ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಿಬಿಐ ಅನ್ನು “ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್” ಆಗಿ ಬಳಸಿಕೊಂಡ ಕರಾಳ ಇತಿಹಾಸ ದೇಶ ಮರೆತಿಲ್ಲ- ಬಿಜೆಪಿ‌ ಕಿಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ,

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಿಬಿಐ ಅನ್ನು “ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್” ಆಗಿ ಬಳಸಿಕೊಂಡ ಕರಾಳ ಇತಿಹಾಸವನ್ನು ದೇಶ ಮರೆತಿಲ್ಲ. ಸಿಬಿಐಗೆ ಏಳೆಂಟು ಪ್ರಕರಣಗಳನ್ನು ಕೊಟ್ಟೆವು ಎಂದು ಹೇಳುತ್ತೀರಿ, ಆದರೆ ಅರ್ಕಾವತಿ ಲೇಔಟ್ ರೀ-ಡೂ ಹಗರಣ, ಕೆಂಪಣ್ಣ ಆಯೋಗದ ವರದಿ ಏನಾಯಿತು? ಅದನ್ನು ಮುಚ್ಚಿ ಹಾಕಲು ಎಸಿಬಿ ರಚಿಸಿ, ಲೋಕಾಯುಕ್ತದ ಕತ್ತು ಹಿಸುಕಿದ್ದು ಯಾರು? ಎಂದು ಸಿಎಂ ಸಿದ್ದರಾಮಯ್ಯನವರನ್ನು ಕರ್ನಾಟಕ ಬಿಜೆಪಿ ಪ್ರಶ್ನೆ ಮಾಡಿದೆ….

ಬಿಜೆಪಿ ಅಧಿಕಾರದಲ್ಲಿದ್ದಾಗ ಪಾರದರ್ಶಕತೆಗೆ ಆದ್ಯತೆ ನೀಡಿದೆ, ಈಗಿನ ನಿಮ್ಮ ಸರ್ಕಾರಕ್ಕೆ ವಾಲ್ಮೀಕಿ ಹಗರಣ ಮತ್ತು ಮುಡಾ ಹಗರಣಗಳ ತನಿಖೆಗಳಿಂದ ತಮ್ಮ ಕುರ್ಚಿ ಕಳೆದುಕೊಳ್ಳುವ ಸನ್ನಿವೇಶ ಸೃಷ್ಟಿಯಾಗಬಹುದು ಎಂಬ ಭಯ ನಿಮಗೆ ಶುರುವಾಗಿರಬಹುದು! ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಕಿಡಿಕಾರಿದೆ.

ಬಳ್ಳಾರಿಯ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು, ಅದೇ ಜಿಲ್ಲೆಯ ಜನರ ಮತ ಪಡೆದು ಗೆದ್ದ ಜನಪ್ರತಿನಿಧಿಗಳನ್ನು ಗೌರವಿಸುವುದನ್ನು ಕಲಿಯಲಿ. ನ್ಯಾಯಾಲಯದ ಆದೇಶಗಳನ್ನು ಬಿಜೆಪಿ ಮೇಲೆ ಹೊರಿಸುವುದು ಮೂರ್ಖತನ. ಅಂದು ಸಿದ್ದರಾಮಯ್ಯನವರು ಬಳ್ಳಾರಿಯಲ್ಲಿ ಸಭೆಗೆ ಜಾಗ ಸಿಗಲಿಲ್ಲ ಎಂದು ಹಳಹಳಿಸುತ್ತಿದ್ದಾರೆ. ಆದರೆ ಇಂದು ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆ ನಡೆಸದಂತೆ ಅನುಮತಿ ನಿರಾಕರಿಸಿ ನಿಷೇಧಾಜ್ಞೆ ಹೇರುವುದು, ನಮ್ಮ ಕಾರ್ಯಕರ್ತರನ್ನು ಬಂಧಿಸುವುದು ಯಾವ ಪ್ರಜಾಪ್ರಭುತ್ವ? ಇದು ಅಪ್ಪಟ ತುರ್ತು ಪರಿಸ್ಥಿತಿಯ ಮನಸ್ಥಿತಿಯಲ್ಲದೆ ಮತ್ತೇನು? ಎಂದು ಪ್ರಶ್ನೆ ಮಾಡಿದೆ….

ಸಂವಿಧಾನದ ಹೆಸರಿನಲ್ಲಿ ಅಧಿವೇಶನ ಕರೆದು, ಅಲ್ಲಿ ಕೇವಲ ಕೇಂದ್ರ ಸರ್ಕಾರವನ್ನು ದೂಷಿಸಲು ಮತ್ತು ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳಲು ಸಮಯ ವ್ಯರ್ಥ ಮಾಡುತ್ತಿರುವುದು ಸಂವಿಧಾನಕ್ಕೆ ಮಾಡುವ ಅಪಚಾರ. ಜನರ ಜ್ವಲಂತ ಸಮಸ್ಯೆಗಳಾದ ಬರಗಾಲ, ರೈತರ ಆತ್ಮಹತ್ಯೆ, ಅಭಿವೃದ್ಧಿ ಕಾರ್ಯಗಳು ಮತ್ತು ಮೂಲಸೌಕರ್ಯದ ಬಗ್ಗೆ ಚರ್ಚಿಸಲು ನಿಮಗೆ ಪುರುಸೊತ್ತಿಲ್ಲ. ಕೇವಲ ರಾಜಕೀಯ ಪ್ರಹಸನಕ್ಕಾಗಿ ವಿಶೇಷ ಅಧಿವೇಶನ ಮಾಡುವುದೇ ನಿಮ್ಮ ಕಾಯಕ ಎನ್ನುವುದನ್ನು ನಾಡಿನ ಜನಸಾಮಾನ್ಯರೇ ಹೇಳುತ್ತಿದ್ದಾರೆ ಎಂದು ಹೇಳಿದೆ…

ಮನರೇಗಾ ಅಥವಾ ಯಾವುದೇ ಯೋಜನೆಯನ್ನು ಬಿಜೆಪಿಗರು ಹಾಳು ಮಾಡುತ್ತಿಲ್ಲ, ಬದಲಾಗಿ ಅದರಲ್ಲಿರುವ ಭ್ರಷ್ಟಾಚಾರವನ್ನು ತಡೆದು ನೇರವಾಗಿ ಫಲಾನುಭವಿಗಳಿಗೆ ತಲುಪಿಸುತ್ತಿದೆ. ಕಾಂಗ್ರೆಸ್ ಕೇವಲ ಘೋಷಣೆಗಳಿಗೆ ಸೀಮಿತವಾಗಿತ್ತು ಎಂದು ತಿಳಿಸಿದೆ…

ಮೋದಿ ಸರ್ಕಾರವು ವಿಕಸಿತ ಭಾರತದ ಮೂಲಕ ದೇಶದ ಕಟ್ಟಕಡೆಯ ವ್ಯಕ್ತಿಗೂ ಉದ್ಯೋಗ ಮತ್ತು ಭದ್ರತೆ ನೀಡುತ್ತಿದೆ. ಇದನ್ನು ಸಹಿಸಲಾಗದೆ ಕಾಂಗ್ರೆಸ್ಸಿಗರು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಕೇವಲ ಯೋಜನೆಯ ಹೆಸರು ಬದಲಾವಣೆಯಲ್ಲ, ಹಣೆಬರಹವೇ ಬದಲಾಗಿದೆ. ಶ್ರಮಿಕ ಕಾರ್ಮಿಕರ ಬದುಕು ಬದಲಿಸುವ ಭರವಸೆಯ ಬೆಳಕಾಗಿದೆ ಎಂದು ಹೇಳಿದೆ..

ಸಿದ್ದರಾಮಯ್ಯನವರೇ, ಕುರ್ಚಿ ಉಳಿಸಿಕೊಳ್ಳಲು ಸಂವಿಧಾನದ ಹೆಸರಿನಲ್ಲಿ ನಾಟಕವಾಡುವುದನ್ನು ನಿಲ್ಲಿಸಿ, ನಿಮ್ಮ ಆಡಳಿತದಲ್ಲಿ ರಾಜ್ಯದ ಬೊಕ್ಕಸ ಬರಿದಾಗಿ, ಜನಪರ ಅಭಿವೃದ್ಧಿ ಶೂನ್ಯವಾಗಿದೆ. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದು ನಿಮ್ಮ ಅಸಮರ್ಥತೆಯ ಪರಮಾವಧಿ. ಜನರ ತೆರಿಗೆ ಹಣವನ್ನು ಹಗರಣಗಳಿಗೆ ಬಲಿ ಕೊಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದೆ…

ಅಭಿವೃದ್ಧಿ ಮರೆತು ಗೂಂಡಾಗಿರಿ ಮತ್ತು ಭ್ರಷ್ಟಾಚಾರಕ್ಕೆ ಮಣೆ ಹಾಕುತ್ತಿರುವ ನೀವು, ಅಧಿಕಾರದಲ್ಲಿರಲು ಲಾಯಕ್ಕಿಲ್ಲ. ಆಡಳಿತ ವೈಫಲ್ಯ ಒಪ್ಪಿಕೊಂಡು ತಕ್ಷಣ ರಾಜೀನಾಮೆ ನೀಡಿ ಅಧಿಕಾರದಿಂದ ತೊಲಗುವುದೇ ರಾಜ್ಯದ ಜನತೆಗೆ ನೀವು ಮಾಡುವ ದೊಡ್ಡ ಉಪಕಾರ ಎಂದು ಹೇಳಿದೆ….

Ramesh Babu

Journalist

Recent Posts

ಕುಡಿಯುವ ನೀರು ಸಮಸ್ಯೆಗೆ ಸಹಾಯವಾಣಿ ಆರಂಭ: ದೂರವಾಣಿ ಸಂಖ್ಯೆ ಇಲ್ಲಿದೆ ನೋಡಿ

ಬೇಸಿಗೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಸಾರ್ವಜನಿಕರು ಸಹಾಯವಾಣಿಗೆ…

27 minutes ago

ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯ-‌ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಕಲಾವತಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಯೂರಿಯಾ ರಸಗೊಬ್ಬರ ಖರೀದಿಸಲು ಇನ್ನು ಮುಂದೆ ಫಾರ್ಮರ್ ಐಡಿ (ಎಫ್ಐಡಿ) ಸಂಖ್ಯೆ ಹೊಂದಿರುವುದು ಕಡ್ಡಾಯ…

36 minutes ago

ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

2026-27ನೇ ಸಾಲಿಗೆ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿಗೆ(ಆಂಗ್ಲ ಮಾಧ್ಯಮ) ಸೇರ ಬಯಸುವ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಆನ್ಲೈನ್…

3 hours ago

ಡಾ|| ಬಿ.ಆರ್. ಅಂಬೇಡ್ಕರ್‌ ಅವರ 135ನೇ ಜನ್ಮ ದಿನಾಚರಣೆ: ಮಾದಿಗ ಮಹಾಸಭಾ ವತಿಯಿಂದ ಬೈಕ್ ರ್ಯಾಲಿ, ಬಾಬಾ ಸಾಹೇಬರಿಗೆ ಮಾಲಾರ್ಪಣೆ

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್‌ ಅವರ 135ನೇ ಜನ್ಮ ದಿನಾಚರಣೆ ಅಂಗವಾಗಿ ಮಾದಿಗ ಮಹಾಸಭಾ ವತಿಯಿಂದ…

4 hours ago

ಕ್ಯಾಂಟರ್ ಮತ್ತು ಕಾರಿನ ನಡುವೆ ಅಪಘಾತ: ಸ್ನೇಹಿತರ ಜೊತೆಯಲ್ಲಿ ದೇವಾಲಯಕ್ಕೆ ಹೊರಟಿದ್ದ ಯುವಕ ಸಾವು

ಕ್ಯಾಂಟರ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಸ್ನೇಹಿತರ ಜೊತೆಯಲ್ಲಿ ದೇವಾಲಯಕ್ಕೆ ಹೊರಟಿದ್ದ ಯುವಕ ಸಾವನ್ನಪ್ಪಿದ್ದಾನೆ. ಹನುಮಂತ (17) ಮೃತ…

6 hours ago

2100 ಎಕರೆ ಭೂ ಸ್ವಾಧೀನ ಕೈಬಿಡಬೇಕು- ತಪ್ಪು ಸರ್ವೇ ವರದಿ ನೀಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸಿಎಂಗೆ ಶಾಸಕ ಧೀರಜ್ ಮುನಿರಾಜ್ ಮನವಿ

ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯ ಚಿಕ್ಕಬೆಳವಂಗಲ, ಸೊನ್ನೇನಹಳ್ಳಿ, ರಾಂಪುರ, ನಾರನಹಳ್ಳಿ ಗ್ರಾಮಗಳಲ್ಲಿ ಸುಮಾರು 2100 ಎಕರೆ ಕೃಷಿ ಭೂಮಿಯನ್ನು…

7 hours ago