Categories: ಲೇಖನ

ಅನೈತಿಕ ಮತ್ತು ಅಕ್ರಮ ಸಂಬಂಧಗಳೆಂಬ ಸಾವಿನ ಹೆದ್ದಾರಿ….

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಸಮಾಜದಲ್ಲಿ ಆಗುತ್ತಿರುವ ಕೆಟ್ಟ ಮತ್ತು ಅಪಾಯಕಾರಿ ಬದಲಾವಣೆ ಎಂದರೆ ಅದು ಅನೈತಿಕ ಮತ್ತು ಅಕ್ರಮ ಸಂಬಂಧಗಳು ಮತ್ತು ಅದರಿಂದಾಗಿ ನಡೆಯುತ್ತಿರುವ ಭೀಕರ ಕೊಲೆಗಳು……

ಮನುಷ್ಯ ಸಂಬಂಧಗಳು, ನಂಬಿಕೆಗಳು, ಕೌಟುಂಬಿಕ ವ್ಯವಸ್ಥೆಗಳು, ಪ್ರೀತಿ ಪ್ರೇಮ ಪ್ರಣಯದ ಪಾವಿತ್ರ್ಯತೆ, ಕಾನೂನು ಸುವ್ಯವಸ್ಥೆ ಒಟ್ಟಾರೆ ಸಾಮಾಜಿಕ ವ್ಯವಸ್ಥೆಯೇ ಕುಸಿದು ಬೀಳುವ ಹಂತಕ್ಕೆ ತಲುಪಬಹುದು ಎಂಬಷ್ಟು ವೇಗವಾಗಿ ಮತ್ತು ತೀವ್ರವಾಗಿ ವ್ಯಾಪಿಸುತ್ತಿದೆ……..

ಬಹಳ ಹಿಂದೆ ಕಡಿಮೆ ಜನಸಂಖ್ಯೆ, ಸಂಪರ್ಕ ಮಾಧ್ಯಮಗಳ ಕೊರತೆ, ಕೌಟುಂಬಿಕ ಮೌಲ್ಯಗಳ ಗಾಢತೆ, ಹೆಣ್ಣು ಗಂಡು ಸಂಬಂಧಗಳ ಗೌಪ್ಯತೆ, ಆರ್ಥಿಕ ಅಸಮಾನತೆ, ಪುರುಷ ಕೇಂದ್ರಿತ ಸಮಾಜ ಮುಂತಾದ ಕಾರಣಗಳಿಂದ ಅಕ್ರಮ ಸಂಬಂಧಗಳು ಕಡಿಮೆ ಇದ್ದವು, ಹೆಚ್ಚು ಹೊರಗೆ ಬರುತ್ತಿರಲಿಲ್ಲ ಮತ್ತು ಅದಕ್ಕೆ ಬಹುತೇಕ ಪುರುಷರೇ ಹೆಚ್ಚು ಹೊಣೆಗಾರರಾಗಿದ್ದರು……..

ಆದರೆ ಮಹಿಳಾ ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆ, ಉದ್ಯೋಗ, ನಗರೀಕರಣ, ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿ, ಸಣ್ಣ ಕುಟುಂಬಗಳ ಅನಿವಾರ್ಯತೆ, ವಲಸೆ, ದೂರ ಪ್ರದೇಶಗಳಲ್ಲಿ ವಾಸ, ಹಣ ಕೇಂದ್ರಿತ ಸಮಾಜ, ಮೌಲ್ಯಗಳ ಕುಸಿತ, ಪುರುಷ ದೌರ್ಜನ್ಯದ ವಿರುದ್ಧ ಮಹಿಳಾ ಜಾಗೃತಿ, ಕಾನೂನಿನ ಬೆಂಬಲ, ಟಿವಿ, ಸಿನಿಮಾ, ಧಾರಾವಾಹಿಗಳ ಪ್ರಭಾವ, ಅಜ್ಞಾನ, ಅಹಂಕಾರ, ಬದುಕಲು ದೊರೆತ ಅಸಂಖ್ಯ ಅವಕಾಶಗಳು, ವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿ ಹಲವಾರು ಕಾರಣಗಳಿಂದ ಮಹಿಳೆ ಮತ್ತು ಪುರುಷರಿಬ್ಬರ ಕಡೆಯಿಂದಲೂ ಅನೈತಿಕ ಚಟುವಟಿಕೆಗಳು ಹೆಚ್ಚಾದವು….

ಈಗ ಅವು ನಿಯಂತ್ರಣ ಮೀರಿ ದುಷ್ಕೃತ್ಯಗಳು ನಡೆಯುತ್ತಿವೆ. ಟಿವಿ, ಪತ್ರಿಕೆ, ಸಾಮಾಜಿಕ ಮಾಧ್ಯಮಗಳಲ್ಲಿ ಇವು ನಿರಂತರವಾಗಿ ಪ್ರಸಾರವಾಗುತ್ತಿವೆ…….

ಅನಾರೋಗ್ಯ, ಆತ್ಮಹತ್ಯೆ ಮತ್ತು ಅಪಘಾತದಿಂದ ಉಂಟಾಗುತ್ತಿರುವ ಸಾವು ನೋವಿನ ಜೊತೆಗೆ ಭಾರತೀಯ ಸಮಾಜವನ್ನು ಕಾಡುತ್ತಿರುವ ಮತ್ತೊಂದು ಬಹುಮಖ್ಯ ಸಮಸ್ಯೆಯಾಗಿ ಅನೈತಿಕ ಸಂಬಂಧಗಳು ಮತ್ತು ಕೊಲೆಗಳು ನಮ್ಮ ಜೀವನದಲ್ಲಿ ಭಾರಿ ಬದಲಾವಣೆಗೂ ಕಾರಣವಾಗಿದೆ…

ಅನೈತಿಕತೆ ಎಂಬುದು ಅನೇಕ ಆಯಾಮಗಳನ್ನು ಹೊಂದಿದೆ. ಆದರೆ ಹೆಣ್ಣು ಗಂಡಿನ ಲೈಂಗಿಕತೆಗೆ ಸಂಬಂಧಿಸಿದ ಅನೈತಿಕತೆ ಇತ್ತೀಚೆಗೆ ಅತ್ಯಂತ ಕಳವಳಕಾರಿ ಹಂತ ತಲುಪಿದೆ. ಅದರಲ್ಲೂ ಮದುವೆಯಾದ ಗಂಡು ಅಥವಾ ಹೆಣ್ಣು ಇನ್ನೊಬ್ಬ ಪುರುಷ ಅಥವಾ ಮಹಿಳೆಯೊಂದಿಗೆ ಸಂಬಂಧ ಹೊಂದುವುದು ಸಧ್ಯದ ಗಂಭೀರ ವಿಷಯ……..

ಇದು ತೀರಾ ಖಾಸಗಿ ವಿಷಯವಾದರು ಸಾಮಾಜಿಕ ಜಾಲತಾಣಗಳ ಸಂಪರ್ಕ ಕ್ರಾಂತಿಯಿಂದಾಗಿ ನಾವೆಲ್ಲಾ ಇದರಲ್ಲಿ ಪ್ರತ್ಯಕ್ಷವಾಗಿಯೋ , ಪರೋಕ್ಷವಾಗಿಯೋ ಅಥವಾ ಮಾನಸಿಕ ಅನುಮಾನಕ್ಕೋ, ಅಥವಾ ವೈಯಕ್ತಿಕ ವೇದನೆಗೋ ಕಾರಣವಾಗುತ್ತಿದ್ದೇವೆ.
ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಕೆಲವೊಮ್ಮೆ ನಮಗರಿವಿಲ್ಲದೇ, ಮತ್ತೆ ಕೆಲವೊಮ್ಮೆ ಆಕಸ್ಮಿಕವಾಗಿ ನಾವು ಇದರ ಒಳಸುಳಿಗೆ ಸಿಲುಕುವ ಸಾಧ್ಯತೆಗಳೂ ಇದೆ. ಈ ಸಂದರ್ಭದಲ್ಲಿ ನಾವೆಲ್ಲಾ ಪರಿಚಿತ ಮತ್ತು ಅಪರಿಚಿತ ಗೆಳೆಯರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಏಕೆಂದರೆ ಈ ಸಂಬಂಧಗಳು ಬೇರೆ ಎಲ್ಲೋ ಏರ್ಪಡುವುದಿಲ್ಲ. ಅದು ನಮ್ಮ ಸುತ್ತಮುತ್ತಲ ಸ್ನೇಹಿತರ ನಡುವೆಯೇ ಸಂಭವಿಸುತ್ತದೆ…..

ಹೇಗೆ ಅರ್ಥೈಸುವುದು ಈ ಸಂಬಂಧಗಳನ್ನು,
ಒಂದುಕಡೆ ವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ನನ್ನ ದೇಹ ನನ್ನ ಆಯ್ಕೆ ಎಂಬ ಧೋರಣೆ, ಮತ್ತೊಂದು ಕಡೆ ಬಲವಂತವಲ್ಲದ, ಕಾನೂನಿನ ಪ್ರಕಾರ ವಯಸ್ಸಿನ ಗಡಿ ದಾಟಿದ ಎಲ್ಲಾ ಒಪ್ಪಿತ ಸಂಬಂಧಗಳು ನೈತಿಕವೇ ಎಂಬ ವಾದ, ಮದುವೆಯಾದ ಮಾತ್ರಕ್ಕೇ ನಾವೇನು ಯಾರಿಗೂ ಮಾರಾಟವಾಗುವುದಿಲ್ಲ ಮತ್ತು ಹಾಗೆ ಬಹಿರಂಗವಾಗಿ ಹೇಳದಿದ್ದರೂ ತಮ್ಮ ಸಂಪರ್ಕಗಳಿಂದ ಆಕರ್ಷಣೆಗೆ ಒಳಗಾಗಿ ಈ ರೀತಿಯ ಸಂಬಂಧವನ್ನು ಮುಂದುವರಿಸುತ್ತಿರುವವರು ಅನೇಕರಿದ್ದಾರೆ……

ಇನ್ನೊಂದೆಡೆ ಗಂಡು ಹೆಣ್ಣು ಇಬ್ಬರೂ ಮದುವೆಯಾದ ತಕ್ಷಣ ತಮ್ಮ ದೇಹದ ಮೇಲೆ ಸ್ವಾತಂತ್ರ್ಯ ಕಳೆದುಕೊಳ್ಳುತ್ತಾರೆ, ಅದು ಇಬ್ಬರಿಗೂ ಹಂಚಿಕೆಯಾಗುತ್ತದೆ, ಸಾಯುವವರೆಗೂ ಅಥವಾ ಅಧೀಕೃತವಾಗಿ ವಿಚ್ಛೇದನ ಆಗುವವರೆಗೂ ಬೇರೆ ಯಾರೊಂದಿಗೂ ಸೇರುವಂತಿಲ್ಲ ಅದು ಅನೈತಿಕ ಎಂದೂ ವಾದ ಮಾಡಲಾಗುತ್ತದೆ……

ಬಹಳಷ್ಟು ಘಟನೆಗಳಲ್ಲಿ ಹೆಣ್ಣನ್ನೇ ಮುಖ್ಯ ಗುರಿಯಾಗಿಸಲಾಗುತ್ತದೆ ಮತ್ತು ಸಧ್ಯದ ನಮ್ಮ ಮನಸ್ಥಿತಿಯಲ್ಲಿ ಹೆಣ್ಣು ಖಾಸಗಿ ಆಸ್ತಿ ಎಂದೇ ಭಾವಿಸಲಾಗಿದೆ. ಆಕೆ ಇನ್ನೊಬ್ಬರ ಸಂಬಂಧ ಬೆಳೆಸಿದಲ್ಲಿ ಆ ಇಬ್ಬರನ್ನೂ ಕೊಲ್ಲದೆ ಆ ವ್ಯಕ್ತಿಗೆ ಬದುಕಲು ಸಾಧ್ಯವೇ ಆಗದ ಮಾನಸಿಕ ಸ್ಥಿತಿ ಏರ್ಪಟ್ಟಿದೆ. ಇದಂತೂ ಭಯಂಕರ ವಾತಾವರಣ. ಚರ್ಚೆಗಳಲ್ಲಿ, ವಿಚಾರ ಸಂಕಿರಣಗಳಲ್ಲಿ, ಉಪನ್ಯಾಸಗಳಲ್ಲಿ ಪುಂಖಾನುಪುಂಖವಾಗಿ ಮಾತನಾಡಬಹುದು. ಆದರೆ ವಾಸ್ತವ ಮಾತ್ರ ಘನಘೋರ. ಮಹಿಳೆಯರು ಸಹ ಇದಕ್ಕಾಗಿ ಕೊಲೆ ಮಾಡುವ ಮಾತು ಮಾಡಿಸುವ ಹಂತ ತಲುಪಿದ್ದಾರೆ…….

ಸ್ನೇಹಿತರೇ, ಎಲ್ಲರಲ್ಲೂ ನನ್ನದೊಂದು ಕಳಕಳಿಯ ಮನವಿ…….

ನೈತಿಕತೆ – ಸ್ವಾತಂತ್ರ್ಯ – ಕಾನೂನು – ವಾಸ್ತವ – ಭಾವನೆ – ಸತ್ಯ ಹೀಗೆ ಏನಾದರೂ ಇರಲಿ ಆದರೆ ಸಧ್ಯದ ಸ್ಥಿತಿಯಲ್ಲಿ ಅನೈತಿಕ ಸಂಬಂಧ ಆತ್ಮಹತ್ಯೆಗಿಂತಲೂ ಭೀಕರ. ಅದು ಸಾವಿನ ನಂತರವೂ ನಮ್ಮ ಕುಟುಂಬಗಳನ್ನು ಕಾಡುತ್ತದೆ. ಈ ಆಕರ್ಷಣೆಯನ್ನು ನಿಯಂತ್ರಿಸಿಕೊಳ್ಳಿ ಅಥವಾ ಕಾನೂನಿನ ಮುಖಾಂತರ ಅಧೀಕೃತ ಪರಿಹಾರ ಕಂಡುಕೊಳ್ಳಿ ಅಥವಾ ಕನಿಷ್ಠ ನಾಗರಿಕ ಪರಿಹಾರ ಹುಡುಕಿಕೊಳ್ಳಿ……

ಈ ರೀತಿಯ ಸಂಬಂಧ ಸೃಷ್ಟಿಸಿಕೊಳ್ಳುವ ಮೊದಲು ಸಾವಿರ ಸಲ ಯೋಚಿಸಿ. ಅತ್ಯಂತ ಕ್ರೂರ ರೀತಿಯಲ್ಲಿ ಸಾಯುವ ಸಾಧ್ಯತೆಯನ್ನು ನೆನಪಿಸಿಕೊಳ್ಳಿ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್‌ಸೂಟ್, ಶೂ ವಿತರಣೆ

ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…

12 hours ago

ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…

17 hours ago

ಅಕ್ಟೋಬರ್ 2….. ಶಾಸ್ತ್ರಿ ಮತ್ತು ಗಾಂಧಿ……..,

ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…

20 hours ago

ಬೆಂಬಲ ಬೆಲೆಯಡಿ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ಗೆ ಖರೀದಿಗೆ ಕೇಂದ್ರದ ಅನುಮೋದನೆ

2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…

1 day ago

ಸಿಎಂಗೆ ರೈತಪರ ಕಾಳಜಿ ಇಲ್ಲ ಶಾಸಕ ಧೀರಜ್ ಮುನಿರಾಜು ಆರೋಪ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…

1 day ago

ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ – ಡಿಸಿ ಅನುರಾಧ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಬಿಎಲ್‌ಒ ಅಥವಾ…

1 day ago