ಏ.19ಕ್ಕೆ ಸಾಸಲು ಚಿನ್ನಮ್ಮ ಉತ್ಸವ-2026

ಸಾಸಲು ಚಿನ್ನಮ್ಮ ಉತ್ಸವ ಸಮಿತಿ ವತಿಯಿಂದ ಸಾಸಲು ಚಿನ್ನಮ್ಮ ಉತ್ಸವ-2026 ಕಾರ್ಯಕ್ರಮವನ್ನು ಏ.19ರ ಭಾನುವಾರದಂದು ತಾಲೂಕಿನ ಸಾಸಲು ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಪ್ರೌಢಶಾಲೆ ಆವರಣದಲ್ಲಿ ಆಯೋಜನೆ ಮಾಡಲಾಗಿದೆ ಎಂದು ತಾ.ಪಂ ಮಾಜಿ ಅಧ್ಯಕ್ಷ ಲಾವಣ್ಯ ನಾಗರಾಜ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.19ರ ಬೆಳಗ್ಗೆ 8 ಗಂಟೆಗೆ ಸಾದ್ವಿಮಣೆ ಸಾಸಲು ಚಿನ್ನಮ್ಮ ದೇವಾಲಯ ಮುಂಭಾಗದಿಂದ ಡಾ.ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆಯ ಸಾಸಲು ಚೆನ್ನಮ್ಮ ಉತ್ಸವ ವೇದಿಕೆ ತನಕ ಜಾನಪದ ಕಲಾ ತಂಡಗಳೊಂದಿಗೆ ಸಾಸಲು ಚಿನ್ನಮ್ಮ ಮೂರ್ತಿಯನ್ನು ಚಿಲಕಲ ಬಂಡಿ ಮೂಲಕ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.

ಬೆಳಗ್ಗೆ 10 ಗಂಟೆಗೆ ಸಾಹಿತಿಗಳಾದ ಡಾ.ಡಿ.ಕೆ.ಚಿತ್ತಯ್ಯ ಪೂಜಾರ್ ಅವರು ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದಾರೆ. ಜಾನಪದ ವಿದ್ವಾಂಸರಾದ ಸಣ್ಣ ನಾಗಪ್ಪನವರಿಂದ ಸಾಸಲು ಚಿನ್ನಮ್ಮ ಪರಿಚಯದ ಕಿರುಪುಸ್ತಕ ಬಿಡುಗಡೆಯಾಗಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಶಾಸಕ ಧೀರಾಜ್ ಮುನಿರಾಜು, ಶಾಸಕರು, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಕಿಮ್ಸ್ ಆಸ್ಪತ್ರೆ ಮಾಜಿ ಅಧ್ಯಕ್ಷರಾದ ಬಿ. ಮುನೇಗೌಡ ಭಾಗವಹಿಸಲಿದ್ದಾರೆ.. ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪಿ. ಗೋವಿಂದರಾಜು ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಮಧ್ಯಾಹ್ನ 12 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿರುತ್ತದೆ. ಸಾಸಲು ಹೋಬಳಿ ಕುರಿತು ಚಿಂತನ-ಮಂಥನ ಕಾರ್ಯಕ್ರಮ ಆಯೋಜನೆ. ರಾತ್ರಿ 7 ಗಂಟೆಗೆ ಸಾಸಲು ಚೆನ್ನಮ್ಮ ಕುರಿತ ನಾಟಕ ಇರಲಿದೆ ಎಂದರು.

ಈ ವೇಳೆ ವಕೀಲ ನರಸಿಂಹಗೌಡ, ರಮೇಶ್, ಪಿಡಿಒ ಶ್ರೀನಿವಾಸ್, ಜಿ.ಎಂ ನಾಗರಾಜ್, ರಾಜಘಟ್ಟ ರವಿ, ಪೊಲೀಸ್ ಚಂದ್ರಶೇಖರ್(ಚಂದ್ರು) ಜಯರಾಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು…

Leave a Reply

Your email address will not be published. Required fields are marked *

error: Content is protected !!