ಬೆಂಗಳೂರು: ಆಕಾಸ ಏರ್ ವಿಮಾನ ಸಂಸ್ಥೆಯು ಪ್ರಯಾಣಿಕರಿಗೆ ವಿಶೇಷ ಔತಣದ ಮೇಲೆ ಕೊಡುಗೆ ಘೋಷಣೆ ಮಾಡಿದೆ.
ವಿಮಾನದಲ್ಲಿ ವಿಶೇಷ ಭೋಜನ ಮಾಡಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಕೆಲವೊಮ್ಮೆ ನಮಗೆ ಹೊಂದಿಕೆಯಾಗದ ಆಹಾರ ಇರುವ ಕಾರಣ ಭೋಜನ ಸೇವಿಸದೇ ಪ್ರಯಾಣ ಮಾಡಿರುತ್ತೇವೆ. ಅದಕ್ಕಾಗಿಯೇ ಆಕಾಸ ಏರ್, ವಿಶೇಷ ಔತಣದ ಕೊಡುಗೆ ನೀಡಿದೆ.
ಈ ವಿಶೇಷ ಔತಣದಲ್ಲಿ ಆಲೂ ಟಿಕ್ಕಿ ಹಾಗೂ ಖಾರದ ರಗ್ಡಾ, ನಮಕ್ ಪಾರಾ ಮತ್ತು ಕಾಜು ಕಟ್ಲಿ ಸಿಹಿ ತಿಂಡಿ ಹಾಗೂ ಪ್ರಯಾಣಿಕರ ಆಯ್ಕೆಯ ಪಾನೀಯವನ್ನು ಒದಗಿಸಲಾಗುತ್ತದೆ. ಈ ಕೊಡುಗೆಯು ನವೆಂಬರ್ 30 ರ ವರೆಗೆ ಆಕಾಸ ಏರ್ ನೆಟ್‌ವರ್ಕ್‌ನಲ್ಲಿ ಒದಗಿಸಲಾಗುತ್ತದೆ. ಈ ಸ್ಪೆಷಲ್ ಔತಣವನ್ನು ಆಕಾಸ ಏರ್ ವೆಬ್‌ಸೈಟ್ www.akasaair.com ಹಾಗೂ ಮೊಬೈಲ್ ಆಪ್‌ನಲ್ಲಿ ಪ್ರೀ ಬುಕ್ ಮಾಡಬಹುದಾಗಿದೆ.
2022 ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದಾಗಿನಿಂದಲೂ ಆಕಾಸ ಏರ್ ವಿಶೇಷವಾಗಿ ಕ್ಯುರೇಟ್ ಮಾಡಿದ ಊಟದ ಆಯ್ಕೆಗಳನ್ನು ಒದಗಿಸುತ್ತಿದ್ದು, ಆಚರಣೆಗಳಿಗೆ ಸೂಕ್ತವಾದ ಪ್ರಾದೇಶಿಕ ವಿಶೇಷತೆಯನ್ನೂ ಇದು ಪ್ರತಿನಿಧಿಸಯತ್ತದೆ. ಮಕರ ಸಂಕ್ರಾಂತಿಯಿಂದ ವ್ಯಾಲಂಟೈನ್ಸ್ ಡೇ, ಹೋಳಿ, ಈದ್, ತಾಯಂದಿರ ದಿನ, ಅಂತಾರಾಷ್ಟ್ರೀಯ ಯೋಗ ದಿನ, ಮಾನ್ಸೂನ್ ಸೀಸನ್, ನವ್‌ರೋಝ್, ಓಣಮ್, ಗಣೇಶ ಚತುರ್ಥಿ, ದಸರಾ, ದೀಪಾವಳಿ ಮತ್ತು ಕ್ರಿಸ್‌ಮಸ್ ಸಮಯದಲ್ಲಿ ಈ ವಿಶೇಷ ಊಟವನ್ನು ಒದಗಿಸುತ್ತದೆ. ಹಬ್ಬದ ಊಟಗಳ ಜೊತೆಗೆ ಹಾರಾಟದ ಅನುಭವವನ್ನೂ ಉತ್ತಮವಾಗಿ ಒದಗಿಸುವುದನ್ನು ಕೆಫೆ ಆಕಾಸ ಮುಂದುವರಿಸಲಿದೆ. ರೆಗ್ಯುಲರ್ ಮೆನುವಿನಲ್ಲಿ ಕೇಕ್‌ಗಳ ಪ್ರೀ ಸೆಲೆಕ್ಷನ್ ಅನ್ನೂ ಇದು ಒದಗಿಸುತ್ತಿದ್ದು, ತಮ್ಮ ಪ್ರೀತಿ ಪಾತ್ರರ ಜನ್ಮ ದಿನಾಚರಣೆಗಳನ್ನು ಆಕಾಶದಲ್ಲೇ ಆಚರಣೆ ಮಾಡಲು ಅನುವು ಮಾಡಿಕೊಡುತ್ತದೆ.
ಕೆಫೆ ಆಕಾಸ ಆಗಾಗ್ಗೆ ತನ್ನ ಮೆನುವನ್ನು ರಿಫ್ರೆಶ್ ಮಾಡುತ್ತಿರುತ್ತದೆ. ವಿವಿಧ ಗುರ್ಮೆ ಊಟಗಳು, ತಿಂಡಿ ತಿನಿಸುಗಳನ್ನು ಹಾಗೂ ರಿಫ್ರೆಶ್ ಮಾಡುವ ಪಾನೀಯಗಳನ್ನೂ ಇದರಲ್ಲಿ ಸೇರಿಸುತ್ತದೆ. ಎಲ್ಲ ವಿಧದ ಆಹಾರ ಪದ್ಧತಿಯವರಿಗೂ ಸೂಕ್ತವಾಗುವಂತೆ ಇದು ಇರುತ್ತದೆ. ಮೆನುವಿನಲ್ಲಿ 45 ಕ್ಕೂ ಹೆಚ್ಚು ಊಟದ ಆಯ್ಕೆಗಳಿವೆ. ಫ್ಯೂಷನ್ ಮೀಲ್ಸ್, ಆಪಟೈಸರ್ಸ್ ಜೊತೆಗೆ ಪ್ರಾದೇಶಿಕ ವೈವಿಧ್ಯತೆ, ರುಚಿಕರ ಡೆಸರ್ಟ್‌ಗಳು ಮತ್ತು ಜನಪ್ರಿಯ ಶೆಫ್‌ಗಳು ವಿಶೇಷವಾಗಿ ಕ್ಯುರೇಟ್ ಮಾಡಿದ ತಿನಿಸುಗಳು ಕೂಡಾ ಇದರಲ್ಲಿ ಇರಲಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಸಾರ್ವಜನಿಕರು ಸಹಾಯವಾಣಿಗೆ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಯೂರಿಯಾ ರಸಗೊಬ್ಬರ ಖರೀದಿಸಲು ಇನ್ನು ಮುಂದೆ ಫಾರ್ಮರ್ ಐಡಿ (ಎಫ್ಐಡಿ) ಸಂಖ್ಯೆ ಹೊಂದಿರುವುದು ಕಡ್ಡಾಯ…
2026-27ನೇ ಸಾಲಿಗೆ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿಗೆ(ಆಂಗ್ಲ ಮಾಧ್ಯಮ) ಸೇರ ಬಯಸುವ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಆನ್ಲೈನ್…
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಅಂಗವಾಗಿ ಮಾದಿಗ ಮಹಾಸಭಾ ವತಿಯಿಂದ…
ಕ್ಯಾಂಟರ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಸ್ನೇಹಿತರ ಜೊತೆಯಲ್ಲಿ ದೇವಾಲಯಕ್ಕೆ ಹೊರಟಿದ್ದ ಯುವಕ ಸಾವನ್ನಪ್ಪಿದ್ದಾನೆ. ಹನುಮಂತ (17) ಮೃತ…
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯ ಚಿಕ್ಕಬೆಳವಂಗಲ, ಸೊನ್ನೇನಹಳ್ಳಿ, ರಾಂಪುರ, ನಾರನಹಳ್ಳಿ ಗ್ರಾಮಗಳಲ್ಲಿ ಸುಮಾರು 2100 ಎಕರೆ ಕೃಷಿ ಭೂಮಿಯನ್ನು…