ಅಂತಾರಾಷ್ಟ್ರೀಯ ಮಟ್ಟದಲ್ಲಿ ಅರಳಿದ ದೊಡ್ಡಬಳ್ಳಾಪುರದ‌ ಹೆಮ್ಮೆಯ ಯೋಗ ಪ್ರತಿಭೆ

ಆಧುನಿಕ‌ ಯುಗದ ಮಕ್ಕಳು ಮೊಬೈಲ್, ಟೆಲಿವಿಷನ್, ಪ್ರೀತಿ-ಪ್ರೇಮ, ಮಾದಕ ವಸ್ತುಗಳ ಸೇವನೆ ಸೇರಿದಂತೆ ಕೆಟ್ಟಚಟಗಳಿಗೆ ಒಳಗಾಗಿ ಮಾನಸಿಕವಾಗಿ ಖಿನ್ನತೆಯಿಂದ ಬಳಲಿ ಕೊನೆಗೆ ಅನಾರೋಗ್ಯ ಪೀಡಿತರಾಗಿಯೋ ಅಥವಾ ಆತ್ಮಹತ್ಯೆ ಮಾಡಿಕೊಂಡೋ ತಮ್ಮ ಉಜ್ವಲ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿರುವ ಸಾಕಷ್ಟು ಉದಾಹರಣೆಗಳು ಕಂಡುಬಂದಿವೆ.

ಕೆಲವು ಮಕ್ಕಳು ಶಾಲಾ-ಕಾಲೇಜಿಗೆ ಹೋದ ಪುಟ್ಟ, ಬಂದ ಪುಟ್ಟ ಎನ್ನುವ ಹಾಗೇ ಇರುತ್ತಾರೆ, ಪೋಷಕರು ಮಕ್ಕಳಿಂದ ಆಶಿಸುವುದು ಕೇವಲ ಮಾರ್ಕ್ಸ್ ಅಷ್ಟೇ. ಈ ಹಿನ್ನೆಲೆ ವಿದ್ಯಾರ್ಥಿಗಳು ಪೋಷಕರ ಆಸೆ ನೆರವೇರಿಸಲು ಕೇವಲ ಬುಕೀಶ್ ಆಗಿ ಮಾರ್ಕ್ಸ್ ಪಡೆಯುವಲ್ಲಿ ಚಿಂತನೆ ನಡೆಸುತ್ತಾರೆ.

ಆದರೆ, ಇಲ್ಲೊಂದು ಪ್ರತಿಭೆ ಇದೆ. ವಿದ್ಯಾಭ್ಯಾಸದ ಜೊತೆಗೆ ಯೋಗದಲ್ಲಿ ಮಹತ್ತರವಾದ ಸಾಧನೆ ಮಾಡಿ ಲವಲವಿಕೆಯಿಂದ ಇದೆ. ಆ ಪ್ರತಿಭೆ ಬೇರೆ ಯಾರೂ ಅಲ್ಲ ನಮ್ಮ ದೊಡ್ಡಬಳ್ಳಾಪುರದ ಯೋಗ ಪ್ರತಿಭೆ ಕುಮಾರಿ ಜಾನ್ಹವಿ M.R.

ಇದೀಗಷ್ಟೇ 10ನೇ ತರಗತಿ ಮುಗಿಸಿ ಮೊದಲ ಪಿಯುಸಿಗೆ ಕಾಲಿಟ್ಟಿರುವ ಈ  ಬಾಲಕಿ, ಯೋಗ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆಗೈದಿದ್ದಾಳೆ. ಯೋಗದ ವಿವಿಧ ಬಂಗಿಗಳನ್ನ ನೀರು ಕುಡಿದಂತೆ ಪ್ರದರ್ಶನ ಮಾಡುವ ಈ ಬಾಲಕಿ ನಗರದ ಶಾಂತಿನಗರದ ನಿವಾಸಿಗಳಾದ ರವಿಕುಮಾರ್ ಮತ್ತು ರತ್ನ ದಂಪತಿ ಮಗಳು.

ಈ ಯೋಗಪಟು ಜಾನ್ಹವಿ ನಗರದ ನಿಸರ್ಗ ಯೋಗ ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ಕಠಿಣ ತರಬೇತಿಯನ್ನು ಪಡೆದು ಯೋಗ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ ನಡೆದ 40ಕ್ಕೂ ಹೆಚ್ಚು ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ, ಗೌರವ, ಪುರಸ್ಕಾರಗಳಿಗೆ ಭಾಜನರಾಗಿ ದೊಡ್ಡಬಳ್ಳಾಪುರಕ್ಕೆ ಕೀರ್ತಿ ತಂದಿದ್ದಾಳೆ.

2019 ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ 9 ನೇ ಏಷ್ಯನ್ ಯೋಗ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾರೆ, ಸಾಂಪ್ರದಾಯಿಕ ಯೋಗದಲ್ಲಿ ಬೆಳ್ಳಿ ಪದಕ ಮತ್ತು ಲಯಬದ್ಧ ಯೋಗದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ.

ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು 7 ಬಾರಿ ಪ್ರತಿನಿಧಿಸಿ 1 ಬೆಳ್ಳಿ ಪದಕ ಮತ್ತು 2 ರಲ್ಲಿ 6 ಮತ್ತು 5 ನೇ ಸ್ಥಾನವನ್ನು ಗೆದ್ದಿದ್ದಾರೆ. 2023ರ 7ನೇ ಫೆಡರೇಶನ್ ಕಪ್‌ನಲ್ಲಿ ರಿದಮಿಕ್ ಯೋಗದಲ್ಲಿ 5ನೇ ಸ್ಥಾನ ಪಡೆದಿದ್ದಳು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಮಟ್ಟದ ಪ್ರಶಸ್ತಿ ಹಾಗೂ ಹತ್ತು ಸಾವಿರ ನಗದು ಬಹುಮಾನ. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಶಸ್ತಿ, ಜಿಲ್ಲಾಡಳಿತದಿಂದ ಗಣರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಬೆಂಗಳೂರಿನ ಏಕತಾ ಫೌಂಡೇಶನ್‌ನಿಂದ ಏಕತಾ ರಾಜ್ಯ ಸುಯೋಗಿ ಪ್ರಶಸ್ತಿ- 2022 ಅನ್ನು ಸ್ವೀಕರಿಸಿದ್ದಾರೆ.

ಅಸ್ಸಾಂನ ಗುವಾವಾಟಿಯಲ್ಲಿ ನಡೆದ 48ನೇ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ನಲ್ಲಿ 14 ರಿಂದ 16 ವರ್ಷ ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕವನ್ನ ಪಡೆದಿದ್ದಾರೆ.

ಯೋಗಪಟು ಎಂ.ಆರ್. ಜಾನ್ಹವಿ ರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿಯ ಸಾಧನೆ ಮಾಡಿದ ಹಿನ್ನೆಲೆ ದೊಡ್ಡಬಳ್ಳಾಪುರ ಜನತೆ ಅಭಿನಂದನೆಗಳನ್ನ ಸಲ್ಲಿಸಿದ್ದರು.

ಮೈಸೂರು  ದಸರಾದಲ್ಲಿ ಯೋಗ ಪ್ರದರ್ಶನ ಮಾಡಿರುವ ಜಾನ್ಹವಿ ರಾಜ್ಯ ಮಟ್ಟದ ಯೋಗ ಸ್ವರ್ಥೆಯಲ್ಲಿ  ಭಾಗವಹಿಸಿ  ಹಲವು  ಪದಕಗಳನ್ನ ಮುಡಿಗೇರಿಸಕೊಂಡಿದ್ದಾಳೆ.

ಸ್ಮರಣ ಶಕ್ತಿ ಮತ್ತು ಸದೃಢ ಆರೋಗ್ಯಕ್ಕಾಗಿ ಚಿಕ್ಕ ವಯಸ್ಸಿಂದ ಮಗಳನ್ನು ಯೋಗ ಕಲಿಯಲು ಸೇರಿಸಿದ್ದು, ಈಗ ಅದೇ ಕ್ಷೇತ್ರದಲ್ಲಿ ವಿವಿಧ ಕ್ಲಿಷ್ಟಕರ ಆಸನಗಳನ್ನ ಮಾಡುವ ಮೂಲಕ ಎಲ್ಲರನ್ನ ನಿಬ್ಬೆರಗಾಗುವಂತೆ ಮಾಡಿರುವ ಜಾನ್ಹವಿ. ಮಗಳ ಸಾಧನೆ ಕಂಡು ಪೋಷಕರು ಖುಷಿಗೊಂಡಿದ್ದಾರೆ.

ನಮ್ಮ ಮಗಳ ಈ ಎಲ್ಲಾ ಸಾಧನೆಗಳಿಂದ ನಮಗೆ ಖುಷಿ‌ ತಂದಿದೆ. ಮನೆಯಲ್ಲಿ ಹಾಗೂ ಯೋಗ ತರಬೇತಿ ಕೇಂದ್ರದಲ್ಲಿ ಪ್ರತಿದಿನ ಕಠಿಣ ಅಭ್ಯಾಸ ಮಾಡುತ್ತಿರುತ್ತಾಳೆ. ಅದೇರೀತಿ ಓದುವ ಕಡೆಗೂ ಗಮನ ಹರಿಸುತ್ತಾಳೆ. ನಮ್ಮ ಮಗಳು ನಮ್ಮ ಹೆಮ್ಮೆ ಎಂದು ಜಾನ್ಹವಿ ಸಾಧನೆಗೆ ಪೋಷಕರು ಹೆಮ್ಮೆಯ ಮಾತುಗಳನ್ನಾಡಿದರು.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ದುಶ್ಚಟಗಳಿಗೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳದೇ ಪ್ರತಿದಿನ ಯೋಗ ಮಾಡಿ ಆರೋಗ್ಯವನ್ನ ಸ್ಥಿರವಾಗಿ ಕಾಪಾಡಿಕೊಳ್ಳಬೇಕು ಎಂದು ಯೋಗಪಟು ಎಂ.ಆರ್.ಜಾನ್ಹವಿ ಹೇಳಿದರು.

ನಾನು ಓದುವ ಜೊತೆಗೆ ಯೋಗಾಭ್ಯಾಸ ಮಾಡುತ್ತೇನೆ. ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ವಿವಿಧ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದೇನೆ. ಇದಕ್ಕೆಲ್ಲ ನನ್ನ ಯೋಗ ಟೀಚರ್‌ ಹಾಗೂ ನನ್ನ ತಂದೆ-ತಾಯಿ. ಯೋಗದಲ್ಲಿ ಇನ್ನಷ್ಟು ಸಾಧನೆ ಮಾಡುವ ಹಂಬಲ ನನಗಿದೆ. ಈ ನಿಟ್ಟಿನಲ್ಲಿ ಅಭ್ಯಾಸ ಮಾಡುವೆ. ಎಲ್ಲರೂ ಯೋಗ ಮಾಡಿ ಆರೋಗ್ಯದಿಂದಿರಿ ಎಂದು ಹೇಳಿದರು.

Ramesh Babu

Journalist

Recent Posts

ನೇಪಾಳದ ದಂಗೆ……

ಕೋವಿಡ್ ನಂತರದ ವಿಶ್ವದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಜಗತ್ತು ಬದಲಾವಣೆಯ ಹಾದಿಯಲ್ಲಿರುವಂತೆ ಕಾಣುತ್ತಿದೆ. ಕೆಲವು ಆಕ್ರಮಣಕಾರಿ ಯುದ್ಧಗಳು, ಮುಂದುವರಿದ ಭಯೋತ್ಪಾದನಾ…

46 minutes ago

22 ವರ್ಷದ ಯುವಕ‌ ಮನೆಯಲ್ಲಿ ನೇಣಿಗೆ ಶರಣು

22 ವರ್ಷದ ಯುವಕ‌ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ‌ ತೂಬಗೆರೆ ಹೋಬಳಿಯ ನಾರಸಿಂಹನಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ…

4 hours ago

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ…

14 hours ago

ನಟ ಪ್ರಥಮ್ ಗೆ ಜೀವ ಬೆದರಿಕೆ, ಹಲ್ಲೆ ಯತ್ನ ಪ್ರಕರಣ: ಆರೋಪಿ ಯಶಸ್ವಿನಿ‌ ಗೌಡ, ಬೇಕರಿ ರಘುಗೆ ನ್ಯಾಯಾಂಗ ಬಂಧನ: ಸತ್ಯಕ್ಕೆ ಸಿಕ್ಕ ಜಯ ಎಂದ ಪ್ರಥಮ್

ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ‌ ಗೌಡ,…

14 hours ago

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 25 ಪ್ರವಾಸಿ ತಾಣಗಳು ಗುರುತು

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…

18 hours ago

ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…

20 hours ago