ಕತ್ತಲಾಗ್ತಿದ್ದಂತೆ ಈ ಗ್ರಾಮದ ಮಹಿಳೆಯರಿಗೆ ಆವರಿಸುತ್ತೆ ಆತಂಕ: ರಾತ್ರೀ ವೇಳೆ ಒಂಟಿಯಾಗಿ ಮಹಿಳೆ‌ ಮನೆಯಿಂದ ಹೊರ ಬಂದರೆ‌ ಸಾಕು ಆಗಬಾರದ ಅನಾಹುತ ಆಗುತ್ತದೆ..

ಹಳ್ಳಿಗಳಲ್ಲಿ ಸಾಮನ್ಯವಾಗಿ ಮನೆಯಲ್ಲಿಯೇ ಶೌಚಾಲಯ ವ್ಯವಸ್ಥೆ ಇರುವುದಿಲ್ಲ. ಮನೆಯ ಹೊರಗೆ ಶೌಚಾಲಯವನ್ನು‌ ನಿರ್ಮಿಸಿರುತ್ತಾರೆ. ರಾತ್ರಿ ವೇಳೆ ಶೌಚಾಲಯಕ್ಕೆಂದು ಮಹಿಳೆಯರು ಒಂಟಿಯಾಗಿ ಹೊರ ಬಂದರೆ ಸಾಕು ಆಗಬಾರದ ಅನಾಹುತ ನಡೆದೇ ಹೋಗುತ್ತದೆ. ಎಲ್ಲಿ ಅಂತೀರಾ ಈ ಸ್ಟೋರಿ ಓದಿ….

ಹಳ್ಳಿ ಜನರು ಸಾಮಾನ್ಯವಾಗಿ ಮುಗ್ಧರು. ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು, ರಾತ್ರಿ ವೇಳೆ ಗ್ರಾಮಕ್ಕೆ ಒಳನುಸುಳಿ ಮನೆ ಬಾಗಿಲುಗಳನ್ನ ಬಡಿದು ಎಸ್ಕೇಪ್ ಆಗೋದು, ಅವಕಾಶ‌ ಸಿಕ್ಕರೆ ಕಳ್ಳತನ ಮಾಡೋದು ಹೀಗೆ ಹಳ್ಳಿ ಜನರಿಗೆ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಕತ್ತಲಾದರೆ ಸಾಕು ಮಹಿಳೆಯರು ಮನೆಯಿಂದ ಹೊರಗಡೆ ಬರಲು ಎದುರುವಂತಾಗಿದೆ. ಅದು ಯಾಕೆ ಅನ್ನೂದನ್ನ ಈ‌ ಸ್ಟೋರಿ ಓದಿ….

ಗ್ರಾಮದ ಮಹಿಳೆಯರ ಮುಖದಲ್ಲಿ ಆತಂಕ ಮನೆ ಮಾಡಿದ್ರೆ, ಗ್ರಾಮದ ಹೊರ ವಲಯದಲ್ಲೆ ಬೈಕ್ ವೊಂದು ಮುಂದಿನ ಚಕ್ರವಿಲ್ಲದೆ ಅನಾಥವಾಗಿ ನಿಂತಿದೆ. ಯಾರೋ ಪಂಚರ್ ಆಗಿರುವುದಕ್ಕೆ ಬಿಟ್ಟು ಹೋಗಿರಬೇಕು ಅಂತ ಅಂದುಕೊಂಡ ಅಕ್ಕ ಪಕ್ಕದ ಗ್ರಾಮಸ್ಥರಿಗೆ ಬೈಕ್ ನಲ್ಲಿ ಬಂದು ಖದೀಮರು ಮಾಡ್ತಿದ್ದ ಕೆಲಸವನ್ನ ಕಂಡು ಒಂದು ಕ್ಷಣ ಶಾಕ್ ಆಗಿದ್ದಾರೆ. ಇನ್ನೂ ಈ ಬೈಕ್ ನಲ್ಲಿ ಬಂದ ಆ ಕಿಡಿಗೇಡಿಗಳು ಮಾಡಿದ ಆ ಕೆಲಸವಾದ್ರು ಏನು..

ಕತ್ತಲಾಗ್ತಿದ್ದಂತೆ ಗ್ರಾಮದಲ್ಲಿ ಕಿಡಿಗೇಡಿಗಳ ಅಟ್ಟಹಾಸ

ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಸಮೀಪದ ನರಗನಹಳ್ಳಿ ಅನ್ನೂ ಈ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಪುಂಡರ ಹಾವಳಿ ಹೆಚ್ಚಾಗಿದೆ. ದಿನಪೂರ್ತಿ ಹೊಲದಲ್ಲಿ ಕೆಲಸ, ಜಾನುವಾರುಗಳ ಹಾರೈಕೆ ಅಂತ ಕೆಲಸ ಮಾಡಿ ಮನೆಗೆ ಬರುವ ಜನರು ನಿದ್ದೆಗೆ ಜಾರ್ತಿದ್ದಂತೆ ಮನೆ ಬಳಿಗೆ ಬರುವ ಪುಂಡರು ಮನೆ ಬಾಗಿಲುಗಳನ್ನ ಹೊಡೆದು ಎಸ್ಕೇಪ್ ಆಗ್ತಿದ್ದಾರಂತೆ. ತಡರಾತ್ರಿ ಶೌಚಾಲಯಕ್ಕೆ ಹೋಗೋಕ್ಕೆ ಅಂತ ಮನೆಯಿಂದ ಹೊರಗಡೆ ಬಂದಿದ್ದ ಮಹಿಳೆಯ ಬಾಯನ್ನ ಹಿಂದಿನಿಂದ ಬಂದ ಕಿಡಿಗೇಡಿಗಳು ಮುಚ್ಚಿಕೊಂಡು ನಿರ್ಜನ ಪ್ರದೇಶಕ್ಕೆ ಎಳೆದೋಯ್ದು ಮಹಿಳೆಯ ಸರಗಳ್ಳತನಕ್ಕೆ ಯತ್ನಿಸಿದ್ದಾರೆ. ಆದ್ರೆ ಈ ವೇಳೆ ಮಹಿಳೆ ಸರಗಳ್ಳತನ ಮಾಡಲು ಬಿಡದಿದಕ್ಕೆ ಆಕೆಯ ಮೇಲೆ ಹಲ್ಲೆ ನಡೆಸಿದ ಖದೀಮರು ನಂತರ ಆಕೆಯ ಬಟ್ಟೆಗಳನ್ನ ಹರಿದು ಪ್ರಜ್ಞೆ ತಪ್ಪಿಸಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ನಿರ್ಜನ ಪ್ರದೇಶದಲ್ಲಿ ಪ್ರಜ್ಞಾಹೀನವಾಗಿ ಬಿದ್ದಿದ್ದ ಮಹಿಳೆಯನ್ನ ಕುಟುಂಬಸ್ಥರು ಆಸ್ವತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು ನಂತರ ಕಿಡಿಗೇಡಿಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆದ್ರೆ ಗ್ರಾಮದಲ್ಲಿ ರಾತ್ರಿ ವೇಳೆ ಬೀದಿ ದೀಪಗಳಿಲ್ಲದ ಕಾರಣ ಅಪರಿಚಿತರು ಯಾರು ಅನ್ನೋದು ಗೊತ್ತಾಗದಿದ್ದು ಗ್ರಾಮಸ್ಥರು ರಾತ್ರಿ ವೇಳೆ ಗ್ರಾಮದಲ್ಲಿ ಬಾಗಿಲು ಬಡಿಯುವ ಖದೀಮರ ಎಡೆಮುರಿಕಟ್ಟುವವರನ್ನ ಹಿಡಿಯಲು ಮುಂದಾಗಿದ್ದಾರೆ. ಹೀಗಾಗಿ ಕಳೆದ ರಾತ್ರಿ ಗ್ರಾಮಕ್ಕೆ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಬಾಗಿಲು ಬಡಿಯುತ್ತಿದ್ದಂತೆ ಹಿಡಿಯಲು ಮುಂದಾಗಿದ್ದು ಬೈಕ್ ಅನ್ನ ಗ್ರಾಮದಲ್ಲೆ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಇನ್ನೂ ಆರೋಪಿಗಳು ತಂದಿದ್ದ ಬೈಕ್ ನ ಒಂದು ವೀಲ್ ಅನ್ನ ಮುರಿದು ಹಾಕಿದ ಗ್ರಾಮಸ್ಥರು ಬೈಕ್ ಸಮೇತ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿ ದೂರು ನೀಡಿದ್ದಾರೆ.

ಒಟ್ಟಾರೆ ರಾತ್ರಿಯಾಗ್ತಿದ್ದಂತೆ ಗ್ರಾಮಕ್ಕೆ ಎಂಟ್ರಿಕೊಡುವ ಕಿಡಿಗೇಡಿಗಳು ಮಾಡ್ತಿರುವ ಪುಂಡಾಟಿಕೆಗೆ ಮಹಿಳೆಯರು ಸೇರಿದಂತೆ ಪುರುಷರು ಸಹ ಬೆಚ್ಚಿ ಬಿದ್ದಿದ್ದಾರೆ. ಇನ್ನೂ ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಗ್ರಾಮಸ್ಥರು ದೂರು ನೀಡಿದ್ದು, ಪೊಲೀಸರು ಪುಂಡರ ಎಡೆಮುರಿಕಟ್ಟುವ ಮೂಲಕ ಗ್ರಾಮಸ್ಥರ ಆತಂಕ ದೂರ ಮಾಡುವ ಕೆಲಸ ಮಾಡಬೇಕಿದೆ.

Ramesh Babu

Journalist

Recent Posts

ಚಿನ್ನಸ್ವಾಮಿ ಕ್ರೀಡಾಂಗಣದ ಕ್ಯಾಂಟೀನ್ ನೌಕರನ ಬಳಿ 100 ಐಪಿಎಲ್ ಟಿಕೆಟ್ ಪತ್ತೆ

ಚಿನ್ನಸ್ವಾಮಿ ಕ್ರೀಡಾಂಗಣದ ಕ್ಯಾಂಟೀನ್ ನೌಕರನ ಬಳಿ 100 ಐಪಿಎಲ್ ಟಿಕೆಟ್ ಪತ್ತೆಯಾಗಿದೆ. ಕ್ಯಾಂಟೀನ್ ನೌಕರ 100ಕ್ಕೂ ಹೆಚ್ಚು ಐಪಿಎಲ್ ಟಿಕೆಟ್‌ಗಳನ್ನು…

1 hour ago

ಲವ್ ಜಿಹಾದ್ ಮತ್ತೊಮ್ಮೆ ಇಡೀ ದೇಶಾದ್ಯಂತ ಮಾಧ್ಯಮಗಳಲ್ಲಿ ಚರ್ಚೆ

ಲವ್ ಜಿಹಾದ್....... ಪ್ರೀತಿ - ಪ್ರೇಮದ ಧರ್ಮ ಯುದ್ಧ..... ಒಂದು ಆತ್ಮಾವಲೋಕನ,..... ನಿಜ ಪ್ರೀತಿಯನ್ನು ಅನುಮಾನದಿಂದ ನೋಡುವ ಅತ್ಯಂತ ಕೆಟ್ಟ,…

9 hours ago

ಪ್ರಸ್ತುತ 114 ತಾಲೂಕುಗಳ 598 ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ- ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ, ಜಾನುವಾರುಗಳ…

20 hours ago

LKG, UKG ತರಗತಿಗಳಿಗೆ ಉಚಿತ ಪ್ರವೇಶ ಪಡೆಯಲು ಅರ್ಜಿ ಆಹ್ವಾನ

2026-27ನೇ ಶೈಕ್ಷಣಿಕ ಸಾಲಿಗೆ ಅಲ್ಪಸಂಖ್ಯಾತರ ನಿದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು (ವಿಜಯಪುರ) ದಲ್ಲಿ ಕಾರ್ಯನಿರ್ವಹಿಸುತ್ತಿರುವ…

22 hours ago

ಏ.19ಕ್ಕೆ ಸಾಸಲು ಚಿನ್ನಮ್ಮ ಉತ್ಸವ-2026

ಸಾಸಲು ಚಿನ್ನಮ್ಮ ಉತ್ಸವ ಸಮಿತಿ ವತಿಯಿಂದ ಸಾಸಲು ಚಿನ್ನಮ್ಮ ಉತ್ಸವ-2026 ಕಾರ್ಯಕ್ರಮವನ್ನು ಏ.19ರ ಭಾನುವಾರದಂದು ತಾಲೂಕಿನ ಸಾಸಲು ಗ್ರಾಮದ ಡಾ.ಬಿ.ಆರ್…

1 day ago

ಇಸ್ರೇಲ್ ಮತ್ತು ಬೆಂಜಮಿನ್ ನೆತನ್ಯಾಹು……

ಶೌರ್ಯ, ಕ್ರೌರ್ಯ, ಆದರ್ಶ ಮತ್ತು ಎಚ್ಚರಿಕೆ....... ಇಸ್ರೇಲ್ ದೇಶದ ದ್ವೇಷದ ಬೆಂಕಿ ತನ್ನ ತಾನು ಸುಡುವುದಲ್ಲದೆ ಇತರರನ್ನೂ ಸುಡುತ್ತಿದೆ..... ಇಸ್ರೇಲ್…

1 day ago