ಪಲ್ಸ್ ಆ್ಯಪ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಅಧಿಕೃತ ವೆಬ್‌ಸೈಟ್ www.bengaluruairport.com/carebyblr ಹಾಗೂ ವಿಮಾನ ನಿಲ್ದಾಣದ ಕೌಂಟರ್‌ಗಳ ಮೂಲಕ ಈ ಸೇವೆಗಳನ್ನು ಬುಕ್ ಮಾಡಬಹುದು. ಮುಂಗಡವಾಗಿ ಕಾಯ್ದಿರಿಸಲು ಶಿಫಾರಸು ಮಾಡಲಾಗಿದ್ದು, ವಾಕ್-ಇನ್ ಸೇವೆಗಳು ಕಾರ್ಯಾಚರಣಾ ಸಾಧ್ಯತೆಯ ಆಧಾರದ ಮೇಲೆ ಲಭ್ಯವಿರುತ್ತವೆ. ತರಬೇತಿ ಪಡೆದ ಗ್ರಾಹಕ ಸೇವಾ ಸಹಾಯಕರು ವಿಮಾನ ನಿಲ್ದಾಣದ ಪ್ರಮುಖ ಸಂಪರ್ಕ ಕೇಂದ್ರದ ಮೂಲಕ ಸಹಾಯವನ್ನು ಒದಗಿಸಲಿದ್ದಾರೆ.
ಪ್ರಯಾಣಿಕರ ಅನುಭವಕ್ಕೆ ‘ಕೇರ್ ಬೈ ಬಿಎಲ್‌ಆರ್’ ನೀಡುವ ಮೌಲ್ಯ..

ಅನುಕೂಲತೆ: ವಿಮಾನ ನಿಲ್ದಾಣದ ಪ್ರಯಾಣವನ್ನು ಸರಳಗೊಳಿಸುವ ಮೂಲಕ ಪ್ರಯಾಣಿಕರಿಗೆ ಅಗತ್ಯ ಸೇವೆಗಳನ್ನು ಸುಲಭವಾಗಿ ಒದಗಿಸಲಾಗುತ್ತಿದೆ.
ವೈಯಕ್ತಿಕ ಅನುಭವ: ಪ್ರತಿಯೊಬ್ಬ ಪ್ರಯಾಣಿಕರ ಅಗತ್ಯ, ಆದ್ಯತೆ ಮತ್ತು ಪ್ರಯಾಣದ ಸಂದರ್ಭ ವಿಭಿನ್ನವಾಗಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಅವರ ವಿಮಾನ ನಿಲ್ದಾಣದ ಅನುಭವವನ್ನು ತಮಗೆ ತಕ್ಕಂತೆ ರೂಪಿಸಿಕೊಳ್ಳಲು ಹೆಚ್ಚಿನ ಆಯ್ಕೆ ನೀಡುತ್ತದೆ.
ಏಕೀಕೃತ ಪರಿಸರ ವ್ಯವಸ್ಥೆ: ಕೇರ್ ಬೈ ಬಿಎಲ್‌ಆರ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ವಿಶಾಲ ಪ್ರಯಾಣಿಕ ಅನುಭವ ಪರಿಸರ ವ್ಯವಸ್ಥೆಯ ಭಾಗವಾಗಿದೆ. ಆತಿಥ್ಯ, ವಾಣಿಜ್ಯ ಮತ್ತು ಡಿಜಿಟಲ್ ಅನುಭವಗಳನ್ನು ಒಟ್ಟುಗೂಡಿಸಿ, ಪ್ರಯಾಣಿಕರಿಗೆ ಹೆಚ್ಚು ಸುಗಮ ಮತ್ತು ಉನ್ನತ ಮಟ್ಟದ ಆರಂಭದಿಂದ ಅಂತ್ಯದವರೆಗಿನ ಪ್ರಯಾಣ ಅನುಭವವನ್ನು ಒದಗಿಸುವುದು ಇದರ ಉದ್ದೇಶವಾಗಿದೆ.

ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಸೇವೆಗಳು

1. ಮೀಟ್ ಅಂಡ್ ಅಸಿಸ್ಟ್
ಕರ್ಬ್‌ಸೈಡ್‌ನಿಂದ ಆರಂಭಿಸಿ ಚೆಕ್-ಇನ್, ಸುರಕ್ಷತಾ ತಪಾಸಣೆ, ಇಮಿಗ್ರೇಷನ್ ಮತ್ತು ಬ್ಯಾಗೇಜ್ ಸಂಗ್ರಹಣೆ ಸೇರಿದಂತೆ ವಿಮಾನ ನಿಲ್ದಾಣದ ಪ್ರಮುಖ ಹಂತಗಳಲ್ಲಿ ಪ್ರಯಾಣಿಕರಿಗೆ ವಿಶೇಷ ಸಹಾಯ ಒದಗಿಸಲಾಗುತ್ತದೆ.

2. ಲಿಮೋ ಸೇವೆ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಮತ್ತು ನಗರದ ನಡುವೆ ಚಾಲಕಸಹಿತ ಪ್ರೀಮಿಯಂ ವಾಹನಗಳ ಮೂಲಕ ಸಂಚಾರ ಸೌಲಭ್ಯ ಒದಗಿಸಲಾಗುತ್ತದೆ. ಈ ಸೇವೆಯಲ್ಲಿ ಬಿಎಂಡಬ್ಲ್ಯು ಸೇರಿದಂತೆ ಉನ್ನತ ಮಟ್ಟದ ವಾಹನಗಳ ಸೇವೆ ಲಭ್ಯವಿರುತ್ತದೆ.

3. ಹೂವು ಮತ್ತು ಬೊಕೆ ಸೇವೆ
ವಿಮಾನ ನಿಲ್ದಾಣದಲ್ಲಿ ಆತ್ಮೀಯರನ್ನು ಸ್ವಾಗತಿಸಲು, ಅಚ್ಚರಿ ನೀಡಲು ಅಥವಾ ಬೀಳ್ಕೊಡಲು ಆಯ್ದ ತಾಜಾ ಹೂವಿನ ಅಲಂಕಾರಗಳು ಮತ್ತು ಬೊಕೆಗಳನ್ನು ಒದಗಿಸಲಾಗುತ್ತದೆ.

4. ಕೇರ್ ಬೈ ಬಿಎಲ್‌ಆರ್ ಲೌಂಜ್ – ಟಿ1
ಪ್ರಯಾಣಿಕರು ಮತ್ತು ಪ್ರಯಾಣಿಸದ ಅತಿಥಿಗಳಿಗಾಗಿ ಆರಾಮದಾಯಕ ಸ್ಥಳವನ್ನು ಒದಗಿಸುವ ಈ ಲೌಂಜ್‌ನಲ್ಲಿ ರಿಫ್ರೆಶ್‌ಮೆಂಟ್‌ ಮತ್ತು ವ್ಯವಹಾರ ಚರ್ಚೆಗಳಿಗಾಗಿ ಮೀಸಲಾದ ಸಭಾ ಕೊಠಡಿ ಲಭ್ಯವಿರುತ್ತದೆ.

5. ಲಗೇಜ್ ಸ್ಟೋರೇಜ್
ಪ್ರಯಾಣಿಕರು ತಮ್ಮ ಬ್ಯಾಗೇಜ್ ಹೊತ್ತೊಯ್ಯದೆ ಬೆಂಗಳೂರು ನಗರವನ್ನು ವೀಕ್ಷಿಸಲು ಅಥವಾ ದೀರ್ಘ ಲೇಓವರ್‌ಗಳನ್ನು ಸುಲಭವಾಗಿ ನಿರ್ವಹಿಸಲು ಸುರಕ್ಷಿತ ಬ್ಯಾಗೇಜ್ ಸಂಗ್ರಹಣೆ ಸೌಲಭ್ಯ ಒದಗಿಸಲಾಗುತ್ತದೆ.

6. ವ್ಯಾಲೆಟ್ ಪಾರ್ಕಿಂಗ್
ತಂತ್ರಜ್ಞಾನ ಆಧಾರಿತ ಕರ್ಬ್‌ಸೈಡ್ ಸೇವೆಯಾದ ವ್ಯಾಲೆಟ್ ಪಾರ್ಕಿಂಗ್ ಮೂಲಕ, ಪ್ರಯಾಣಿಕರು ತಮ್ಮ ವಾಹನವನ್ನು ಹಸ್ತಾಂತರಿಸಿ ನೇರವಾಗಿ ಟರ್ಮಿನಲ್‌ಗೆ ತೆರಳಬಹುದು.

7. ಪೋರ್ಟರ್ ಸೇವೆ
ವೃತ್ತಿಪರವಾಗಿ ತರಬೇತಿ ಪಡೆದ ಮತ್ತು ಸಮವಸ್ತ್ರಧಾರಿ ಕೇರ್ ಬೈ ಬಿಎಲ್‌ಆರ್ ಪೋರ್ಟರ್‌ಗಳು, ಆಗಮನ ಮತ್ತು ನಿರ್ಗಮನದ ಪ್ರಮುಖ ಹಂತಗಳಲ್ಲಿ ಬ್ಯಾಗೇಜ್ ನಿರ್ವಹಣೆಗೆ ಸಹಾಯ ಒದಗಿಸುತ್ತಾರೆ.

8. ಬ್ಯಾಗೇಜ್ ರಾಪಿಂಗ್
ಪ್ರಯಾಣಿಕರ ಬ್ಯಾಗ್‌ಗಳನ್ನು ಸ್ಕ್ರಾಚ್, ಧೂಳು, ತೇವಾಂಶ ಮತ್ತು ಅನಧಿಕೃತ ಹಸ್ತಕ್ಷೇಪದಿಂದ ರಕ್ಷಿಸಲು ವೃತ್ತಿಪರವಾಗಿ ನಿರ್ವಹಿಸಲಾದ ರಕ್ಷಣಾತ್ಮಕ ರಾಪಿಂಗ್ ಸೇವೆ ಒದಗಿಸಲಾಗುತ್ತದೆ. ಈ ಸೇವೆ ವಿಮಾನ ನಿಲ್ದಾಣ ಮತ್ತು ವಿಮಾನಯಾನ ಸಂಸ್ಥೆಗಳ ಅಗತ್ಯಗಳಿಗೆ ಅನುಗುಣವಾಗಿರುತ್ತದೆ.

9. ಕಾರ್ ಸ್ಪಾ
ಪ್ರಯಾಣಿಕರು ತಮ್ಮ ಪ್ರಯಾಣದಲ್ಲಿರುವಾಗ ಅವರ ವಾಹನಕ್ಕೆ ಹೊರಾಂಗಣ ಮತ್ತು ಒಳಾಂಗಣ ಕಾರ್ ಕೇರ್ ಸೇವೆಗಳನ್ನು ಒದಗಿಸುವ ವೃತ್ತಿಪರ ಕಾರ್ ಸ್ಪಾ ಸೌಲಭ್ಯ ಲಭ್ಯವಿರುತ್ತದೆ.

10. ಏರ್‌ಸೈಡ್ ಲಿಮೋ / ಫೆಸಿಲಿಟೇಶನ್
ಪ್ರಮುಖ ಪ್ರಯಾಣಿಕರಿಗಾಗಿ ವಿಮಾನ ಮತ್ತು ಟರ್ಮಿನಲ್ ಪ್ರದೇಶಗಳ ನಡುವೆ ಪ್ರೀಮಿಯಂ ಹಾಗೂ ಸಂಯೋಜಿತ ಚಲನವಲನವನ್ನು ಒದಗಿಸುವ ಸೇವೆಯಾಗಿದೆ. ಇದು ವಿಐಪಿ, ವಿವಿಐಪಿ, ವ್ಯವಹಾರ, ಸೆಲೆಬ್ರಿಟಿ ಮತ್ತು ವಿಶೇಷ ಸಹಾಯ ಅಗತ್ಯವಿರುವ ಪ್ರಯಾಣಗಳಿಗೆ ವಿನ್ಯಾಸಗೊಳಿಸಲ್ಪಟ್ಟಿದ್ದು, ಕಾರ್ಯಾಚರಣಾ ಮತ್ತು ಸುರಕ್ಷತಾ ಅಗತ್ಯಗಳ ಆಧಾರದ ಮೇಲೆ ಲಭ್ಯವಿರುತ್ತದೆ.

ಕೇರ್ ಬೈ ಬಿಎಲ್‌ಆರ್ ಅಡಿಯಲ್ಲಿ ಪ್ರಸ್ತುತ 10 ಸೇವೆಗಳು ಕಾರ್ಯಾಚರಣೆಯಲ್ಲಿವೆ. ಪ್ರಯಾಣಿಕರ ಬದಲಾಗುತ್ತಿರುವ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸೇವಾ ಕೊಡುಗೆ ವಿಸ್ತರಣೆ ಹೊಂದಲಿದೆ.

Leave a Reply

Your email address will not be published. Required fields are marked *

error: Content is protected !!