ತಾಲೂಕು ಪಂಚಾಯಿತಿ ನೂತನ ಇಒ ಎನ್.ಮುನಿರಾಜು ಅಧಿಕಾರ ಸ್ವೀಕಾರ: ಅಧಿಕಾರ ಹಸ್ತಾಂತರ ಮಾಡಿದ ನಿಕಟಪೂರ್ವ ಇಒ ಶ್ರೀನಾಥ್ ಗೌಡ

ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿಯ ನೂತನ ಇಒ(ಕಾರ್ಯನಿರ್ವಾಹಕಾಧಿಕಾರಿ) ಆಗಿ ಅಧಿಕಾರ ಸ್ವೀಕರಿಸಿದ ಎನ್.ಮುನಿರಾಜು. ಪುಷ್ಪಗುಚ್ಛ ನೀಡುವ ಮೂಲಕ ಶುಭ ಕೋರಿ ಅಧಿಕಾರ ಹಸ್ತಾಂತರ ಮಾಡಿದ ನಿಕಟಪೂರ್ವ ಇಒ ಶ್ರೀನಾಥ್ ಗೌಡ.

ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿಗೆ ನೂತನ ಕಾರ್ಯನಿರ್ವಾಹಕಾಧಿಕಾರಿಯಾಗಿ ಮಾಲೂರು ತಾಲೂಕು ಪಂಚಾಯಿತಿ ಇಒ ಆಗಿದ್ದ ಎನ್.ಮುನಿರಾಜು ಅವರನ್ನು ನೇಮಿಸಿ ಸರ್ಕಾರ ಆದೇಶಿಸಿತ್ತು. ಈ ಹಿನ್ನೆಲೆ ಇಂದು ಅಧಿಕಾರ ಸ್ವೀಕಾರ ಮಾಡಿದರು.

ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿಯಿಂದ ದೇವನಹಳ್ಳಿ ತಾಲೂಕು ಪಂಚಾಯಿತಿಗೆ ಇಒ ಆಗಿ ಶ್ರೀನಾಥ್ ಗೌಡ ಅವರು ವರ್ಗಾವಣೆ ಆದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಎನ್.ಮುನಿರಾಜು ಅವರನ್ನು ನೇಮಕ ಮಾಡಲಾಗಿತ್ತು.

Leave a Reply

Your email address will not be published. Required fields are marked *