Categories: ಲೇಖನ

ಓದು ಮತ್ತು ಮಾನವೀಯ ಪ್ರಜ್ಞೆ…..

ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತಿದೆಯೇ ?…..

ಈ ರೀತಿಯ ಅನುಮಾನ ಬಲವಾಗುತ್ತಿದೆ.
ಮೂಲ ಆಶಯದಲ್ಲಿ ಓದು ನಮ್ಮ ಅರಿವನ್ನು ಹೆಚ್ಚಿಸಿ ನಮ್ಮಲ್ಲಿ ವಿನಯವನ್ನು ಬೆಳೆಸುತ್ತದೆ.
ತುಂಬಿದ ಕೊಡ ತುಳುಕಲು ಸಾಧ್ಯವಿಲ್ಲ ಮತ್ತು ಅವಕಾಶವೂ ಇಲ್ಲ. ಅದು ನಮ್ಮಲ್ಲಿ ಜೀವಪರ ನಿಲುವನ್ನೂ, ವಿನಯವನ್ನು, ಪ್ರಬುದ್ದತೆಯನ್ನು, ತಾಳ್ಮೆಯನ್ನು ಮತ್ತು ಒಟ್ಟಾರೆ ಸಮಷ್ಟಿ ಪ್ರಜ್ಞೆಯನ್ನು ಬೆಳೆಸುತ್ತದೆ……

ಆದರೆ,
ಅದೇ ಓದು ಬಹಳಷ್ಟು ಜನರಲ್ಲಿ ಅಹಂಕಾರವನ್ನು,
ಸಣ್ಣ ಮನಸ್ಸನ್ನು, ಅಸೂಯಾಪರ ಗುಣವನ್ನು, ಕ್ಷುಲ್ಲಕ ವ್ಯಕ್ತಿತ್ವವನ್ನು ರೂಪಿಸುವ ಸಾಧ್ಯತೆ ಇದೆ.
ನಾನು ಎಲ್ಲರಿಗಿಂತ ಹೆಚ್ಚು ಓದಿದ್ದೇನೆ‌‌. ಎಲ್ಲಾ ಶ್ಲೋಕಗಳು, ಅಧ್ಯಾಯಗಳು, ಮಂತ್ರಗಳು, ಕಾಲಂಗಳು ನನಗೆ ನೆನಪಿದೆ, ನಾನು ಅದನ್ನು ಅತ್ಯಂತ ಸಮರ್ಥವಾಗಿ ನೆನಪಿಟ್ಟು ವಾದಿಸಬಲ್ಲೆ, ನನ್ನ ಸಹವರ್ತಿಗಳಿಗೆ ಆ ಮಟ್ಟದ ನೆನಪು ಮತ್ತು ಜ್ಞಾನ ಇಲ್ಲ, ಅವರ ವಾದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ ಎಂದು ಸಹಜ ಸಾಮಾನ್ಯ ಜನರನ್ನು ಕೀಳಾಗಿ ಕಾಣುವ ಮನೋಭಾವ ಕಂಡುಬರುತ್ತಿದೆ…‌.

ಪ್ರಾರಂಭದ ದಿನಗಳಲ್ಲಿ ಅಕ್ಷರ ಬರದವರನ್ನು, ಅನಂತರ ‌ಸಂಸ್ಕೃತ ಕಲಿಯದವರನ್ನು, ನಂತರ ಇಂಗ್ಲೀಷ್ ಮಾತನಾಡದವರನ್ನು ಬಹಳ ಲಘುವಾಗಿ ಕಾಣಲಾಗುತ್ತಿತ್ತು.
ಈಗ ಹೃದಯದ ಭಾಷೆಗಿಂತ ಮೆದುಳಿನ ಭಾಷೆಗೆ ಹೆಚ್ಚಿನ ಮಹತ್ವ ಕೊಡುತ್ತಿರುವುದು ಕಂಡುಬರುತ್ತಿದೆ……

ಭಗವದ್ಗೀತೆಯ ಶ್ಲೋಕಗಳನ್ನು,
ಖುರಾನಿನ ಅಧ್ಯಾಯಗಳನ್ನು,
ಬೈಬಲ್‌ನ ಸಂದೇಶಗಳನ್ನು,
ಸಾಹಿತ್ಯದ ಪ್ರಕಾರಗಳನ್ನು,
ಭಾಷೆಯ ವ್ಯಾಕರಣವನ್ನು,
ಆರ್ಥಿಕತೆಯ ಸೂಕ್ಷ್ಮತೆಯನ್ನು,
ಧಾರ್ಮಿಕ ಆಚರಣೆಗಳನ್ನು,
ಕಲೆಯ ಹೊಳಹುಗಳೂ ಸೇರಿ ಯಾವುದೇ ಕ್ಷೇತ್ರದ ಜ್ಞಾನದ ಮೇಲೆ ಒಬ್ಬರಿಗೆ ಹೆಚ್ಚಿನ ನಿಯಂತ್ರಣ ಸಾಧ್ಯವಾಗಿದ್ದರೆ ಅದು ಆ ವ್ಯಕ್ತಿಯ ಸರಳ ನಡವಳಿಕೆಗೆ ಕಾರಣವಾಗಿ ಸಾಮಾನ್ಯ ಜನರಿಗೆ ಅದನ್ನು ಅತ್ಯಂತ ವಿನಯದಿಂದ ತಲುಪಿಸುವ ಮತ್ತು
ಜ್ಞಾನ ಕೂಡ ಹರಿಯುವ ನೀರಿನಂತೆ, ಅದು ಸದಾ ಕಾಲ ಚಲಿಸುತ್ತಲೇ ಇರುತ್ತದೆ ಅದು ಶಾಶ್ವತ ಅಲ್ಲ, ಬದಲಾವಣೆ ಆಗುತ್ತಲೇ ಇರುತ್ತದೆ, ಇಂದಿನ ನನ್ನ ಜ್ಞಾನ ಮುಂದೆ ಅಪ್ರಸ್ತುತ ವಾಗಬಹುದು ಎಂಬ ಅರಿವು ಓದುವವರಿಗೆ ಇರಬೇಕಾಗುತ್ತದೆ.
ವರ್ತನೆ ಸಹಜವಾಗಿರಬೇಕೆ ಹೊರತು ವಿಚಿತ್ರವಾಗಿರಬಾರದು…..

ಮತ್ತು ಎಲ್ಲಕ್ಕಿಂತ ಹೆಚ್ಚಾಗಿ,
ವಿಶಾಲ ಮನೋಭಾವದ ಪ್ರೀತಿ ವಿಶ್ವಾಸ ತುಂಬಿದ, ಮಾನವೀಯ ಆಧಾರದ, ಸೌಜನ್ಯದ ನಡವಳಿಕೆ ಅತ್ಯುನ್ನತ ಜ್ಞಾನವೇ ಹೊರತು, ಅಕ್ಷರಗಳ, ಅಧ್ಯಾಯಗಳ, ಪುಟಗಳ , ಶ್ಲೋಕಗಳ, ದಾಖಲೆಗಳ ಜ್ಞಾನ ಕೇವಲ ವಾದ ಪ್ರತಿವಾದಗಳಿಗೆ ಹೊರತು ಸಮಾಜದ ಶಾಂತಿಯ, ನೆಮ್ಮದಿಯ, ಜನರ ಜೀವನಮಟ್ಟ ಸುಧಾರಣೆಯ ದಿಕ್ಕಿನಲ್ಲಿ ಅವುಗಳ ಪಾತ್ರ ಕಡಿಮೆ. ಅದು ಈಗಾಗಲೇ ದೃಢಪಟ್ಟಿದೆ………

ಹೆಚ್ಚಿಗೆ ಓದಿರುವವರನ್ನು, ತಲೆ ಪ್ರತಿಷ್ಠೆಯವರನ್ನು ನೋಡಿದರೆ ನಾವು ನಿರಪರಾಧಿಗಳಾಗಿದ್ದರೂ ಪೋಲೀಸರನ್ನು ಕಂಡರೆ ಭಯವಾಗುವಂತೆ ಭಾಸವಾಗುತ್ತದೆ……

ನಮ್ಮ ದೇಶದಲ್ಲಿ ಸಾಕ್ಷರತೆಯ ಸಂಖ್ಯೆ ಹೆಚ್ಚಾಗುತ್ತಿದ್ದರೂ, ನಿಜವಾದ ಅರಿವಿರುವವರ ಸಂಖ್ಯೆ ತುಂಬಾ ಕಡಿಮೆಯಿದೆ. ಮುಗ್ಧತೆ ಮತ್ತು ಮೌಢ್ಯತೆಯೇ ಬಹಳಷ್ಟು ತುಂಬಿ ತುಳುಕುತ್ತಿದೆ…….

ನಮಗೆ ಸಾಹಿತ್ಯ, ಸಂಗೀತ, ಕಲೆ, ಧಾರ್ಮಿಕತೆ, ವಿಜ್ಞಾನ ಮುಂತಾದ ‌ವಿಷಯಗಳಲ್ಲಿ ಪಾಂಡಿತ್ಯವಿದೆ ಎಂದ ಮಾತ್ರಕ್ಕೆ ಸಾಮಾನ್ಯರಿಗಿಂತ ಭಿನ್ನ ಎಂದು ಭಾವಿಸಿ ಆ ಕಲೆಗಳಲ್ಲಿಯೇ ಸಾಮಾನ್ಯರಿಗೆ ಅರ್ಥವಾಗದ ಅಭಿಪ್ರಾಯ ವ್ಯಕ್ತಪಡಿಸಿದರೆ ನಿಮಗೆ ಪ್ರಶಸ್ತಿಯೂ, ಬಹುಮಾನವೋ, ಅಧಿಕಾರವೋ, ಡಾಕ್ಟರೇಟೋ ಬರಬಹುದು. ಆದರೆ ವಿನಯ, ಮಾನವೀಯತೆ ಇಲ್ಲದಿದ್ದರೆ, ವಿಶಾಲ ಮನೋಭಾವ ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ಪ್ರೀತಿಯ ಗುಣ ಮಾತ್ರ ಈ ಸಮಾಜದ ಒಳ್ಳೆಯ ಬದಲಾವಣೆಗೆ ಕಾರಣವಾಗಬಹುದೇ ಹೊರತು ನಿಮ್ಮ ಅಕ್ಷರ ಜ್ಞಾನ, ಅಹಂಕಾರ, ಸಣ್ಣ ಮನಸ್ಸು, ದ್ವೇಷ ಮನೋಭಾವ ಸಮಾಜಕ್ಕೆ ಮಾರಕ…….

ಬದುಕಿನ ಅನುಭವದ ಸಾಗರದಲ್ಲಿ ಓದು ಒಂದು ಪೂರಕ ಪ್ರಕ್ರಿಯೆಯೇ ಹೊರತು ಓದಿನಿಂದಲೇ ಅನುಭವ ಪಡೆದರೆ ಅದು ಅಜ್ಞಾನದ ಒಣ ರೂಪ ಅಷ್ಟೆ……..

ಸರ್ಕಾರದ, ನ್ಯಾಯಾಲಯಗಳ ರೀತಿಯಲ್ಲಿ ದಾಖಲೆ, ಆಧಾರಗಳು ನಮ್ಮ ಅಭಿಪ್ರಾಯ ರೂಪಿಸದೆ, ನಮ್ಮನ್ನು ನಿಯಂತ್ರಿಸದೆ ಕ್ರಿಯಾತ್ಮಕ ಮನಸ್ಥಿತಿ ನಮ್ಮನ್ನು ಕಾಡಬೇಕು…….
( ಕೆಲವು ಅನಿವಾರ್ಯ ಮತ್ತು ಅಧಿಕೃತ ವಿಷಯಗಳನ್ನು ಹೊರತುಪಡಿಸಿ )……

ಈ ಎಲ್ಲಾ ಅಭಿಪ್ರಾಯ
ನನಗೂ ಅನ್ವಯಿಸುತ್ತದೆ…….
ಧನ್ಯವಾದಗಳು…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಸರ್ಕಾರಿ ಗೋಮಾಳ ಒತ್ತುವರಿ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಪ್ರಕಾರ ಕ್ರಮ: ನಕಲಿ ಭೂದಾಖಲೆ ಸೃಷ್ಟಿ ಹಾಗೂ ಅಕ್ರಮ ಖಾತೆ ಬದಲಾವಣೆ ಕಂಡುಬಂದರೆ ಕಠಿಣ ಕ್ರಮ- ಕಂದಾಯ ಸಚಿವ ಡಾ.ಜಿ ಪರಮೇಶ್ವರ್

ಸಾರ್ವಜನಿಕರ ಕೆಲಸಗಳು ತಾಲೂಕು ಕಚೇರಿಗಳಲ್ಲಿ ಯಾವುದೇ ವಿಳಂಬವಿಲ್ಲದೆ ನಡೆಯಬೇಕು. ಕಂದಾಯ ದಾಖಲೆಗಳ ನಿರ್ವಹಣೆ, ಭೂಮಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಹಾಗೂ…

58 minutes ago

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಾರ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

ಅ.07-10-2026: ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ, ಚೆಕ್‌-ಇನ್ ಬ್ಯಾಗೇಜ್‌ನಲ್ಲಿ ಅಡಗಿಸಿಟ್ಟಿದ್ದ 942 ಗ್ರಾಂ…

5 hours ago

ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಸಚಿವ ಜಿ. ಪರಮೇಶ್ವರ್ ದಿಢೀರ್ ಭೇಟಿ

ದೇವನಹಳ್ಳಿ: ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ…

6 hours ago

ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಬಳಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ರೈಲು ನಿಲ್ದಾಣದ ರೈಲ್ವೆ ಯಾರ್ಡ್‌ನಲ್ಲಿ ರೈಲಿಗೆ ಸಿಲುಕಿ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ…

12 hours ago

ದಸರಾ….

ಮೈಸೂರು ದಸರಾ, ಮಹಿಷಾ ದಸರಾ, ಚಾಮುಂಡಿ ದಸರಾ..... ವಿಜಯ ದಶಮಿ - ಆಯುಧ ಪೂಜೆ..... ದುಷ್ಟ ಶಕ್ತಿಗಳ ವಿರುದ್ಧ ವಿಜಯದ…

12 hours ago

ವೃದ್ಧ ದಂಪತಿಗೆ ‘ವಾತ್ಸಲ್ಯ’ ಮನೆ ಹಸ್ತಾಂತರ

ದೊಡ್ಡಬಳ್ಳಾಪುರ: ತಾಲೂಕಿನ ಮೆಣಸಿ ಗ್ರಾಮದಲ್ಲಿ ವಯೋವೃದ್ಧ ದಂಪತಿ ಕೆಂಪಮ್ಮ ಮತ್ತು ಪಾಪಪಿಲ್ಲಪ್ಪ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ…

1 day ago