Categories: Homeವೈರಲ್

ಅಬ್ಬಾ…! ಇಷ್ಟು ದೊಡ್ಡ ಹೃದಯನಾ….? ಇದು ಯಾವ ಪ್ರಾಣಿಯ ಹೃದಯ ಅಂತೀರಾ….ಇಲ್ಲಿದೆ ಮಾಹಿತಿ

ಜಗತ್ತು ಆಧುನಿಕ, ತಂತ್ರಜ್ಞಾನ, ವಿಜ್ಞಾನದಿಂದ ಎಷ್ಟೇ ಮುಂದುವರೆದಿದ್ದರೂ, ಮಾನವ ಅದೆಷ್ಟೋ ಸಂಗತಿಗಳನ್ನು ಅರಿತುಕೊಂಡಿದ್ದರೂ ಹಲವು ವಿಚಾರಗಳು ಇವತ್ತಿಗೂ ಅಚ್ಚರಿಯಾಗಿಯೇ ಉಳಿದಿವೆ. ಈಗಲೂ ಕೂಡ ಅದೆಷ್ಟೋ ಸಂಗತಿಗಳು ನಮ್ಮ ಊಹೆಗೂ ನಿಲುಕದ ಸ್ಥಿತಿಯಲ್ಲಿ ಇವೆ. ಅಂತಹ ವಿಚಾರಗಳಲ್ಲೊಂದು ಜಲಚರ ಪ್ರಾಣಿಯ ಹೃದಯದ ಗಾತ್ರ, ಹೃದಯದ ಬಡಿತದ ಸದ್ದಿನ ಕುರಿತಾಗಿರುವ ವಿಚಾರ.

ಯಾವುದು ಆ ಜಲಚರ ಪ್ರಾಣಿ..? ಅದರ ಹೃದಯ ಗಾತ್ರ ಎಷ್ಟು..? ಇಲ್ಲಿದೆ ಮಾಹಿತಿ

ಇದೀಗ ಆ ಜಲಚರ ಜೀವಿಯ ಹೃದಯದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ನೋಡುಗರು ಬೆಚ್ಚಿಬಿದ್ದಿದ್ದಾರೆ. ಆ ಜಲಚರ ಪ್ರಾಣಿ ಹೆಸರು ಬೇರೆ ಏನೂ ಅಲ್ಲ ಅದೇ ‘ಬ್ಲೂ ವೇಲ್’.

ಈ ನೀಲಿ ತಿಮಿಂಗಿಲಗಳು ಭೂಮಿ ಮತ್ತು ನೀರಿನಲ್ಲಿರುವ ಬಹುದೊಡ್ಡ ಜೀವಿಗಳಲ್ಲಿ ಒಂದಾಗಿದೆ. ನೀಲಿ ತಿಮಿಂಗಿಲದ ಸಂರಕ್ಷಿತ ಹೃದಯವಾಗಿದೆ. ಈ ಹೃದಯ 181 ಕೆ.ಜಿ ತೂಕ, 4.9 ಅಡಿ ಉದ್ದ ಮತ್ತು 3.9 ಅಡಿ ಅಗಲವಿದೆ. ನಿಷಕ್ಕೆ ಎರಡು ಬಾರಿ ಮಾತ್ರ ಹೃದಯ ಬಡಿತ ಆಗುತ್ತದೆ. ಇದರ ಹೃದಯ ಬಡಿತ 3.2 ಕಿಮೀಗಿಂತ ಹೆಚ್ಚು ದೂರದವರೆಗೂ ಕೇಳಿಸುತ್ತದೆ.

ಸದ್ಯ ಕೆನಡಾದ ವಸ್ತು ಸಂಗ್ರಹಾಲಯದಲ್ಲಿರುವ ಬ್ಲೂ ವೇಲ್ ಅಥವಾ ತಿಮಿಂಗಿಲದ ಹೃದಯದ ಪೋಟೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಕೆನಡಾದ ರಾಯಲ್ ಒನ್ಟಾರಿಯೋ ವಸ್ತು ಸಂಗ್ರಹಾಲಯದಲ್ಲಿ ತಿಮಿಂಗಿಲದ ಹೃದಯವನ್ನು ಇರಿಸಲಾಗಿದೆ.

ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ನೀಲಿ ತಿಮಿಂಗಿಲದ ಹೃದಯದ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

2014 ರಲ್ಲಿ ನ್ಯೂಫೌಂಡ್‌ಲ್ಯಾಂಡ್‌ನಲ್ಲಿ ತೊಳೆದು ಪ್ರದರ್ಶಿಸಲ್ಪಟ್ಟ ನೀಲಿ ತಿಮಿಂಗಿಲದ ಹೃದಯದ ಚಿತ್ರ ಇದಾಗಿದೆ. ಇದು ಸಂಶೋಧನೆಗೆ ಉತ್ತಮ ಸ್ಥಿತಿಯಲ್ಲಿದ್ದು ಕೆನಡಾದ ಟೊರೊಂಟೊದಲ್ಲಿನ ರಾಯಲ್ ಒಂಟಾರಿಯೊ ಮ್ಯೂಸಿಯಂನಲ್ಲಿ ವಿಜ್ಞಾನಿಗಳು ಸಂರಕ್ಷಿಸಿದ್ದಾರೆ.

ಹಾಗಾದರೆ ಮನುಷ್ಯ ಹೃದಯ ಗಾತ್ರ ಎಷ್ಟು..?

ವಯಸ್ಕ ಮಾನವನ ಹೃದಯ 250 ರಿಂದ 350 ಗ್ರಾಂ ನಷ್ಟು ದ್ರವ್ಯ ರಾಶಿ ಹೊಂದಿರುವ ಮುಷ್ಟಿ ಗಾತ್ರದಷ್ಟಿರುತ್ತದೆ. 12 CM ಉದ್ದ, 8.5 CM ಅಗಲ, 6CMನಷ್ಟು ದಪ್ಪ ಇರುತ್ತದೆ. ಪುರುಷರ ಹೃದಯ ಸುಮಾರು 280-340ಗ್ರಾಂ ತೂಕ, ಮಹಿಳೆಯರ ಹೃದಯ ಸುಮಾರು 230-280ಗ್ರಾಂ ತೂಕ ಇರುತ್ತದೆ. ಒಬ್ಬ ಆರೋಗ್ಯವಂತನ ಹೃದಯ ನಿಮಿಷಕ್ಕೆ 72 ಬಾರಿ ಬಡಿದುಕೊಳ್ಳುತ್ತದೆ.

ಭೂಮಿ ಮೇಲೆ ಅತ್ಯಂತ ಚಿಕ್ಕ ಹೃದಯ ಯಾವ ಪ್ರಾಣಿ ಹೊಂದಿದೆ..?

ಭೂಮಿಯ ಮೇಲಿನ ಅತ್ಯಂತ ಚಿಕ್ಕ ಹೃದಯವನ್ನು ಹೊಂದಿರುವ ಜೀವಿ ಎಂದರೆ “ಆಲ್ಪಟಸ್ ಮ್ಯಾಗ್ನಿಮಿಯಸ್”, ಒಂದು ರೀತಿಯ ‘ಫ್ರೂಟ್ ಫ್ಲೈ’. ಇದು ‘0.21 ಮಿಮೀ’ ಗಿಂತ ಕಡಿಮೆ ಉದ್ದವಾಗಿದೆ.

ವಿವರಣೆ:

ಆಲ್ಪಟಸ್ ಮ್ಯಾಗ್ನಿಮಿಯಸ್ ಒಂದು ಹಣ್ಣಿನ ನೊಣ. ಸಾಮಾನ್ಯವಾಗಿ, ಕೀಟಗಳ ಹೃದಯಗಳು ಕಿರಿದಾದ ಕೊಳವೆಗಳನ್ನು ಹೊಂದಿದ್ದು ಅವು ಬೆನ್ನಿನ ಉದ್ದಕ್ಕೂ ನೆಲೆಗೊಂಡಿವೆ. ಇದು ರಕ್ತವನ್ನು ಅದರ ತಲೆಯ ಕಡೆಗೆ ಪಂಪ್ ಮಾಡಲು ಶಕ್ತಗೊಳಿಸುತ್ತದೆ. ಈ ಕೀಟವು ಅತ್ಯಂತ ಚಿಕ್ಕ ಹೃದಯವನ್ನು ಹೊಂದಿದ್ದಕ್ಕಾಗಿ ಪ್ರಶಸ್ತಿಯನ್ನು ಗೆದ್ದಿದೆ.

ವಿಶ್ವದ ಅತ್ಯಂತ ಚಿಕ್ಕ ಹೃದಯವನ್ನು ಹೊಂದಿರುವ ಸಸ್ತನಿ ‘ಎಟ್ರುಸ್ಕನ್ ಪಿಗ್ಮಿ ಶ್ರೂ’ ಆಗಿದೆ.

Ramesh Babu

Journalist

Recent Posts

ಕೆ.ಸಿ.ವ್ಯಾಲಿಯಿಂದ ಜಿಲ್ಲೆಯ ರೈತರ ಬದುಕು ಹಸನು- ಕಾಂಗ್ರೆಸ್‌ ಮುಖಂಡ ಜನಪಹಳ್ಳಿ ನವೀನ್‌

ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್‌ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…

5 hours ago

ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು  ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…

5 hours ago

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆ: ಮಕ್ಕಳು, ಶಿಕ್ಷಕ ಭಾವುಕ

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…

7 hours ago

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ.‌ ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…

15 hours ago

ಚುನಾವಣಾ ಫಲಿತಾಂಶದ ವಿಶ್ಲೇಷಣೆ…..

ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…

18 hours ago

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್: ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸಲು ಸಭೆ

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…

1 day ago