ವಿಪಕ್ಷಗಳ ಒಕ್ಕೂಟಕ್ಕೆ INDIA ಎಂದು ನಾಮಕರಣ: ಸಮೃದ್ಧ ಭಾರತದಲ್ಲಿ ಇಂಡಿಯಾ ಹೆಸರಲ್ಲಿ ಖದೀಮ ಕಂಪನಿಗಳು ಹುಟ್ಟುತ್ತವೆ: ಭಾರತವನ್ನು ಕೊಳ್ಳೆ ಹೊಡೆಯಲು ಇಟಲಿ ಈಸ್ಟ್ ಇಂಡಿಯಾ ಕಂಪನಿ ಘೋಷಣೆ- ಬಿಜೆಪಿ ಆಕ್ರೋಶ

2024ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಧ್ಯೇಯದೊಂದಿಗೆ ಒಂದಾಗಿರುವ ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯನ್​ ನ್ಯಾಷನಲ್ ಡೆವಲಪ್ ಮೆಂಟಲ್​​ ಇನ್​ಕ್ಲೂಸಿವ್​​​​ ಅಲೈನ್ಸ್(INDIA) ಎಂದು ನಾಮಕರಣ.

ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ಪ್ರತಿಪಕ್ಷಗಳ ಸಭೆಯ ನಡೆಯುತ್ತಿದೆ. ಈ ಬಗ್ಗೆ ಸಭೆಯಲ್ಲಿ ಭಾಗಿಯಾಗಿರುವ ನಾಯಕರಿಂದ ಗಂಭೀರ ಚರ್ಚೆ ನಡೆದ ಬಳಿಕ. ಇಂಡಿಯಾ ಹೆಸರಿಗೆ ಮೈತ್ರಿಕೂಟ ನಾಯಕರ ಒಪ್ಪಿಗೆ ಸೂಚಿಸಿದ ಬಳಿಕ ಇಂಡಿಯಾ ಎಂದು ಘೋಷಣೆ.

ವಿಪಕ್ಷಗಳ ಒಕ್ಕೂಟಕ್ಕೆ INDIA ಎಂದು ನಾಮಕರಣ ಆದ ಕೂಡಲೇ ಬಿಜೆಪಿ ಮೈತ್ರಿ ಒಕ್ಕೂಟದ ವಿರುದ್ಧ ಕಿಡಿಕಾರಿದೆ. ಭಾರತ ಸಮೃದ್ಧವಾದಾಗಲೆಲ್ಲಾ INDIA ಹೆಸರಿನಲ್ಲಿ ಖದೀಮ ಕಂಪನಿಗಳು ಹುಟ್ಟಿಕೊಳ್ಳುತ್ತವೆ ಎಂದು ಲೇವಡಿ ಮಾಡಿರೋ ಬಿಜೆಪಿ

ಅಂದು ಬ್ರಿಟಿಷ್‌ ಈಸ್ಟ್‌ INDIA ಕಂಪನಿ ಸ್ಥಾಪಿತವಾಗಿ ಭಾರತದ ತುಂಡರಸರನ್ನೆಲ್ಲಾ ಸೇರಿಸಿ ದೇಶವನ್ನು ಕೊಳ್ಳೆ ಹೊಡೆಯಿತು. ಇಂದು ಮತ್ತೊಮ್ಮೆ ಸಮೃದ್ಧ ಭಾರತವನ್ನು ಕೊಳ್ಳೆ ಹೊಡೆಯಲು ಹೊಂಚಾಕಿ ಇಟಲಿ ಈಸ್ಟ್‌ INDIA ಕಂಪನಿಯ ಘೋಷಣೆಯಾಗಿದೆ. ಆದರೆ ಈ ಕಂಪನಿ ಸದ್ಯದಲ್ಲೇ ಬರ್ಕಾಸ್ತಾಗಲಿರುವುದು ನಿಶ್ಚಿತ ಎಂದು ಭವಿಷ್ಯ ನುಡಿಗಳನ್ನಾಡಿದೆ.

Leave a Reply

Your email address will not be published. Required fields are marked *