ಕೃಷಿಹೊಂಡಕ್ಕೆ ಬಿದ್ದು ಇಬ್ಬರು ಪ್ರೇಮಿಗಳ ಸಾವು: ಬೇರೊಬ್ಬನ ಜೊತೆ ಮದುವೆಯಾಗಿದ್ದರು ಪ್ರಿಯತಮನ ಮೇಲೆ ಇನ್ನೂ ಇತ್ತು ಪ್ರೀತಿ: ಆಷಾಡ ಮಾಸ ಹಿನ್ನೆಲೆ ತವರು‌ ಮನೆಗೆ ಬಂದು ಪ್ರಿಯಕರನ ಜೊತೆ ಸಾವು

ಕೃಷಿಹೊಂಡಕ್ಕೆ ಬಿದ್ದು ಇಬ್ಬರು ಪ್ರೇಮಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುದ್ದಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಮೃತ ಯುವತಿಯನ್ನು ಕಾಚಹಳ್ಳಿ ಗ್ರಾಮದ ಅನುಷಾ (19) ಹಾಗೂ ಕೋರ್ಲಪರ್ತಿ ಬಳಿಯ ಎಂ.ಮುದ್ದಲಹಳ್ಳಿ ಗ್ರಾಮದ ವೇಣು (21) ಎಂದು ತಿಳಿದು ಬಂದಿದೆ.

ದೊಡ್ಡಪಲ್ಲಿ ಗ್ರಾಮ, ಸೋಮನಾಥಪುರ ಪಂಚಾಯತಿ, ಚೇಳೂರು ತಾಲೂಕಿನ ವಕ್ಕಲಿಗ ಜನಾಂಗಕ್ಕೆ ಸೇರಿದ ಅನುಷಾ ಹಾಗೂ ಚಿಂತಾಮಣಿ ತಾಲೂಕಿನ ಎಂ ಮುದ್ದಲಹಳ್ಳಿ ಗ್ರಾಮದ ಅಜ್ಜಿ ಮನೆಗೆ ರಜೆ ದಿನಗಳಲ್ಲಿ ಆಗಾಗ ಬರುತ್ತಿದ್ದಳು. ಇದೇ ವೇಳೆ ಅದೇ ಗ್ರಾಮದ ಭೋವಿ ಸಮಾಜದ ವೇಣು ಎಂಬ ಯುವಕನ ಜೊತೆಯಲ್ಲಿ ಪ್ರೀತಿಯಲ್ಲಿ ಬಿದ್ದಿದ್ದು, ಸುಮಾರು 2 ವರ್ಷಗಳಿಂದ ಪ್ರೀತಿಯಲ್ಲಿದ್ದರು.

ಪ್ರೀತಿ ವಿಚಾರ ಯುವತಿಯ ಮನೆಯಲ್ಲಿ ಗೋತ್ತಾಗಿ ಪ್ರೀತಿಯನ್ನು ಒಪ್ಪದೇ ಚಿಂತಾಮಣಿ ತಾಲೂಕಿನ ಕಾಚಹಳ್ಳಿ ಗ್ರಾಮದ ಚೌಡರೆಡ್ಡಿ ಎಂಬ ಯುವಕನ ಜೊತೆ ಕಳೆದ ತಿಂಗಳು ಯುವತಿಗೆ ಮದುವೆ ಮಾಡಿಸಿದ್ದರು.

ಇನ್ನೂ ಗಂಡನ ಜೊತೆ ದಾಬಸ್ ಪೇಟೆಯಲ್ಲಿ ಸಂಸಾರ ನಡೆಸುತ್ತಿದ್ದ ಅನುಷಾಳನ್ನು ಗಂಡ ಚೌಡರೆಡ್ಡಿ ಅಶಾಡ ಮಾಸದ ಸಲುವಾಗಿ ಅನುಷಾಳ ತವರೂರು ದೊಡ್ಡಪಲ್ಲಿ ಬಿಡುತ್ತಾನೆ.

ಇನ್ನು ಮೊದಲೇ ಪ್ರೀತಿಯಲ್ಲಿದ್ದ ಅನುಷಾ ಹಾಗೂ ವೇಣು ಮತ್ತೆ ದೂರವಾಣಿ ಮೂಲಕ ಸಂಪರ್ಕ ಮಾಡಿಕೊಂಡಿದ್ದಾರೆ. ಇನ್ನೂ ಗಂಡನಿಗೆ ಎಟಿಎಂ ಮಾಡಿಸಬೇಕು ಎಂದು ಮನೆಯಿಂದ ಹೊರ ಹೋಗಿದ್ದಾಳೆ. ಪ್ರೀಯಕರ ವೇಣು ಜೊತೆ ಸೇರಿ ಎಂ ಮುದ್ದಲಹಳ್ಳಿ ಗ್ರಾಮದ ತೋಟಕ್ಕೆ ಹೋಗಿ ಕೆಲಸಮಯ ಮಾತುಕತೆ ನಡೆಸಿಕೊಂಡು ನಮ್ಮನ್ನು ಈ ಪ್ರಪಂಚದಲ್ಲಿ ಬದುಕಲು ಬಿಡುವುದಿಲ್ಲ ಎಂದು ಚಲಪತಿ ಎಂಬುವವರ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ಮೊಬೈಲ್ ಫೋನ್ ಹಾಗೂ ಪರ್ಸ್ ಗಳನ್ನು ಪಕ್ಕಕ್ಕೆ ಇಟ್ಟು, ಇಬ್ಬರು ಅಪ್ಪಿಕೊಂಡು ವೇಲ್ ನಲ್ಲಿ ಸುತ್ತಿಕೊಂಡು ಕೃಷಿಹೊಂಡಕ್ಕೆ ಹಾರಿ ಬಿದ್ದಿದ್ದಾರೆ.

ಇನ್ನೂ ಸಂಜೆಯ ನಂತರ ಗಂಡ ಚೌಡರೆಡ್ಡಿ ಅನುಷಾಗೆ ಫೋನ್ ಮಾಡಿದರು ತಗೆಯದ ಹಿನ್ನೆಲೆ ಗ್ರಾಮಕ್ಕೆ ಬಂದು ಹುಡುಕಾಟ ನಡೆಸಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಚಲಪತಿ ಅವರು ತೋಟಕ್ಕೆ ಬಂದ ವೇಳೆ ಮೊಬೈಲ್ ಫೋನ್ ಗಳು ಹಾಗೂ ಪರ್ಸ್, ಚಪ್ಪಲಿಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕೃಷಿಹೊಂಡದಲ್ಲಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಇಬ್ಬರು ವೇಲ್ ಸುತ್ತಿಕೊಂಡು ಕೃಷಿಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅನುಷಾ ಗಂಡ ಚೌಡರೆಡ್ಡಿ ಅವರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಮಾಹಿತಿಯಂತೆ ಸ್ಥಳಕ್ಕೆ ಭೇಟಿ ಕೊಟ್ಟ ಗಂಡ ಚೌಡರೆಡ್ಡಿ ಮೃತಳನ್ನು ಪತ್ನಿ ಎಂದು ಗುರುತ್ತಿಸಿದ್ದಾನೆ.

ಇನ್ನೂ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೃತ ದೇಹಗಳನ್ನು ಚಿಂತಾಮಣಿ ಸಾರ್ವಜನಿಕ ಶವಗಾರಕ್ಕೆ ರವಾನಿಸಿದ್ದು, ಕೇಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Ramesh Babu

Journalist

Recent Posts

ದೊಡ್ಡಬಳ್ಳಾಪುರದಲ್ಲಿ ರಾಯಲ್‌ ಓಕ್‌ ಫರ್ನಿಚರ್ ನೂತನ ಮಳಿಗೆ ಉದ್ಘಾಟನೆ

ಭಾರತದ ಅಗ್ರ ಪೀಠೋಪಕರಣ ಬ್ರ್ಯಾಂಡ್ ಆಗಿರುವ ರಾಯಲ್‌ ಓಕ್‌ ಫರ್ನಿಚರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನೂತನ ಮಳಿಗೆಗೆ ಚಾಲನೆ…

3 hours ago

ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ – ​ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಸ್ಪಷ್ಟನೆ

ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ‌ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ *ಆಟೋ‌ ಎಲ್.ಪಿ.ಜಿ*.ಗೆ ಯಾವುದೇ ರೀತಿಯ ‌ಕೊರತೆ…

5 hours ago

Affordable Emotional Support Animal Letters for Enhanced Well-being

Cheap Emotional Support Animal Letter: Affordable ESA Documentation Affordable Emotional Support Animal Letters for Enhanced…

13 hours ago

ದೊಡ್ಡಬಳ್ಳಾಪುರದಲ್ಲಿ ಅದ್ಧೂರಿ ಶ್ರೀರಾಮೋತ್ಸವ‌:‌ ಹೆಲಿಕಾಪ್ಟರ್‌ನಿಂದ ಪುಷ್ಪಾರ್ಚನೆ: ಶ್ರೀರಾಮ ನಾಮದಲ್ಲಿ ಮಿಂದೆದ್ದ ಸಹಸ್ರಾರು ಜನ

ಶ್ರೀರಾಮನವಮಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ವತಿಯಿಂದ ದೊಡ್ಡಬಳ್ಳಾಪುರ ನಗರದಲ್ಲಿ ಮಾರ್ಚ್ 27 ರಿಂದ ಮೂರು ದಿನಗಳ…

18 hours ago

ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳು ದಾರುಣ ಸಾವು

ಆಟವಾಡುತ್ತಾ ಈಜಲು ಹೋದ ನಾಲ್ವರು ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು…

21 hours ago

ಶ್ರೀರಾಮನವಮಿ ಅನ್ನ ಪ್ರಸಾದಿಂದ ಗ್ರಾಮಸ್ಥರಿಗೆ ಫುಡ್ ಪಾಯಿಸನ್…!!?: ಪ್ರಸಾದ ತಿಂದ ಬಹುತೇಕ ಜನ ಆಸ್ಪತ್ರೆ ಪಾಲು….!

ಶ್ರೀರಾಮನವಮಿ ಅನ್ನ ಪ್ರಸಾದಿಂದ ಗ್ರಾಮಸ್ಥರಿಗೆ ಫುಡ್ ಪಾಯಿಸನ್...!!?ಆಗಿದ್ದು, ಅನ್ನಪ್ರಸಾದ ಸೇವಿಸಿದ ಗ್ರಾಮಸ್ಥರಲ್ಲಿ ಬಹುತೇಕ ಜನ ಆಸ್ಪತ್ರೆ ಪಾಲಾಗಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ…

22 hours ago