ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC) ಚಿಕ್ಕಬಳ್ಳಾಪುರ ವಿಭಾಗದ ದೊಡ್ಡಬಳ್ಳಾಪುರ ಘಟಕದಲ್ಲಿ ಕಳೆದ ಐದು ವರ್ಷಗಳಿಂದ ಅಪಘಾತ ರಹಿತವಾಗಿ ಚಾಲನೆ ಮಾಡಿರುವ ಚಾಲಕರಿಗೆ ಬೆಳ್ಳಿ ಪದಕ ಹಾಗೂ ನಗದು ಪುರಸ್ಕಾರ ವಿತರಣೆ ಮಾಡಿ ಗೌರವಿಸಲಾಯಿತು.
ದೊಡ್ಡಬಳ್ಳಾಪುರ ಘಟಕದ 10 ಮಂದಿ ಚಾಲಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
1. ಕೃಷ್ಣಪ್ಪ ಕೆ ಎನ್ (2350)
2. ನಿಂಗಪ್ಪ ಗುಡ್ಡದಕೇರಿ (2557)
3. ರಾಮಕೃಷ್ಣ ಜೆ (3832)
4. ಬಸವರಾಜು (3852)
5. ನಾರಾಯಣಸ್ವಾಮಿ ಎಂ ಎನ್ (4166)
6. ರಂಜಿತ್ ಕುಮಾರ್ (7977)
7. ರಾಮಾಂಜಿನಪ್ಪ ಕೆ (18417)
8. ಶ್ರೀನಿವಾಸ ಎಂ (27056)
9. ವಿಜಯ ಕುಮಾರ್ ಎಂ (534)
10. ಮಹಾಂತೇಶ್ ಗದ್ದಿ (545)
ಇಂದು ಚಿಕ್ಕಬಳ್ಳಾಪುರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಬೆಳ್ಳಿ ಪದಕ ವಿತರಣಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ರವೀಂದ್ರ ಅವರಿಂದ ಪ್ರಶಸ್ತಿ ಪ್ರದಾನ ನಡೆಯಿತು.
ವೈದ್ಯನ ಜಾಗರೂಕತೆಯಿಂದ ಒಬ್ಬ ರೋಗಿಯ ಪ್ರಾಣ ಉಳಿಸಬಹುದು, ಆದರೆ ಬಸ್ ಚಾಲಕ ಕೈಯಲ್ಲಿ ನೂರಾರು ಮಂದಿ ಪ್ರಯಾಣಿಕರ ಪ್ರಾಣ ಇರುತ್ತದೆ. ಪ್ರತಿಯೊಬ್ಬರ ಪ್ರಾಣ ತನ್ನ ಪ್ರಾಣದಂತೆ ಭಾವಿಸಿ ಎಚ್ಚರಿಕೆಯಿಂದ ಬಸ್ ಚಾಲನೆ ಮಾಡುತ್ತಾನೆ. ಅಂತಹವರಿಗೆ ನಾವು ಗೌರವಿಸಲೇಬೇಕು. ಇವರ ಸಾಧನೆ ಇತರೆ ನೌಕರರಿಗೆ ಮಾದರಿಯಾಗಬೇಕು. ಚಾಲಕ ವೃತ್ತಿ ಎನ್ನುವುದು ಒಂದು ಜವಾಬ್ಧಾರಿ ಕೆಲಸ, ಇದನ್ನು ಸಮರ್ಥವಾಗಿ ನಿಭಾಯಿಸಬೇಕು.
ಈ ವೇಳೆ ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಧಿಕಾರಿ ಹಿಮವರ್ಧನ ನಾಯ್ಡು, ವಿಭಾಗೀಯ ಯಾಂತ್ರಿಕ ಅಭಿಯಂತರಾದ ಎಂ.ಸಿ.ಕೆಳಗೇರಿ, ವಿಭಾಗೀಯ ಸಂಚಾರ ಅಧಿಕಾರಿ ಮಂಜುನಾಥ, ಉಗ್ರಾಣಾಧಿಕಾರಿ ವೆಂಕಟರಮಣಪ್ಪ, ದೊಡ್ಡಬಳ್ಳಾಪುರ ಘಟಕದ ವ್ಯವಸ್ಥಾಪಕ ಸಂತೋಷ್ ಎಸ್.ಆರ್ ಸೇರಿದಂತೆ ವಿಭಾಗದ ಎಲ್ಲಾ ಅಧಿಕಾರಿಗಳು ಹಾಗೂ ಘಟಕ ವ್ಯವಸ್ಥಾಪಕರು, ಸಿಬ್ಬಂದಿ ಹಾಜರಿದ್ದರು.
ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…
ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…
ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…
ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…
ಯಲಹಂಕ ತಾಲೂಕಿನ ಜಾಲ ಹೋಬಳಿಯ ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಸಿ. ಗೋವಿಂದಪ್ಪ ಅವಿರೋಧವಾಗಿ…
ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ಮುಕ್ತ ರಾಷ್ಟ್ರ ಎಂದು ಮತ್ತೊಮ್ಮೆ ಸಾಬೀತು ಮಾಡೋಣ…