ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ದೊಡ್ಡಬಳ್ಳಾಪುರ: ಒಡ್ಡರಹಳ್ಳಿ ಹಾಗೂ ದೊಡ್ಡಬಳ್ಳಾಪುರ ರೈಲು ನಿಲ್ದಾಣಗಳ ನಡುವಿನ ಡಿ ಕ್ರಾಸ್ ರೈಲ್ವೆ ಬ್ರಿಡ್ಜ್ ಸಮೀಪ ಶುಕ್ರವಾರ (ಸೆ.11) ಮಧ್ಯಾಹ್ನ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಗೆ ಸುಮಾರು 55ರಿಂದ 60 ವರ್ಷ ವಯಸ್ಸಾಗಿದ್ದು, ಅವರ ಹೆಸರು ಹಾಗೂ ವಿಳಾಸ ಇನ್ನೂ ಪತ್ತೆಯಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ.147/2026, ಬಿಎನ್‌ಎಸ್ ಕಾಯ್ದೆ ಕಲಂ 194ರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಮೃತರು ಸುಮಾರು 165 ಸೆಂ.ಮೀ. ಎತ್ತರ, ಎಣ್ಣೆ ಗೆಂಪು ಮೈಬಣ್ಣ, ದುಂಡು ಮುಖ ಹಾಗೂ ಸಾಧಾರಣ ಶರೀರ ಹೊಂದಿದ್ದಾರೆ. ಕಪ್ಪು-ಬಿಳಿ ಮಿಶ್ರಿತ ಗಡ್ಡ, ಮೀಸೆ ಹಾಗೂ ಕಪ್ಪು-ಬಿಳಿ ಮಿಶ್ರಿತ ತಲೆಕೂದಲು ಇರುತ್ತದೆ.

ಮೃತರು ನೀಲಿ ಬಣ್ಣದ ಬಿಳಿ ಗೆರೆಗಳಿರುವ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕಾಫಿ ಬಣ್ಣದ ಒಳಬನಿಯನ್ ಹಾಗೂ ನೀಲಿ ಬಣ್ಣದ ಅಂಡರ್‌ವೇರ್ ಧರಿಸಿದ್ದರು. ಶರ್ಟ್‌ನ ಕಾಲರ್‌ನಲ್ಲಿ ‘ದೀಪ್ ಮೆನ್ಸ್ ವೇರ್, ಹೆಬ್ಬಾಳ’ ಎಂಬ ಟೈಲರ್ ಮಾರ್ಕ್ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯ ಗುರುತು ಅಥವಾ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ ಠಾಣೆಯ 9108630967, 9902193960 ಹಾಗೂ ರೈಲ್ವೆ ಪಿಎಸ್‌ಐ 9480802118 ಸಂಖ್ಯೆಗೆ ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!