2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಅಳೆದುತೂಗಿ ಅಭ್ಯರ್ಥಿಗಳನ್ನು ಅಖೈರುಗೊಳಿಸುತ್ತಿರುವ ಕಾಂಗ್ರೆಸ್ ಮೂರನೇ ಪಟ್ಟಿ ರಿಲೀಸ್ ಮಾಡಿದ್ದು, 43 ಮಂದಿ ಟಿಕೆಟ್ ಗಿಟ್ಟಿಸಿಕೊಂಡರೆ ತೆರದಾಳದಿಂದ ಸಿದ್ದು ಬಣದ ಉಮಾಶ್ರೀಗೆ ಟಿಕೆಟ್ ಕೈ ತಪ್ಪಿದೆ. ಉಳಿದಂತೆ ಅರಸಿಕೆರೆಗೆ ಕೆಎಂ ಶಿವಲಿಂಗೇಗೌಡಗೆ ಟಿಕೆಟ್ ಖಾತ್ರಿಯಾಗಿದೆ.
ಮದ್ದೂರಲ್ಲಿ ಎಸ್.ಎಂ ಕೃಷ್ಣಾ ಸಂಬಂಧಿ ಗುರುಚರಣ್ ಕೈ ತಪ್ಪಿದ ಟಿಕೆಟ್ ಕಮಲೂರು ಉದಯ್ ಗೆ ಪಡಲಾಗಿದೆ.
ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಗಂಗಾಧಾರ್ ಗೆ ಮಣೆ.
ಈಗಾಗಲೇ ಜೆಡಿಎಸ್ 2 ಪಟ್ಟಿ, ಬಿಜೆಪಿ 2 ಪಟ್ಟಿ, ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ತಳ ಮಟ್ಟದಲ್ಲಿ ಮಾಹಿತಿ ಸಂಗ್ರಹಿಸಿ ಅಳೆದು ತೂಗಿ ಹಂತ ಹಂತವಾಗಿ ಅಭ್ಯರ್ಥಿಗಳನ್ನು ಫೈನಲ್ ಮಾಡುತ್ತಿರುವ ವರಿಷ್ಠರು.
ಅಥಣಿ ಕ್ಷೇತ್ರದಿಂದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಟಿಕೆಟ್ ಪಡೆದಿದ್ದಾರೆ. ಕೋಲಾರ ಸೀಟು ಕೋತ್ತನೂರು ಜಿ.ಮಂಜುನಾಥ್‌ಗೆ ನೀಡಲಾಗಿದೆ.
ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು…
ಚಿಂತನೆ ಮತ್ತು ಚಿಂತಕರು....... " ಹೃದಯಾಂತರಾಳದಿಂದ ಬರುವ ಮಾತುಗಳು ಹೃದಯವನ್ನು ತಾಕುತ್ತವೆ " ರೂಮಿ........... ಕೃತಕತೆ ಮತ್ತು ಸಹಜತೆಯ ನಡುವಿನ…
ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರನ್ನಾಗಿ ನರಸಿಂಹ ಮೂರ್ತಿ ಅವರನ್ನು ಅಧಿಕೃತವಾಗಿ ನೇಮಕ ಮಾಡಿದ್ದೇವೆ. ಅವರು ಪಕ್ಷಕ್ಕಾಗಿ ಹಗಲಿರುಳು…
ಕನ್ನಡಿಗರು ತಮ್ಮ ಬೆವರ ಗಳಿಕೆಯಿಂದ ನೀಡುವ ಒಂದು ರೂಪಾಯಿ ತೆರಿಗೆಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಹದಿನೈದು ಪೈಸೆ ಮಾತ್ರ ವಾಪಸ್ಸು…
ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಶ್ರವಣಬೆಳಗೊಳದಲ್ಲಿ ಪಾಪಿ ಪುತ್ರನೊಬ್ಬ ಮದುವೆ ಮಾಡಿಸಲಿಲ್ಲವೆಂದು ತಾಯಿಯನ್ನೇ ಕೊಲೆಗೈದಿದ್ದಾನೆ. ಗಂಗಮ್ಮ (65), ಕೊಲೆಯಾದ ಮಹಿಳೆ.…
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವಿ. ಶಾಂತಕುಮಾರ್ ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಕಾಂಗ್ರೆಸ್…