ಕೋಲಾರ: ತೋಟಗಾರಿಕೆ ಇಲಾಖೆಯಿಂದ ಬಿತ್ತನೆ ಆಲೂಗಡ್ಡೆಯನ್ನು ಸಬ್ಸಿಡಿ ದರದಲ್ಲಿ ರೈತರಿಗೆ ನೀಡಬೇಕು ಹಾಗೂ ಖಾಸಗಿ ಆಲೂಗಡ್ಡೆ ವ್ಯಾಪಾರಸ್ಥರು ಮತ್ತು ನರ್ಸರಿಗಳು ಕಡ್ಡಾಯವಾಗಿ ತೋಟಗಾರಿಕೆ ಇಲಾಖೆಯಿಂದ ಪರವಾನಗಿ ಪಡೆದು ರೈತರು ಕೊಳ್ಳುವ ಸಸಿಗಳಿಗೆ ಮತ್ತು ಬಿತ್ತನೆ ಆಲೂಗಡ್ಡೆಗೆ ಕಡ್ಡಾಯವಾಗಿ ರಸೀದಿ ನೀಡಬೇಕೆಂದು ಅಗ್ರಹಿಸಿ ರೈತ ಸಂಘದಿಂದ ಅ.22 ರಂದು ತೋಟಗಾರಿಕೆ ಇಲಾಖೆ ಮುತ್ತಿಗೆ ಹಾಕಲು ಬಂಗಾರಪೇಟೆ ನಗರದ ಅರಣ್ಯ ಉದ್ಯಾನವನದಲ್ಲಿ ಕರೆದಿದ್ದ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ಪ್ರತಿ ವರ್ಷ ಆಲೂಗಡ್ಡೆ ಬೆಳೆಗಾರರು ಅನುಭಿಸುತ್ತಿರುವ ನಷ್ಟಕ್ಕೆ ಕಾರಣ ತಿಳಿಯಲು ವಿಜ್ಞಾನಿಗಳ ತಂಡ ರಚನೆ ಮಾಡುವ ಜೊತೆಗೆ ಬೆಳೆ ನಷ್ಟವಾದರೆ ನಿರ್ಲಕ್ಷವಹಿಸುವ ಅಧಿಕಾರಿಗಳ ಆಸ್ತಿ ಹರಾಜು ಹಾಕಿ ರೈತರಿಗೆ ಪರಿಹಾರ ನೀಡುವ ಕಾನೂನು ಜಾರಿ ಮಾಡಬೇಕೆಂದು ತೋಟಗಾರಿಕಾ ಸಚಿವರನ್ನು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.
ಜಿಲ್ಲಾದ್ಯಾಂತ ನಾಯಿಕೊಡೆಗಳಂತೆ ನರ್ಸರಿಗಳು ತಲೆಯೆತ್ತಿವೆ ಜೊತೆಗೆ ನಕಲಿ ಬಿತ್ತನೆ ಬೀಜಗಳ ಕಂಪನಿಗಳು ರೈತರ ಜೊತೆ ಚೆಲ್ಲಾಟವಾಡುವುದು ಒಂದು ಕಡೆಯಾದರೆ ಮತ್ತೊಂದೆಡೆ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆ ಪ್ರಮುಖ ಬೆಳೆಯಾಗಿದ್ದು, ಪ್ರತಿ ವರ್ಷವೂ ಬಿತ್ತನೆ ಗಡ್ಡೆಯಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲೆಯ ವ್ಯಾಪಾರಸ್ಥರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ರೈತರಿಗೆ ಬಿತ್ತನೆ ಗಡ್ಡೆ ಹೆಸರಿನಲ್ಲಿ ತಿನ್ನುವ ಆಲೂಗಡ್ಡೆ ಮಾರಾಟವೂ ನಡೆಯುತ್ತಿದ್ದು, ಸಂಬಂದ ಪಟ್ಟ ಇಲಾಖೆಗಳು ಮೌನಕ್ಕೆ ಶರಣಾಗಿದ್ದು, ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಸರ್ಕಾರದ ಕ್ರಮ ವಹಿಸಬೇಕು ವ್ಯಾಪಾರಸ್ಥರು ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳು ನಿಯಮಗಳನ್ನು ಮಾರಾಟ ಮಾಡಿಕೊಂಡಿದ್ದಾರೆ ವ್ಯಾಪಾರಸ್ಥನು ತೋಟಗಾರಿಕೆ, ಕೃಷಿ, ಎ.ಪಿ.ಎಂ.ಸಿ ಯಿಂದ ಪರವಾನಗಿ ಕಡ್ಡಾಯವಾಗಿ ಪಡೆದಿರಬೇಕು. ಮತ್ತು ಜಲಂದರ್‌ನಲ್ಲಿ ಪರೀಕ್ಷೆಗೊಳಪಟ್ಟ ಪ್ರಮಾಣೀಕೃತ ಬಿತ್ತನೆ ಗಡ್ಡೆಯನ್ನು ಮಾರಾಟ ಮಾಡಬೇಕು. ಬಿತ್ತನೆ ಆಲೂಗಡ್ಡೆ ಕೊಂಡ ಪ್ರತಿ ರೈತನಿಗೂ ಕಡ್ಡಾಯವಾಗಿ ರಸೀದಿ ನೀಡಬೇಕು. ಬೆಳೆ ನಷ್ಟವಾದರೆ ರೈತನಿಗೆ ಸರ್ಕಾರದ ವಿಮೆ ಮತ್ತು ಪರಿಹಾರ ಸಿಗುವಂತೆ ವ್ಯವಸ್ಥೆಗೆ ರಸೀದಿ ಕಡ್ಡಾಯಗೊಳಿಸಿ, ರೈತನ ಬೆಳೆ ನಷ್ಟದಿಂದ ಪಾರು ಮಾಡಬೇಕೆಂದು ಅಗ್ರಹಿಸಿದರು.
ಅತಿವೃಷ್ಠಿ ಅನಾವೃಷ್ಠಿ ಜೊತೆಗೆ ಟೊಮೆಟೊ ಬೆಳೆಗೆ ಬಾಧಿಸುತ್ತಿರುವ ಬಿಂಗಿರೋಗದಿಂದ ತತ್ತರಿಸಿ ಲಕ್ಷಾಂತರ ರೂಪಾಯಿ ನಷ್ಟದಲ್ಲಿರುವ ರೈತರ ನೋವಿಗೆ ಸ್ಪಂದಿಸುವ ಇಚ್ಚಾಶಕ್ತಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿದಿಗಳಿಗೆ ಇದ್ದರೆ ಬಿತ್ತನೆ ಆಲೂಗಡ್ಡೆಯನ್ನು ಶೇ.೭೫ ರಷ್ಟು ಸಬ್ಸಿಡಿ ದರದಲ್ಲಿ ನೀಡುವ ಮುಖಾಂತರ ಮಾನವೀಯತೆ ತೋರಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ಈ ಕಾನೂನನ್ನು ಅಧಿಕಾರಿಗಳ ಪುಸ್ತಕದಲ್ಲಿ ನೋಡಬಹುದಾಗಿದ್ದು ಹಾಸನ, ಶಿವಮೊಗ್ಗ, ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಸರ್ಕಾರ ಮತ್ತು ಎ.ಪಿ.ಎಂ.ಸಿ ಕಾನೂನನ್ನು ಸಮರ್ಪಕವಾಗಿ ಜಾರಿ ಮಾಡಿದೆ. ಆದರೆ ಜಿಲ್ಲೆಯಲ್ಲಿ ಲಾಭದ ದೃಷ್ಠಿಯಿಂದ ತಿನ್ನುವ ಆಲೂಗಡ್ಡೆ ಮೂಟೆಗೆ ಸೀಲ್ ಹಾಕಿ ಬಿತ್ತನೆಗೆ ಮಾರುತ್ತಿರುವ ಪ್ರಕರಣಗಳು ೧೦ವರ್ಷಗಳಿಂದ ಮರುಕಳಿಸಿ ಬೆಳೆ ನಷ್ಟ ಮತ್ತು ಇಳುವರಿ ಕುಂಟಿತವಾಗಿ ರೈತರಿಗೆ ತೊಂದರೆಯಾದಾಗ ವ್ಯಾಪಾರಸ್ಥರು ನುಣಿಚಿಕೊಂಡು ರೈತರ ಮೇಲೆ ಗೂಬೆ ಕೂರಿಸುವ ಪ್ರಕರಣಗಳು ಸುಮಾರು ನಡೆದಿದ್ದು, ಸರ್ಕಾರದಿಂದ ಸಿಗುವ ವಿಮೆ ಮತ್ತು ಬೆಳೆ ನಷ್ಟವೂ ರೈತರಿಗೆ ಕಳಪೆ ಬಿತ್ತನೆಯಿಂದ ಸಿಗದಂತೆ ಮಾಡಿ ಅಧಿಕಾರಿಗಳು ವ್ಯಾಪಾರಸ್ಥರ ಗುಲಾಮರಂತೆ ವರ್ತಿಸುತ್ತಿದ್ದು, ಸರ್ಕಾರದ ನಿಯವನ್ನು ಪಾಲಿಸದ ವ್ಯಾಪಾರಸ್ಥರ ಹಾಗೂ ನಕಲಿ ಬೀಜ ಕಂಪನಿಗಳು ಮತ್ತು ರಸೀದಿ ನೀಡದ ನರ್ಸರಿಗಳ ವಿರುದ್ದ ಮುಲಾಜಿಲ್ಲದೆ ಕ್ರಮ ಕೈಗೊಂಡು ರೈತರ ಉಳಿವಿಗಾಗಿ ಬಿತ್ತನೆಯಲ್ಲಿ ತಿನ್ನುವ ಆಲೂಗಡ್ಡೆ ಮಾರಾಟ ಮಾಡುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತೋಟಗಾರಿಕೆ, ಕೃಷಿ, ಎ.ಪಿ.ಎಂ.ಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಪರವಾನಗಿ ಪಡೆಯದೆ ವ್ಯಾಪಾರಸ್ಥರ ವಿರುದ್ದ ಕ್ರಮ ಕೈಗೊಂಡು ರೈತರಿಗೆ ಬಿತ್ತನೆ ಗಡ್ಡೆಯಲ್ಲಿ ಮೋಸವಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿ ಮುಂದೆ ಆಗುವ ಆನಾಹುತಗಳನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾ.ಅ ಕದರಿನತ್ತ ಅಪ್ಪೋಜಿರಾವ್, ಲಕ್ಷಣ್, ಮುನಿಕೃಷ್ಣ, ವಿಶ್ವ, ಮುನಿರಾಜು, ಚಾಂದ್‌ಪಾಷ, ಅಹಮದ್, ಕೃಷ್ಣಪ್ಪ, ಮುನಿಯಪ್ಪ ಮಂಗಸಂದ್ರ ತಿಮ್ಮಣ್ಣ, ಗೀರೀಶ್, ಪುತ್ತೇರಿ ರಾಜು, ಮುಂತಾದವರಿದ್ದರು,
ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…
ಬೆಂಗಳೂರು ಗ್ರಾಮಾಂತರ: ಮೊಬೈಲ್ ಫೋನ್ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್ ಕೇವಲ ಸಂಪರ್ಕ…
ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…
ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ರಿಂದ 60 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ…
ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…
ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…