ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ 178-ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಲೆಕ್ಕ ಪತ್ರ/ದಾಖಲೆಗಳ ತಪಾಸಣೆಯ ವಿವಿಧ ಹಂತದ ದಿನಾಂಕ ಏಪ್ರಿಲ್ 26 ಹಾಗೂ ಏಪ್ರಿಲ್ 27 ರಂದು ನಿಗದಿಪಡಿಸಲಾಗಿದೆ ಎಂದು 178-ಹೊಸಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅವರು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣಾ ಅಭ್ಯರ್ಥಿಯು, ತಾನು ನಾಮಪತ್ರ ಸಲ್ಲಿಸಿದ ದಿನಾಂಕ ಹಾಗೂ ಚುನಾವಣಾ ಫಲಿತಾಂಶ ಘೋಷಣೆಯಾದ ದಿನಾಂಕದ ನಡುವೆ (ಎರಡು ದಿನಾಂಕಗಳು ಸೇರಿದಂತೆ) ಅಭ್ಯರ್ಥಿಯಾಗಲೀ ಅಥವಾ ಅವರ ಏಜೆಂಟ್ ಯಾಗಲೀ ಸ್ಪರ್ಧಿಸಿದ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ ಅಥವಾ ಅಭ್ಯರ್ಥಿಯ ಚುನಾವಣಾ ಏಜೆಂಟನ್ನು ಭರಿಸಿದ ಅಥವಾ ಅಧಿಕೃತಗೊಳಿಸಿದ ಎಲ್ಲಾ ವೆಚ್ಚದ ಲೆಕ್ಕವನ್ನು ಪ್ರತ್ಯೇಕವಾಗಿ ಮತ್ತು ಸರಿಯಾಗಿ ಇಟ್ಟುಕೊಳ್ಳುವುದು ಅಗತ್ಯವಾಗಿದೆ. ನಿರ್ವಹಿಸಲಾಗಿರುವ ಚುನಾವಣಾ ವೆಚ್ಚದ ಲೆಕ್ಕಪತ್ರ ಮತ್ತು ದಾಖಲೆಗಳ (ರಶೀದಿ/ ಬಿಲ್ಲುಗಳು) ತಪಾಸಣೆಯನ್ನು 3 ಭಾರಿ ಚುನಾವಣಾ ವೆಚ್ಚ ವೀಕ್ಷಕರಿಂದ ಅಧಿಕವಾಗಿ ನಿಯೋಜಿಸಿದ ಅಧಿಕಾರಿಯಿಂದ ತಪಾಸಣೆಯನ್ನು ಮಾಡಿಸಬೇಕಾಗಿರುತ್ತದೆ.
ಆದ್ದರಿಂದ 178-ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿರುವ ಅಭ್ಯರ್ಥಿಗಳ ವಿವಿಧ ಹಂತದ ಲೆಕ್ಕ ಪತ್ರ/ದಾಖಲೆಗಳ ತಪಾಸಣೆಗೆ ಏಪ್ರಿಲ್ 26 ಹಾಗೂ 27 ರಂದು ದಿನಾಂಕ ನಿಗದಿಪಡಿಸಲಾಗಿದೆ.
178-ಹೊಸಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿರುವ 23 ಅಭ್ಯರ್ಥಿಗಳಾದ
ಎನ್.ನಾಗರಾಜು, ಪ್ರಶಾಂತ್ ಸುಬ್ರಮಣಿ, ಡಿ.ಎಂ.ಲಕ್ಷ್ಮೀನಾರಾಯಣ, ಶರತ್ ಕುಮಾರ್ ಬಚ್ಚೇಗೌಡ, ರಮೇಶ್ ಚಕ್ರವರ್ತಿ, ಶರತ್ ಬಚ್ಚೇಗೌಡ, ಎಂ.ಶ್ರೀಮತಿ, ಬಿ.ಸೊಣ್ಣಪ್ಪಗೌಡ, ಅಜಯ್ ಕುಮಾರ್ ರೆಡ್ಡಿ ಅಡಾಲ, ಪಿ.ಆರ್.ಅನುಷಾ, ಜೆ.ಅಶೋಕ. ಅಂಬುಜ ಅವರು ಏಪ್ರಿಲ್ 26 ರಂದು ಹಾಗೂ ಈರೇಗೌಡ (ಎಂಟಿಬಿ), ನವೀನ್ ಕುಮಾರ್, ಎನ್.ನಾಗರಾಜ್, ಟಿ.ನಾಗರಾಜು, ಕಪಾಲಿ ನಾರಾಯಣಸ್ವಾಮಿ.ಜಿ, ನಿತೀಶ್ ಟಿ.ಡಿ ಪುರುಷೋತ್ತಮ್, ವಿ.ನಿತೇಶ್ ಕುಮಾರ್, ಎಸ್.ಆರ್ ರಘುನಾಥ್, ಶರತ್ ಕುಮಾರ್.ಕೆ, ಹೆಚ್.ಟಿ ಶಶಿಕುಮಾರ್, ಸುರೇಶ್.ಕೆ ಅವರು ಏಪ್ರಿಲ್ 27 ರಂದು ನಿಗದಿಪಡಿಸಿರುವ ಸಮಯದಂದು ಚುನಾವಣಾ ಲೆಕ್ಕಗಳಿಗೆ ಸಂಬಂಧಿಸಿದಂತೆ ಲೆಕ್ಕ ಪತ್ರ ಮತ್ತು ದಾಖಲೆಗಳ ಪರಿಶೀಲನೆಗೆ ಅಭ್ಯರ್ಥಿ ಅಥವಾ ಅಭ್ಯರ್ಥಿಯ ಚುನಾವಣಾ ಏಜೆಂಟರು ತಪ್ಪದೇ ಹಾಜರಾಗಿ ಲೆಕ್ಕ ತಪಾಸಣೆ ಮಾಡಿಸಿಕೊಳ್ಳುವುದು.
ತಪ್ಪಿದ್ದಲ್ಲಿ ಚುನಾವಣೆ ನಿಯಮಾನುಸಾರ ಹಾಗೂ ಭಾರತದ ದಂಡ ಸಂಹಿತೆ 1860 ರ ಕಲಂ,171-1ರಂತೆ ಕ್ರಮ ಕೈಗೊಳ್ಳಲಾಗುವುದೆಂದು 178-ಹೊಸಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ…
ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ ಗೌಡ,…
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಾರ್ಗದಲ್ಲಿ…
ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ,…