ಸದ್ಯ ಟ್ರೆಂಡಿಂಗ್ ನಲ್ಲಿರೋ ‘ಓ ನಲ್ಲ..ನೀನಲ್ಲ.. ಕರಿಮಣಿ ಮಾಲೀಕ ನೀನಲ್ಲ..’ ಎಂಬ ಹಾಡಿಗೆ ಸೋದರಮಾವನೊಂದಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿದ ಪತ್ನಿಯ ವರ್ತನೆಗೆ ಬೇಸತ್ತು ಪತಿ ನೇಣಿಗೆ ಶರಣಾದ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಿ.ಜಿ.ಪಾಳ್ಯದಲ್ಲಿ ನಡೆದಿದೆ.
ಕುಮಾರ್ (33) ನೇಣಿಗೆ ಶರಣಾದ ವ್ಯಕ್ತಿ.
ಸೋದರ ಮಾವ ಮತ್ತು ಸಹೋದರಿ ಜೊತೆ ಸೇರಿ ‘ಕರಿಮಣಿ ಮಾಲೀಕ ನೀನಲ್ಲ’ ಎಂಬ ಹಾಡಿಗೆ ಪತ್ನಿ ರೂಪಾ ರೀಲ್ಸ್ ಮಾಡಿದ್ದಳು.
ಈ ರೀಲ್ಸ್ ನ್ನ ಕುಮಾರ್ ಗೆಳೆಯರು ಹಾಗೂ ಸಂಭಂಧಿಕರು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿ, ಕುಮಾರ್ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆ ರೀಲ್ಸ್ ಡಿಲೀಟ್ ಮಾಡುವಂತೆ ಪತ್ನಿಗೆ ಕುಮಾರ್ ಮನವಿ ಮಾಡಿದ್ದು, ಪತಿಯ ಮನವಿಗೆ ರೂಪಾ ಕ್ಯಾರೆ ಎಂದಿಲ್ಲ. ಇದರಿಂದ ಮನನೊಂದ ಪತಿ ಕುಮಾರ್ ಮನೆ ಮುಂದಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…
ನಟ ಉಪೇಂದ್ರ ನಟನೆಯ ‘ಉಪೇಂದ್ರ’ ಸಿನಿಮಾದ ‘ಓ ನಲ್ಲ.. ನೀನಲ್ಲ, ಕರಿಮಣಿ ಮಾಲೀಕ ನೀನಲ್ಲ’ ಹಾಡು ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡಿಂಗ್‌ನಲ್ಲಿದೆ. ಎಲ್ಲಿ ಹೋದರು, ಎಲ್ಲಿ ನೋಡಿದರೂ ಈ ಹಾಡು ಕೇಳುವಂತಾಗಿದೆ.
ಜನರು ಕ್ರಿಯೇಟಿವ್ ಆಗಿ ರೀಲ್ಸ್ ಮಾಡಿ ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಆದರೆ ಇದೇ ಸಾಂಗ್ ಇದೀಗ ವ್ಯಕ್ತಿಯೊಬ್ಬನ ಪ್ರಾಣವನ್ನೇ ಕಸಿದುಕೊಂಡಿದೆ.
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…
ಟಿಎಪಿಎಂಸಿಎಸ್ ಚುನಾವಣೆ ಸೋಲಿಗೆ ನಾನೇ ನೇರ ಕಾರಣ. ಸೋಲಿನ ಸಂಪೂರ್ಣ ಜವಾಬ್ದಾರಿ ಶಾಸಕನಾಗಿ ನಾನೇ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಧೀರಜ್…
ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮದಿಂದ ಹೊಲಿಗೆ ಯಂತ್ರ ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಪ್ರವರ್ಗ-3-ಬಿ…