Categories: ಲೇಖನ

ಓದು, ಪ್ರವಾಸ ಮತ್ತು ಧ್ಯಾನಸ್ಥ ಮನಸ್ಥಿತಿ……..

ಪ್ರವಾಸ ಕಥನಗಳ ಬಗ್ಗೆ ಬಹಳ ಹಿಂದಿನಿಂದಲೂ ಸಾಕಷ್ಟು ಲೇಖನಗಳನ್ನು ಓದುತ್ತಲೇ ಇರುತ್ತೇನೆ. ಅದು ಪ್ರವಾಸೋದ್ಯಮಕ್ಕಾಗಿಯಲ್ಲ. ಏಕೆಂದರೆ ಪ್ರವಾಸ ವ್ಯಾಪಾರಿಗಳಿಗೆ ಒಂದು ಉದ್ಯಮ. ಆದರೆ ಪ್ರವಾಸಿಗರಿಗೆ ಅದು ಅದ್ಬುತ ಅನುಭವ. ಆ ಪ್ರವಾಸಿಗರು ಕಂಡ ಅನುಭವಗಳನ್ನು ದಾಖಲಿಸುವ ರೀತಿಯನ್ನು ಬಹಳಷ್ಟು ಕುತೂಹಲದಿಂದ ಓದುತ್ತಲೇ ಇರುತ್ತೇನೆ.

ಬಹಳ ಹಿಂದೆ ಭಾರತಕ್ಕೆ ಪ್ರವಾಸ ಬಂದ ಹ್ಯೂಯನ್ ತ್ಸಾಂಗ್, ಪಾಹಿಯಾನ್, ಮೆಗಸ್ತಾನೀಸ್, ಇಬ್ನಾ ಬಟೂಟರಿಂದ ಪ್ರವಾಸಿ ಕಂಡ ವಿಶ್ವ, ಪ್ರವಾಸಿ ಕಂಡ ಭಾರತ, ಪ್ರವಾಸಿ ಕಂಡ ಕರ್ನಾಟಕ, ಹಾಗೆಯೇ
” ಮಾಸ್ಕೋದಲ್ಲಿ 22 ದಿನ ” ಎಂಬ ಸೋವಿಯತ್ ಪ್ರವಾಸ ಕುರಿತ ರಾಷ್ಟ್ರಕವಿ ಡಾಕ್ಟರ್ ಜಿಎಸ್ ಶಿವರುದ್ರಪ್ಪನವರ ಕೃತಿ, ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ ಎನ್ನುವ ಪೂರ್ಣಚಂದ್ರ ತೇಜಸ್ವಿ ಅವರ ಕೃತಿ ಹೀಗೆ ಬೇರೆ ಬೇರೆ ಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ, ಸಂಚಿಕೆಗಳಲ್ಲಿ, ಇತಿಹಾಸದ ಪುಟಗಳಲ್ಲಿ ಪ್ರಕಟವಾಗಿರುವ ಬರಹಗಳು ತುಂಬಾ ಕುತೂಹಲಕರವಾಗಿರುತ್ತದೆ, ಸ್ವಾರಸ್ಯಕರವಾಗಿರುತ್ತದೆ.

ವಿಶ್ವದ ಮೂಲೆ ಮೂಲೆಯ ಅತ್ಯುತ್ತಮ ಸ್ಥಳಗಳನ್ನು ಲೇಖಕರು ವಿವರಿಸುವ ರೀತಿ ತುಂಬಾ ಅಮೋಘವಾಗಿರುತ್ತದೆ. ಇಲ್ಲಿ ಸ್ಥಳಗಳು ಮತ್ತು ಅದರ ವರ್ಣನೆ, ಗ್ರಹಿಕೆ, ನಿರೂಪಣೆ, ಆಕರ್ಷಣೆ ಬಹಳಷ್ಟು ವಿಭಿನ್ನವಾಗಿರುತ್ತದೆ. ಆಫ್ರಿಕಾದ ಕಾಡುಗಳಿರಲಿ, ಯೂರೋಪಿನ ಆಲ್ಪ್ಸ್ ಪರ್ವತಗಳ ಹಿಮಾಚ್ಚಾದಿತ ಪ್ರದೇಶಗಳಿರಲಿ, ಪೆರುವಿನ ಮಚು ಪೀಚು ಇರಲಿ, ಅಮೆರಿಕಾ – ಕೆನಡಾದ ನಯಾಗರ ಜಲಪಾತವಿರಲಿ, ಇಂಗ್ಲೆಂಡಿನ ಥೇಮ್ಸ್ ನದಿಯ ದಂಡೆಯ ಮೇಲಿನ ಸೌಂದರ್ಯವೇ ಇರಲಿ, ನ್ಯೂಜಿಲ್ಯಾಂಡ್ ಆಸ್ಟ್ರೇಲಿಯಾದ ಅದ್ಭುತ ಪ್ರವಾಸಿ ತಾಣಗಳೇ ಆಗಿರಲಿ, ಮಧ್ಯಪ್ರಾಚ್ಯ ದೇಶಗಳ ಭವ್ಯತೆ, ಅಗಾಧತೆ ಇರಲಿ, ಅರಬ್ ರಾಷ್ಟ್ರಗಳ ಜೀವನ ಶೈಲಿ ಮತ್ತು ಮರಳುಗಾಡು, ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಸೌಂದರ್ಯ, ಚೀನಾ, ಜಪಾನ್, ಕೊರಿಯಾ, ವಿಯಟ್ನಾಂ, ಶ್ರೀಲಂಕಾ, ನೇಪಾಳ ಮುಂತಾದ ದೇಶಗಳ ಯಾತ್ರಾ ಸ್ಥಳಗಳು, ವಿಶ್ವದ ಏಳು ಅದ್ಭುತಗಳ ಜೊತೆಗೆ ಇನ್ನೂ ಹೆಚ್ಚು ಪ್ರಖ್ಯಾತಿ ಹೊಂದದ, ಆದರೆ ಸೌಂದರ್ಯದ ಖನಿಯಂತಿರುವ ಅನೇಕ ಪ್ರದೇಶಗಳನ್ನು ವರ್ಣಿಸುತ್ತಿದ್ದರೆ ಓದುವ ಸಮಯವೇ ಗೊತ್ತಾಗುವುದಿಲ್ಲ.

ಮತ್ತೂ ಒಂದು ವಿಶೇಷವೆಂದರೆ ಅದನ್ನು ಬರೆಯುವ ಲೇಖಕ, ಬರಹಗಾರ, ಸಾಹಿತಿ, ಪ್ರವಾಸಿ, ಚಿಂತಕ, ಹೋರಾಟಗಾರ, ಸೈದ್ಧಾಂತಿಕ ಸ್ಪಷ್ಟತೆಯ ವ್ಯಕ್ತಿ ಅಥವಾ ಸಾಮಾನ್ಯ ಪ್ರವಾಸಕ್ಕೆ ಹೋದ, ಜೀವನದಲ್ಲಿ ಎಂದೂ ಬರೆಯದ ವ್ಯಕ್ತಿಗಳು ಬರೆಯುವ ಶೈಲಿಯಲ್ಲಿ ಕೂಡ ಸಾಕಷ್ಟು ವಿಭಿನ್ನತೆಯನ್ನು, ಗ್ರಹಿಕೆಯನ್ನು ಗುರುತಿಸಬಹುದು.

ಇಂತಹ ಕೆಲವು ಲೇಖನಗಳನ್ನು ಇತ್ತೀಚಿನ ದಿನಗಳಲ್ಲಿ ಓದುತ್ತಿದ್ದೆ. ಆಗ ಲೇಖಕರು ಇಂಗ್ಲೆಂಡ್ ಬಳಿಯ ಒಂದು ಸಣ್ಣ ಹಳ್ಳಿಯನ್ನು ವಿವರಿಸುತ್ತಾ ಆ ಇಡೀ ಹಳ್ಳಿಯಲ್ಲಿ ಓಡಾಡುತ್ತಿದ್ದರೆ ಬಹುತೇಕ ಹಳ್ಳಿಯೇ ಧ್ಯಾನಸ್ಥ ಸ್ಥಿತಿಯಲ್ಲಿಯೇ ಇರುವಂತೆ ಕಾಣುತ್ತದೆ. ಅಲ್ಲಿನ ಮುಖ್ಯ ಉದ್ಯೋಗ ಪ್ರವಾಸಿಗಳು ಅಲ್ಲಿಗೆ ಭೇಟಿ ನೀಡಿದಾಗ ಅಲ್ಲಿ ಹರಿಯುವ ನದಿಯಲ್ಲಿ ದೋಣಿಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಸುತ್ತಾಟ ಮಾಡಿ ಮತ್ತೆ ವಾಪಸ್ಸು ಕರೆತರುವುದು. ಅವರು ನೀಡುವ ಹಣವೇ ಅವರ ಜೀವನೋಪಾಯ. ಅಲ್ಲಿ ನದಿ ಕೂಡ ತುಂಬಾ ಪ್ರಶಾಂತತೆಯಿಂದ ಹರಿಯುತ್ತಿರುತ್ತದೆ. ಯಾವುದೇ ಸದ್ದು ಗದ್ದಲ ಇರುವುದಿಲ್ಲ. ಒಂದು ರೀತಿ ನಿಶ್ಯಬ್ದ ಧ್ಯಾನಸ್ಥ ಸ್ಥಿತಿಯಲ್ಲಿ ಇಡೀ ಹಳ್ಳಿಯೇ ಇದ್ದಂತೆ ಭಾಸವಾಗುತ್ತದೆ. ಪ್ರವಾಸಿಗಳನ್ನು ಕರೆದೊಯ್ಯುವ ವ್ಯಕ್ತಿ ಸಹ ಯಾರೂ ಇಲ್ಲದಿದ್ದಾಗ ಅಲ್ಲಿಯೇ ಒಂದು ಜಗಲಿಯ ಮೇಲೆ ಕುಳಿತು, ಪುಸ್ತಕ ಓದುತ್ತಾ, ಮನೆಯಿಂದ ತಂದ ಆಹಾರ ಸೇವಿಸುತ್ತಾ ಇರುವ ಪರಿಸರವನ್ನು ಲೇಖಕರು ಅತ್ಯಂತ ನಿರ್ಭಾವುಕವಾಗಿ ಧ್ಯಾನಸ್ಥ ಸ್ಥಿತಿಯಲ್ಲಿಯೇ ವರ್ಣಿಸುತ್ತಾರೆ. ಅದು ಹೇಗೆ ಅನುಭವ ನೀಡುತ್ತದೆ ಎಂದರೆ ಓದುವವರು ಕೂಡ ಒಮ್ಮೆ ಧ್ಯಾನಸ್ಥ ಮನಸ್ಥಿತಿಯನ್ನ ತಲುಪಬೇಕು ಹಾಗಿರುತ್ತದೆ.

ಯೋರೋಪಿನ ಇನ್ನೊಂದು ನಗರವನ್ನು ವರ್ಣಿಸುವ ಮತ್ತೊಬ್ಬ ಲೇಖಕರು ಆ ಇಡೀ ನಗರ ನಿಧಾನವಾಗಿ ಸಂಗೀತದ ನಿನಾದದಂತೆ
ಚಲಿಸುವ ಅನುಭವವಾಗುತ್ತದೆ ಎಂದು ಬರೆಯುತ್ತಾರೆ. ಅಲ್ಲಿನ ಜನಜೀವನ ಮೌನದ ಅರ್ಥ ಹೊಮ್ಮಿಸುವಂತೆ ನಿಧಾನವಾಗಿ ಚಲಿಸುವ ರೀತಿಯಲ್ಲಿ ಇರುತ್ತದೆ ಎಂದು ವರ್ಣಿಸುವುದನ್ನು ಓದುವಾಗಲೇ ನಾವು ಕೂಡ ಅದರೊಂದಿಗೆ ಚಲಿಸುವಂತೆ ಭಾಸವಾಗುತ್ತದೆ.

ಈ ಲೇಖನ ಬರೆಯಲು ಸಹ ಮುಖ್ಯ ಕಾರಣ, ಇಂದಿನ ಆಧುನಿಕ ಸಂಕೀರ್ಣ ಸಮಾಜದಲ್ಲಿ ನಮ್ಮ ಮನಸ್ಸುಗಳು ಸಹ ಪ್ರಕ್ಷ್ಯುಬ್ಧವಾಗಿದೆ. ಪ್ರಶಾಂತತೆ, ಮೌನ, ಧ್ಯಾನಸ್ಥ ಮನಸ್ಥಿತಿ ನಮ್ಮಿಂದ ಬಹುತೇಕ ದೂರವಾಗಿದೆ. ಪ್ರತಿ ನಿಮಿಷ, ಪ್ರತಿ ಗಂಟೆ, ಪ್ರತಿದಿನ ಓಡುತ್ತಲೇ ಇದ್ದೇವೆ, ಓಡುತ್ತಲೇ ಇದ್ದೇವೆ. ದೇಹ ಮಾತ್ರವಲ್ಲ ಮನಸ್ಸು ಓಡುತ್ತಲೇ ಇದೆ, ಗೊಂದಲಗೊಂಡಿದೆ, ದ್ವಂದ್ವವಿದೆ, ಸಂಘರ್ಷವಿದೆ, ನಿರಾಸೆ ಇದೆ, ಕೋಪವಿದೆ, ಅಸೂಯೆ ಇದೆ ಅದನ್ನು ನಿಯಂತ್ರಿಸುವ ಹಾದಿ ನಾವು ಕಂಡುಕೊಳ್ಳಬೇಕಾಗಿರುವ ಧ್ಯಾನಸ್ಥ ಮನಸ್ಥಿತಿ.

ಪ್ರಕೃತಿಗೆ ಧ್ಯಾನಸ್ಥ ಮನಸ್ಥಿತಿ ಸಾಧ್ಯವಾಗುವುದಾದರೆ, ಮೌನಕ್ಕೆ ಧ್ಯಾನಸ್ಥ ಮನಸ್ಥಿತಿ ಸಾಧ್ಯವಾಗುವುದಾದರೆ, ಪ್ರಾಣಿ, ಪಕ್ಷಿ, ಸಕಲ ಜೀವರಾಶಿಗಳಿಗೆ ಧ್ಯಾನಸ್ಥ ಮನಸ್ಥಿತಿ ಸಾಧ್ಯವಾಗುವುದಾದರೆ, ಮನುಷ್ಯರಾದ, ನಾಗರಿಕ ಸಮಾಜದ ಭಾಗವಾದ ನಮಗೆ ಆ ಧ್ಯಾನಸ್ಥ ಮನಸ್ಥಿತಿ ಏಕೆ ಸಾಧ್ಯವಾಗುವುದಿಲ್ಲ. ಸದಾ ಕಾಲ ಗಡಿಬಿಡಿಯ ಮನಸ್ಥಿತಿಯಲ್ಲಿ ಕಳೆದುಹೋಗುತ್ತಿರುವ ನಾವು, ಹೇಗಾದರೂ ಮಾಡಿ ಧ್ಯಾನಸ್ಥ ಮನಸ್ಥಿತಿಯನ್ನ ತಲುಪಲೇಬೇಕಿದೆ. ಆಗ ಖಂಡಿತವಾಗಲೂ ನಮ್ಮ ಜೀವನ ಮಟ್ಟ ಸುಧಾರಿಸುವುದು ನಿಶ್ಚಿತ.

ಇಂದು ನಾವು ಪ್ರತಿಕ್ಷಣ ಕೇಳುತ್ತಿರುವ ಅಪಘಾತ, ಅಪರಾಧ, ಆತ್ಮಹತ್ಯೆ, ಅನಾಹುತ, ಅತೃಪ್ತಿ, ಅಸಹಿಷ್ಣುತೆ ಮುಂತಾದ ಗಂಡು ಕೇಳರಿಯದ ಭಾವನೆಗಳಿಗೆ, ಘಟನೆಗಳಿಗೆ, ಪ್ರತಿಕ್ರಿಯೆಗಳಿಗೆ ಉತ್ತರ ರೂಪದಲ್ಲಿ ಧ್ಯಾನಸ್ಥ ಮನಸ್ಥಿತಿ ರೂಪಗೊಳ್ಳಬಹುದು. ಬದುಕಿನ ಬಗ್ಗೆ ಇರುವ ನಿರಾಸೆ ಕಡಿಮೆಯಾಗಿ ಜೀವನೋತ್ಸಾಹ ಪುಟಿದೇಳಬಹುದು….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ

3 hours ago

ಸರ್ಕಾರಿ ಗೋಮಾಳ ಒತ್ತುವರಿ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಪ್ರಕಾರ ಕ್ರಮ: ನಕಲಿ ಭೂದಾಖಲೆ ಸೃಷ್ಟಿ ಹಾಗೂ ಅಕ್ರಮ ಖಾತೆ ಬದಲಾವಣೆ ಕಂಡುಬಂದರೆ ಕಠಿಣ ಕ್ರಮ- ಕಂದಾಯ ಸಚಿವ ಡಾ.ಜಿ ಪರಮೇಶ್ವರ್

ಸಾರ್ವಜನಿಕರ ಕೆಲಸಗಳು ತಾಲೂಕು ಕಚೇರಿಗಳಲ್ಲಿ ಯಾವುದೇ ವಿಳಂಬವಿಲ್ಲದೆ ನಡೆಯಬೇಕು. ಕಂದಾಯ ದಾಖಲೆಗಳ ನಿರ್ವಹಣೆ, ಭೂಮಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಹಾಗೂ…

5 hours ago

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಾರ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

ಅ.07-10-2026: ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ, ಚೆಕ್‌-ಇನ್ ಬ್ಯಾಗೇಜ್‌ನಲ್ಲಿ ಅಡಗಿಸಿಟ್ಟಿದ್ದ 942 ಗ್ರಾಂ…

8 hours ago

ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಸಚಿವ ಜಿ. ಪರಮೇಶ್ವರ್ ದಿಢೀರ್ ಭೇಟಿ

ದೇವನಹಳ್ಳಿ: ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ…

9 hours ago

ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಬಳಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ರೈಲು ನಿಲ್ದಾಣದ ರೈಲ್ವೆ ಯಾರ್ಡ್‌ನಲ್ಲಿ ರೈಲಿಗೆ ಸಿಲುಕಿ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ…

16 hours ago

ದಸರಾ….

ಮೈಸೂರು ದಸರಾ, ಮಹಿಷಾ ದಸರಾ, ಚಾಮುಂಡಿ ದಸರಾ..... ವಿಜಯ ದಶಮಿ - ಆಯುಧ ಪೂಜೆ..... ದುಷ್ಟ ಶಕ್ತಿಗಳ ವಿರುದ್ಧ ವಿಜಯದ…

16 hours ago