ಬೆಂಗಳೂರು: ಉತ್ತಮ ಆರೋಗಭ್ಯಾಸ ಹೊಂದುವುದರಿಂದ ಮಾತ್ರ ಪ್ರತಿಯೊಬ್ಬರು ಆರೋಗ್ಯವಂತ ದೀರ್ಘಾಯುಷಿಯಾಗಲು ಸಾಧ್ಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಆಯೋಜಿಸಿದ್ದ “ಲಾಂಗಿವಿಟಿ ಇಂಡಿಯಾ ಕಾನ್ಫರೆನ್ಸ್” (ದೀರ್ಘಾಯುಷ್ಯ ಭಾರತ ಸಮ್ಮೇಳನ)ವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಆರೋಗ್ಯವಂತರಾಗಿ ಹೆಚ್ಚು ಕಾಲ ಬದುಕುವುದು ಸವಾಲಿನ ವಿಷಯವಾಗಿದೆ. ನಮ್ಮ ಆಹಾರಭ್ಯಾಸಗಳು ನಮ್ಮನ್ನು ಅನಾರೋಗ್ಯದತ್ತ ಕೊಂಡೊಯ್ಯುತ್ತಿದೆ. ಎಷ್ಟು ವರ್ಷ ಬದುಕಿದ್ದೆವು ಎನ್ನುವುದಕ್ಕಿಂತ ಎಷ್ಟು ವರ್ಷ ಆರೋಗ್ಯವಾಗಿ ಬದುಕುತ್ತೇವೆ ಎನ್ನುವುದು ಮುಖ್ಯ. ಆರೋಗ್ಯವಂತ ದೀರ್ಘಾಯಸ್ಸು ಹೊಂದಲು ಪ್ರತಿಯೊಬ್ಬರು ಇಂದಿನಿಂದಲೇ ಉತ್ತಮ ಆರೋಗಭ್ಯಾಸ ಪ್ರಾರಂಭಿಸಬೇಕು, ಆಗಷ್ಟೇ ಹೆಚ್ಚು ಕಾಲ ಆರೋಗ್ಯವಾಗಿ ಬದುಕಲು ಸಾಧ್ಯ. ಈ ನಿಟ್ಟಿನಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆ ನಡೆಯಬೇಕು ಎಂದು ಹೇಳಿದರು.
ಎನ್‌ಯುಎಸ್‌ನ ಆರೋಗ್ಯಕರ ದೀರ್ಘಾಯುಷ್ಯ ಕೇಂದ್ರದ ನಿರ್ದೇಶಕ ಬ್ರಿಯಾನ್ ಕೆನಡಿ ಮಾತನಾಡಿ, ಈ ಸಮ್ಮೇಳನದ ಮೂಲಕ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಜನರು ಆರೋಗ್ಯಕರವಾಗಿ ವಯಸ್ಸಾಗುವ ಬಗ್ಗೆಯೂ ಆದ್ಯತೆ ನೀಡಲು ಅವಕಾಶ ಮಾಡಿಕೊಟ್ಟಿದೆ. ಪ್ರತಿಯೊಬ್ಬರಿಗೂ ವಯಸ್ಸಾಗಲಿದೆ ಆದರೆ ಅವರು ವಯಸ್ಸಾದ ಸಂದರ್ಭದಲ್ಲಿ ಎಷ್ಟು ಆರೋಗ್ಯವಾಗಿದ್ದಾರೆ ಎಂಬುದು ಮುಖ್ಯ. ಇದಕ್ಕಾಗಿ ವಿಜ್ಞಾನದ ಹೆಜ್ಜೆ ಹಾಗೂ ಜನರಲ್ಲಿನ ಜಾಗೃತಿ ಬಗ್ಗೆಯೂ ಈ ಸಮ್ಮೇಳನದಲ್ಲಿ ಚರ್ಚೆಯಾಗುತ್ತಿರುವುದು ಪ್ರಶಂಸನಾರ್ಹ ಎಂದು ಹೇಳಿದರು.
ಐಐಎಸ್‌ಸಿ ಇಂಟರ್ ಡಿಸಿಪ್ಲಿನರಿ ಸೈನ್ಸಸ್ ವಿಭಾಗದ ಡೀನ್ ನವಕಂತ ಭಟ್ ಮಾತನಾಡಿ, ಭಾರತದಲ್ಲಿ ಮುಂದಿನ ದಿನಗಳಲ್ಲಿ ವಯಸ್ಸಾಗುವವರ ಸರಾಸರಿ ಪ್ರಮಾಣ ಹೆಚ್ಚಾಗಲಿದೆ. ಆದರೆ, ಇಂದು ನಮ್ಮ ಜೀವನಶೈಲಿ, ಆಹಾರಕ್ರಮ ಗಮನಿಸಿದರೆ ಭವಿಷ್ಯದ ಬಗ್ಗೆ ಯೋಚನೆ ಮೂಡಲಿದೆ. ಆರೋಗ್ಯಕರ ಭವಿಷ್ಯ ನಿರ್ಮಾಣಕ್ಕೆ ಯಾವೆಲ್ಲಾ ಕ್ರಮದ ಅಗತ್ಯ ಎಂಬುದರ ಬಗ್ಗೆ ಸುದೀರ್ಘ ಚರ್ಚೆಯಾಗಬೇಕು, ಅನುವಂಶಿಕ ಕಾಯಿಲೆಗಳ ನಿರ್ವಹಣೆ, ಪರಿಸರದಿಂದ ಆಗುವ ಆರೋಗ್ಯ ಸಮಸ್ಯೆ ಸೇರಿದಂತೆ ವಯಸ್ಸಾದ ಬಳಿಕ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಆಯಾ ಕ್ಷೇತ್ರದ ವೈದ್ಯ ಹಾಗೂ ವಿಜ್ಞಾನ ತಜ್ಞರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಈಗಿಂದಲೇ ಈ ವಿಷಯಕ್ಕೆ ಗಮನ ನೀಡದೇ ಹೋದಲ್ಲಿ ಭವಿಷ್ಯದಲ್ಲಿ ಪ್ರತಿಯೊಬ್ಬರೂ ಅನಾರೋಗ್ಯದ ಜೀವನ ಸಾಗಿಸಬೇಕಾಗಬಹುದು ಎಂದು ಎಚ್ಚರಿಸಿದರು.
ಅಧಿವೇಶದಲ್ಲಿ ಆರೋಗ್ಯದ ವಯಸ್ಸಾಗುವಿಕೆಯ ಪ್ರಮಾಣವನ್ನು ಹೆಚ್ಚಿಸಲು ತೆಗೆದುಕೊಳ್ಳಬೇಕಾದ ಕ್ರಮಗಳು, ಸವಾಲುಗಳ ಬಗ್ಗೆ ತಜ್ಞರಿಂದ ಚರ್ಚೆ ನಡೆಯಿತು.
ಸಮಾವೇಶದಲ್ಲಿ ಎಂಎಲ್‌ಸಿ ಮಂಜುನಾಥ ಭಂಡಾರಿ, ಐಐಎಸ್‌ಸಿ ನಿರ್ದೇಶಕ ಗೋವಿಂದನ್ ರಂಗರಾಜನ್ ಉಪಸ್ಥಿತರಿದ್ದರು.
ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…
ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…
2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…
ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…
ಬೆಂಗಳೂರು ಗ್ರಾಮಾಂತರ: ಮೊಬೈಲ್ ಫೋನ್ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್ ಕೇವಲ ಸಂಪರ್ಕ…
ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…