ಕೋಲಾರ: ನಗರದ ಹೊರವಲಯದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು, ಮಂಡಿ ಮಾಲೀಕರು ಹಾಗೂ ದಲ್ಲಾಳಿಗಳ ಯಾವುದೇ ಕೆಲಸಗಳು ಆಗಬೇಕಾದರೂ ಎಪಿಎಂಸಿ ಕಾರ್ಯದರ್ಶಿ ಎನ್ ವಿಜಯಲಕ್ಷ್ಮಿ ಅವರಿಗೆ ಲಂಚ ಕೊಟ್ಟರೆ ಮಾತ್ರ ಸಾಧ್ಯವಾಗುತ್ತದೆ ಎಂದು ಆರೋಪಿಸಿ ಜೆ.ಎನ್.ಜಿ ತರಕಾರಿ ದಲ್ಲಾಳಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಬುಧವಾರ ಚುನಾವಣೆಯ ತಹಶಿಲ್ದಾರ್ ನಾಗವೇಣಿ ಮೂಲಕ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಮುಖಂಡ ಎಪಿಎಂಸಿ ಪುಟ್ಟುರಾಜು ಮಾತನಾಡಿ, ಮಾರುಕಟ್ಟೆ ವಿಚಾರವಾಗಿ ಯಾವುದಾದರೂ ಕೆಲಸಕ್ಕೆ ಎಪಿಎಂಸಿ ಕಚೇರಿಗೆ ಹೋದರೆ ಅಧಿಕಾರಿಗಳ ನೆಪದಲ್ಲಿ ಕಿರುಕುಳ ನೀಡಿ ಸರಕಾರ ನಿಗದಿ ಪಡಿಸಿದ ಧರಕ್ಕಿಂತ ಹೆಚ್ಚಿನ ಹಣವನ್ನು ಅಧಿಕಾರಿಗಳಿಗೆ ನೀಡಬೇಕು ಎಂದು ಲಂಚವನ್ನು ನೇರವಾಗಿ ಕೇಳುತ್ತಾರೆ. ನಮ್ಮಲ್ಲಿನ ದಲ್ಲಾಳಿಗಳ ಪರವಾನಗಿ ಪಡೆಯಲು 20 ಸಾವಿರದಿಂದ 40 ಸಾವಿರದಷ್ಟು ಹಣವನ ವ್ಯಕ್ತಿಗೆ ಅನುಗುಣವಾಗಿ ಲಂಚ ಕೊಡಬೇಕು, ಕೊಡದೇ ಹೋದರೆ ಯಾವುದೇ ಕೆಲಸವು ಮಾಡಿಕೊಡುವುದಿಲ್ಲ ಎಂದು ದೂರಿದರು.
ಎಪಿಎಂಸಿ ಆವರಣದ ಒಳಗಡೆ ಜಾಗದ ಸಮಸ್ಯೆಯಿಂದ ಸುಮಾರು 63 ಜನ ತರಕಾರಿ ಮಂಡಿ ಮಾಲೀಕರು ನಮ್ಮ ಫೆಡರೇಶನ್ ಜಾಗದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಾ ಇದ್ದು, ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರೂ ಅ ಜಾಗದಲ್ಲಿ ಅಭಿವೃದ್ಧಿ ಮಾಡಲು ಅವಕಾಶವಿಲ್ಲ ಎಂದು ಹೇಳಿದ್ದಾರೆ, ಆದರೆ, ನಮ್ಮಗಳ ಸ್ವಂತ ಖರ್ಚಿನಲ್ಲಿ ಅಭಿವೃದ್ಧಿ ಮಾಡಿದರೆ ಕಾರ್ಯದರ್ಶಿ ಮಾತ್ರ ರೂಲ್ 71 ರಲ್ಲಿ ಬಿಲ್ ಮಾಡಿಕೊಂಡಿದ್ದಾರೆ. ಎಪಿಎಂಸಿಯ ಅಭಿವೃದ್ಧಿ ಕೆಲಸಗಳು ಬಗ್ಗೆ ಮಾಹಿತಿ ಪಡೆದು ತನಿಖೆ ಮಾಡಿಸಿದರೆ ಇನ್ನಷ್ಟು ಸತ್ಯ ಬಯಲಿಗೆ ಬರಲಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆ.ಎನ್.ಜಿ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಗೌಡ ಮಾತನಾಡಿ, ಪರವಾನಿಗೆ ಮತ್ತು ನವೀಕರಣಕ್ಕೆ ಮಾರುಕಟ್ಟೆ ಶುಲ್ಕ ಬಿಟ್ಟು ಹೆಚ್ಚಿನ ಹಣವನ್ನು ವಸೂಲಿ ಮಾಡುವುದು ಇವರ ವೃತ್ತಯಾಗಿದೆ ಕೊಡದೆ ಹೋದರೆ ಒಂದಲ್ಲ ಒಂದು ರೀತಿಯಲ್ಲಿ ಅಧಿಕಾರಿಗಳು ಟಾರ್ಚರ್ ಮಾಡತ್ತಾರೆ. ಎಪಿಎಂಸಿ ಕಚೇರಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಾರ್ಯದರ್ಶಿ ವಿಜಯಲಕ್ಷ್ಮಿ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ನಮಗೆ ನಿಷ್ಠಾವಂತ ಅಧಿಕಾರಿಯನ್ನು ಎಪಿಎಂಸಿಗೆ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜೆ.ಎನ್.ಜಿ ತರಕಾರಿ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಂಬರೀಷ್,ಗೌರವ ಅಧ್ಯಕ್ಷ ಎಂ.ಎನ್.ಆರ್ ಮಂಜುನಾಥ್, ಸತೀಶ್ ಪದಾಧಿಕಾರಿಗಳಾದ ಎಸ್.ಎಲ್.ಎನ್ ವೆಂಕಟೇಶ್, ಮುನಿರಾಜು, ಗೋಪಾಲರೆಡ್ಡಿ, ಶ್ರೀನಿವಾಸ್, ರೆಡ್ಡೆಪ್ಪ, ವೆಂಕಟರಮಣ, ಕೇಶವ, ವೆಂಕಟಪತಿ, ನಾಗರಾಜ್ ಮುಂತಾದವರು ಇದ್ದರು
ದೊಡ್ಡಬಳ್ಳಾಪುರ ನಗರದ ಶಾಲಾ ಆವರಣದ ಸುತ್ತಮುತ್ತ ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಏ.4ರಂದು ದೊಡ್ಡಬಳ್ಳಾಪುರ…
ನಾನು ವೃತ್ತಿಯಲ್ಲಿ ವಕೀಲನಾಗಿದ್ದೇನೆ. ವಕೀಲ ವೃತ್ತಿಯಲ್ಲಿ ಬಂದಂತಹ ಹಣದಿಂದ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ದಡಘಟ್ಟಮಡಗು ಸಮೀಪ ಸರ್ವೇ ನಂ…
"ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ " - ಡಾಕ್ಟರ್ ಬಾಬಾ ಸಾಹೇಬ್…
Cheap Emotional Support Animal Letter: Your Guide Understanding Cheap Emotional Support Animal Letters In recent…
Understanding ESA Letters for Mental Health Support The Role of ESA Letters in Mental Health…
ತಲಾ ಆದಾಯದಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ. ಆದ್ದರಿಂದ ದೇಶಕ್ಕೆ ಕಾಂಗ್ರೆಸ್ ಬೇಕು. ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ…