
ಬೆಂಗಳೂರಿನ ಹೆಬ್ಬಾಳ ಬಳಿಯ ಕೆಂಪಾಪುರ ಗ್ರಾಮದ ವೃದ್ಧ ದಂಪತಿ ಆತ್ಮಹತ್ಯೆಗೆ ಯತ್ನಿಸಿ ಪತಿ ಶಿವಪ್ಪ(76) ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಬಳಿ ಗುರುವಾರ ಸಂಭವಿಸಿದೆ.
ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ವೃದ್ಧ ಶಾಂತಮ್ಮ, ಶಿವಪ್ಪ ದಂಪತಿ ಒಂದೇ ಬಾರಿಗೆ ಆತ್ಮಹತ್ಯೆಯ ತೀರ್ಮಾನ ಮಾಡಿ ಬೆಂಗಳೂರಿನ ಹೆಬ್ಬಾಳ ಬಳಿಯ ಕೆಂಪಾಪುರದಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಬಳಿ ಆಗಮಿಸಿ ಒಟ್ಟಿಗೆ ವಿಷ ಸೇವನೆ ಮಾಡಿದ್ದಾರೆ.
ಘಟನೆಯಲ್ಲಿ ಪತ್ನಿ ಶಾಂತಮ್ಮ (69) ಪ್ರಾಣಪಾಯದಿಂದ ಪಾರಾಗಿದ್ದು, ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಕಲಾಂಗರಾಗಿದ್ದ ಶಿವಪ್ಪ (76) ಕಾಫಿಬೋರ್ಡ್ ನಿವೃತ್ತ ಉದ್ಯೋಗಿ ಆಗಿದ್ದರು. ಪುತ್ರ ಚಂದ್ರಶೇಖರ್ ವಿದೇಶದಲ್ಲಿ ನೆಲಸಿದ್ದಾರೆ. ಪುತ್ರಿ ಹರಿಣಿ ಬೆಂಗಳೂರಿನಲ್ಲಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.