Categories: ಕೋಲಾರ

ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಅಸ್ತಿತ್ವಕ್ಕೆ- ಎಸ್ ಚೌಡಪ್ಪ

ಕೋಲಾರ: ಶಿಕ್ಷಣ ಇಲಾಖೆಯ ವಿವಿಧ ವಿಭಾಗಗಳಲ್ಲಿನ ಶಿಕ್ಷಕರು, ಕಚೇರಿಯ ಸಿಬ್ಬಂದಿ, ಅಧಿಕಾರಿ ವರ್ಗ, ಶಾಲಾ ಶಿಕ್ಷಣ ಇಲಾಖೆಯ ವಿವಿಧ ವೃಂದಗಳಲ್ಲಿ ಖಾಯಂ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ, ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ವಸತಿ ಶಿಕ್ಷಣ ಸಂಸ್ಥೆಗಳು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಕಛೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಖಾಯಂ ನೌಕರರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ರಾಜ್ಯ ಮಟ್ಟದಲ್ಲಿ ಶಿಕ್ಷಣ ಇಲಾಖೆಯ ನೌಕರರ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘದ ನೂತನ ರಾಜ್ಯ ಅಧ್ಯಕ್ಷ ಎಸ್ ಚೌಡಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಶಿಕ್ಷಣ ಇಲಾಖೆಯ ಎಲ್ಲಾ ಖಾಯಂ ನೌಕರರನ್ನು ಒಂದೇ ವೇದಿಕೆಗೆ ತಂದು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸೂಕ್ತವಾದ ಮಾರ್ಗವಾಗಿದೆ ಅನೇಕ ಶಿಕ್ಷಣ ತಜ್ಞರು, ಹಿರಿಯರು, ಮತ್ತು ವೃತ್ತಿ ಬಾಂಧವರ ಅಭಿಪ್ರಾಯದಂತೆ ಒಂದು ವರ್ಷದಿಂದ ಅನೇಕ ಸಭೆಗಳು ಮಾಡಿ ಸಾಧಕ ಬಾಧಕಗಳನ್ನು ಚರ್ಚಿಸಿ ಬೆಂಗಳೂರಿನಲ್ಲಿ ರಾಜ್ಯಾದ್ಯಂತ ಸುಮಾರು 200 ಕ್ಕೂ ಹೆಚ್ಚು ಶಿಕ್ಷಣ ಇಲಾಖೆಯ ನೌಕರರು ಸಭೆ ಮಾಡಿ ಸಭೆಯಲ್ಲಿ ಒಮ್ಮತದ ಅಭಿಪ್ರಾಯದ ಮೇರೆಗೆ ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಖಾಯಂ ನೌಕರರನ್ನು ಒಳಗೊಂಡಂತೆ ನೂತನ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಸಂಘದ ಬೈಲಾದಂತೆ ಸಂಘದಲ್ಲಿ ಮಹಿಳಾ ನೌಕರರಿಗೂ 30% ಪ್ರಾತಿನಿಧ್ಯ ನೀಡಲಾಗಿದೆ ಎಂದು ಎಸ್.ಚೌಡಪ್ಪ ತಿಳಿಸಿದರು.

ರಾಜ್ಯ ಮಟ್ಟದಲ್ಲಿ ಕೇಂದ್ರ ಸಂಘವು ನಿರ್ದಿಷ್ಟವಾದ ಬೈಲಾದೊಂದಿಗೆ ರಾಜ್ಯ ಸಮಿತಿ ರಚನೆಗೊಂಡಿದ್ದು ರಾಜ್ಯ ಸಮಿತಿಯ ನಿರ್ದೇಶನದಂತೆ ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಶಾಖೆಗಳನ್ನು ಹಾಗೂ ತಾಲೂಕು ಮಟ್ಟದಲ್ಲಿ ತಾಲೂಕು ಶಾಖೆಗಳನ್ನು ರಚಿಸಲು ಕಾರ್ಯಯೋಜನೆ ರೂಪಿಸಲಾಯಿತು ಈ ಸಂಘವು ಶಿಕ್ಷಣ ಇಲಾಖೆಯಲ್ಲಿ ವೃತ್ತಿಯನ್ನು ಮಾಡುತ್ತಿರುವ ಪ್ರತಿಯೊಬ್ಬರಿಗೂ ಮಾಹಿತಿ ಕಣಜವಾಗಲಿದೆ ಇಲಾಖಾ ಆದೇಶಗಳು ನಿತ್ಯ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ವಿಚಾರಗಳನ್ನು ನೀಡಿ ಶಿಕ್ಷಣ ನೀಡುವವರ ಸರ್ವಾಂಗೀಣ ಅಭಿವೃದ್ಧಿಗೆ ವೇದಿಕೆಯಾಗಲಿದೆ. ಸಂಘದ ವತಿಯಿಂದಲ್ಲೇ ಶಿಕ್ಷಕರಿಗೆ ಸಿಬ್ಬಂದಿಗೆ ಹಾಗೂ ಅಧಿಕಾರಿಗಳಿಗೆ ಉಪಯುಕ್ತವಾಗುವ ಮಾಹಿತಿಯೊಂದಿಗೆ ಸಿದ್ದಪಡಿಸಿ ನೀಡಲಾಗುತ್ತದೆ ಎಂದರು.

ಸಂಘಕ್ಕೆ ರಾಜ್ಯದ್ಯಂತಹ ಈಗಾಗಲೇ ಉತ್ತಮ ಸ್ಪಂದನೆ ಸಿಗುತ್ತಿದ್ದು ಬಹುತೇಕ ನೌಕರರ ನಿರೀಕ್ಷೆಯ ಮೇರೆಗೆ ರಾಜ್ಯಾದ್ಯಂತ ಸಂಘಟನೆಯನ್ನು ಮಾಡಿ ಸರ್ಕಾರಿ ನೌಕರರ ಸಂಘ ಹಾಗೂ ಇಲಾಖೆಯ ವಿವಿಧ ವೃಂದ ಸಂಘಗಳೊಂದಿಗೆ ಸಮನ್ವಯತೆ ಕಾಪಾಡಿಕೊಂಡು ಶಿಕ್ಷಣ ಇಲಾಖೆಯ ನೌಕರರ ಒಗ್ಗಟ್ಟಿನಿಂದ
ಶಿಕ್ಷಣ ನೀಡುತ್ತಿರುವವರಲ್ಲಿ ಗೊಂದಲಗಳನ್ನು ನಿವಾರಿಸಲಾಗುತ್ತದೆ ಪ್ರಾಥಮಿಕ ಶಾಲೆಯ ಶಿಕ್ಷಕರಿಂದ ಪ್ರಾರಂಭಗೊಂಡು ಆಯುಕ್ತರ ಕಚೇರಿ ತನಕ ಎಲ್ಲಾ ನೌಕರ, ಶಿಕ್ಷಕ ಉಪನ್ಯಾಸಕರನ್ನು ಒಂದಡೆ ಸೇರಿಸಲು ಹಲವು ಪ್ರಾಯೋಗಿಕ ವಿಚಾರಗಳನ್ನು ಕೈಗೊಳ್ಳಲಾಗಿದೆ ಹಲವು ಹಂತದ ಚರ್ಚೆಗಳು ವಿಮರ್ಶೆಗಳು ನಡೆದಿವೆ ರಾಜ್ಯಮಟ್ಟದ ವಿಚಾರವಂತರ ಜ್ಞಾನವಂತರ ಸಾಂಗಿತ್ಯ ಹಾಗೂ ಮಾರ್ಗದರ್ಶನ ನೈತಿಕ ಬೆಂಬಲ ಇರುವುದರಿಂದ ಸಂಘಟನೆಯನ್ನು ಸ್ಥಿರಸ್ಥಾಯಿಗೊಳಿಸಲು ಸಕಲ ಸಿದ್ಧತೆ ಮಾಡಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘವನ್ನು ರಚಿಸಿ ಸದರಿ ಸಂಘಕ್ಕೆ ಸೂಕ್ತವಾದ ಬೈಲಾವನ್ನು ರಚಿಸಿ ಬೈಲಾ ನಿಯಮದಂತೆ ನೂತನ ರಾಜ್ಯಾಧ್ಯಕ್ಷರಾಗಿ ಕೋಲಾರ ಜಿಲ್ಲೆಯ ಎಸ್.ಚೌಡಪ್ಪ, ಕಾರ್ಯಾಧ್ಯಕ್ಷರಾಗಿ ಮೈಸೂರು ಕಿರಣ್ ರಘುಪತಿ, ಪ್ರಧಾನ ಕಾರ್ಯದರ್ಶಿಯಾಗಿ ಬೆಂಗಳೂರು ದಕ್ಷಿಣ ರವಿ ಪ್ರಕಾಶ್ ಎಂ.ಎಸ್, ಖಜಾಂಚಿಯಾಗಿ ಬಾಗಲಕೋಟೆ ಸಂತೋಷ್, ಎಸ್ ಪಟ್ಟಣಶೆಟ್ಟಿ ಹಿರಿಯ ಉಪಾಧ್ಯಕ್ಷರಾಗಿ ಕಲಬುರ್ಗಿ ಈರನಗೌಡ ಕೆ ಪಾಟೀಲ್, ಮಹಿಳಾ ಹಿರಿಯ ಉಪಾಧ್ಯಕ್ಷರಾಗಿ ಕೋಲಾರ ಕವಿತ ಬಿ.ಎ, ಉಪಾಧ್ಯಕ್ಷರಾಗಿ ಉಡುಪಿ ರಾಜಾರಾಮ್ ಶೆಟ್ಟಿ, ಕಾರ್ಯದರ್ಶಿಗಳಾಗಿ ಬೆಂಗಳೂರು ಆಯುಕ್ತರ ಕಚೆರಿಯ ನವೀನ್ ಕುಮಾರ್, ದಕ್ಷಿಣ ಕನ್ನಡ ತ್ಯಾಗಮ್ ಹರೇಕಳ, ಜಂಟಿ ಕಾರ್ಯದರ್ಶಿಯಾಗಿ ದಾವಣಗೆರೆ ಶೈಲಾ ಎಸ್, ಸಂಘಟನಾ ಕಾರ್ಯದರ್ಶಿಯಾಗಿ ಕೋಲಾರ ಜಿಲ್ಲೆ ಮನೋಹರ್ ಆರ್ ರವರನ್ನು ಪ್ರಾದೇಶಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯದಡಿಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಿ ಉಳಿದ ಪದಾಧಿಕಾರಿಗಳನ್ನು ಬೈಲಾ ನಿಯಮಾನುಸಾರ ರಾಜ್ಯಾಧ್ಯಕ್ಷರು ನೇಮಕ ಮಾಡಲು ಸಭೆಯಲ್ಲಿ ತೀರ್ಮಾನಿಸಿತು.

ಸಭೆಯಲ್ಲಿ ಬಿ.ಎ ಕವಿತ, ಮನೋಹರ್, ವೇಣುಗೋಪಾಲ್, ಮುನಿರಾಮಯ್ಯ ಬಿ.ಎಂ, ಮಂಜುಳ, ಜಯಂತಿ, ಸತೀಶ್ ಕುಮಾರ್, ಕೃಷ್ಣಪ್ಪ, ನಾಗರಾಜ್, ಶ್ರೀನಿವಾಸ್, ಮುಂತಾದವರು ಇದ್ದರು.

Ramesh Babu

Journalist

Recent Posts

ಮಾರ್ಖಂಡೇಯ ಜಲಾಶಯದ ನೀರು ಪೋಲು ತಡೆಗೆ ಚಲುವರಾಯಸ್ವಾಮಿ ಖಡಕ್ ಸೂಚನೆ

ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ…

5 hours ago

ಪೊಲೀಸರೆಂದು ನಂಬಿಸಿ ವೃದ್ಧ ದಂಪತಿಗೆ ಚಿನ್ನಾಭರಣ ವಂಚನೆ: ಇಬ್ಬರು ಆರೋಪಿಗಳು ವಶಕ್ಕೆ: ದೂರುದಾರರಿಗೆ ಚಿನ್ನಾಭರಣ ಹಸ್ತಾಂತರ

ದೊಡ್ಡಬಳ್ಳಾಪುರ: ಪೊಲೀಸರೆಂದು ಪರಿಚಯಿಸಿಕೊಂಡು ವೃದ್ಧ ದಂಪತಿಯನ್ನು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು…

9 hours ago

ಮಳೆ ಕೊರತೆ; ಮತ್ಸ್ಯ ಕೃಷಿಗೂ ಹೊಡೆತ!

ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ…

12 hours ago

ಬರಿದಾಗುತ್ತಿರುವ ಕರ್ನಾಟಕದ ಖಜಾನೆ…….

ಬರಿದಾಗುತ್ತಿರುವ ಕರ್ನಾಟಕದ ಖಜಾನೆ....... ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ...... ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ…

15 hours ago

ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…

1 day ago

ನೇಯ್ಗೆ ಉದ್ಯಮದ ಕಚ್ಚಾ ವಸ್ತುಗಳ ಬೆಲೆ ಏರಿಕೆಗೆ ಖಂಡನೆ: ನೇಕಾರ ಹೋರಾಟ ಸಮಿತಿಯಿಂದ ಪ್ರತಿಭಟನೆ

ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…

1 day ago