Categories: ಕೋಲಾರ

ಕೂತಾಂಡಹಳ್ಳಿ ಗ್ರಾಮದಲ್ಲಿ 3ನೇ ವರ್ಷದ ಅದ್ಧೂರಿ ಹೂವಿನ ಕರಗ ಮಹೋತ್ಸವ

ಕೋಲಾರ: ತಾಲೂಕಿನ ವಕ್ಕಲೇರಿ ಹೋಬಳಿಯ ಕೂತಾಂಡಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ದ್ರೌಪತಾಂಭ ದೇವಿಯ ಮೂರನೇ ವರ್ಷದ ಹೂವಿನ ಕರಗ ಮಹೋತ್ಸವವು ರಾತ್ರಿ ಹನ್ನೆರಡು ಗಂಟೆಗೆ ಪ್ರಾರಂಭವಾಗಿ ಅದ್ಧೂರಿಯಾಗಿ ನಡೆಯಿತು.

ಹೂವಿನ ಕರಗವು ಗ್ರಾಮದ ಮಾರಿಕಾಂಬ ದೇವಾಲಯ‌ ಸೇರಿದಂತೆ ಗ್ರಾಮದೆಲ್ಲೆಡೆ ಮುಂಜಾನೆವರೆಗೂ ಸಂಚರಿಸಿತು. ಈ ವೇಳೆ ಗ್ರಾಮದಲ್ಲಿ ಭಕ್ತಾದಿಗಳು ಹೂವಿನ ಕರಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಹೂವಿನ ಕರಗ ಮಹೋತ್ಸವ ಅಂಗವಾಗಿ ಗ್ರಾಮದಲ್ಲಿ ಮಾರಿಕಾಂಬ ಹಾಗೂ ಗಂಗಮ್ಮ‌ ದೇವಾಲಯಗಳಿಗೆ ವಿಶೇಷವಾದ ಹೂವಿನಿಂದ ಸಿಂಗರಿಸಲಾಗಿತ್ತು. ಗ್ರಾಮದೆಲ್ಲೆಡೆ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು ಕಂಗೊಳಿಸುತ್ತಿತ್ತು. ಕಳೆದ ಮೂರು ದಿನಗಳಿಂದ ಕೂತಾಂಡಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕರಗ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ಗ್ರಾಮದಲ್ಲಿ ಏಳು ದಿನಗಳ ಕಾಲ‌ ನಡೆಯುವ ಕರಗ ಮಹೋತ್ಸವದಲ್ಲಿ ಮೊದಲನೆಯ ದಿನ ಕುಲದ ಯಜಮಾನರಿಂದ ಶಾಸ್ತ್ರೋಕ್ತವಾಗಿ ದ್ವಜಾರೋಹಣ ನೆರವೇರಿಸಲಾಯಿತು. ಕರಗದಮ್ಮನಿಗೆ ಮಡಿಲು ತುಂಬುವ ಮೂಲಕ ಹಸಿ ಕರಗ ನಡೆಸಲಾಯಿತು‌. ಸುತ್ತಮುತ್ತಲಿನ ನಾಲ್ಕು ಊರಿನ ಭಕ್ತರಿಂದ ಕರಗದಮ್ಮನಿಗೆ ಆರತಿ ದೀಪೋತ್ಸವ ಮತ್ತು ಕಲ್ಯಾಣೋತ್ಸವವನ್ನು ಅರ್ಚಕ ಜನಾರ್ಧನ್ ವಿಜೃಂಭಣೆಯಾಗಿ ನೆರವೇರಿಸಿದರು‌.

ಮಂಗಳವಾರ ರಾತ್ರಿ 12 ಗಂಟೆಗೆ ಸರಿಯಾಗಿ ಕರಗದ ಪೂಜಾರಿ ಗಂಗಾಧರ ಅವರಿಂದ ಹೂವಿನ ಕರಗ ಮಹೋತ್ಸವ ವಿಜೃಂಭಣೆಯಿಂದ ನೆರವೇರಿಸಲಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಾದ್ಯಕ್ಕೆ ತಕ್ಕಂತೆ ನೃತ್ಯ ಮಾಡಿ ಜನರ ಮನಸ್ಸನ್ನು ಸೂರೆಗೊಳಿಸಿದರು. ನಂತರ ಅಗ್ನಿ ಕುಂಡ ಪ್ರವೇಶ, ಸಂಜೆ ಭರತ ಪೂಜಾರಿ ಗೋವಿಂದಪ್ಪ ಅವರಿಂದ ಪುರಾಣಗಾವು, ವಸಂತೋತ್ಸವ ಕಾರ್ಯಕ್ರಮಗಳು ನೆರವೇರಿದ ನಂತರ ಮಹಾಮಂಗಳಾರತಿ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಈ ಅದ್ಧೂರಿ ಕರಗ ಮಹೋತ್ಸವ ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಸಾವಿರಾರು ಭಕ್ತಾದಿಗಳು, ಕುಲದ ಗೌಡರು, ಯಜಮಾನರು ಕೋಲ್ಕಾರರು ,ಕುಲಸ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

Ramesh Babu

Journalist

Recent Posts

ಜಾಬ್ ಕಾರ್ಡ್ ಮೇಳಕ್ಕೆ ಚಾಲನೆ ನೀಡಿದ ಶಾಸಕ ಸಿ.ಬಿ.ಸುರೇಶ್ ಬಾಬು

  *ಚಿಕ್ಕನಾಯಕನಹಳ್ಳಿ : ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ದೊರಕುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್…

1 hour ago

ಕನ್ನಡದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವ

ದೊಡ್ಡಬಳ್ಳಾಪುರ: ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಮತ್ತು ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು…

21 hours ago

ಕ್ಷಯ ಮುಕ್ತ ಭಾರತ ಅಭಿಯಾನ: ಜಾಗೃತಿ ಜಾಥಾ, ಬೀದಿ ನಾಟಕದ ಮೂಲಕ ಅರಿವು

ದೊಡ್ಡಬಳ್ಳಾಪುರ: ಕ್ಷಯರೋಗ ಮುಕ್ತ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ತಾಲ್ಲೂಕಿನ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಟಿಬಿ ಮುಕ್ತ ಭಾರತ್ ಅಭಿಯಾನ’ದ…

21 hours ago

ಎಕ್ಸ್‌ಪ್ರೆಸ್ ರೈಲು ಹರಿದು ಇಬ್ಬರು ಮಹಿಳೆಯರು, ಮಗು ಬಲಿ

ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಎಕ್ಸ್‌ಪ್ರೆಸ್ ರೈಲು ಹರಿದ ಪರಿಣಾಮ ಇಬ್ಬರು ಮಹಿಳೆಯರು ಹಾಗೂ ಒಂದು ಮಗು…

1 day ago

ಟಾಕ್ಸಿಕ್

ಕ್ರಿಯಾತ್ಮಕತೆ ಮತ್ತು ಪ್ರಯತ್ನಗಳಿಗೂ ಒಂದಷ್ಟು ಮಿತಿ ಇರುತ್ತದೆ. ಏಕೆಂದರೆ ನಾವು ಸಾಮಾನ್ಯ ಮನುಷ್ಯರು. ಹಣ, ಜನಪ್ರಿಯತೆ, ಅಧಿಕಾರ ಬಂದ ತಕ್ಷಣ…

3 days ago

ಚಿ.ನಾ.ಹಳ್ಳಿ ತಾಲ್ಲೂಕಿಗೆ ಸಿಇಒ ದಿಢೀರ್ ಭೇಟಿ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಚಿಕ್ಕನಾಯಕನಹಳ್ಳಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ ಬಿ.ವಿ. ಅವರು ತಾಲ್ಲೂಕಿಗೆ ದಿಢೀರ್ ಭೇಟಿ ನೀಡಿ ವಿವಿಧ ಅಭಿವೃದ್ಧಿ…

4 days ago