ಹೆಚ್‌ಡಿಕೆಗೆ ಶಾಸಕ ಪ್ರದೀಪ್ ಈಶ್ವರ್ ಟಾಂಗ್: “32 ಎಕರೆ ಆಸ್ತಿ ದಾಖಲೆ ನನ್ನ ಮುಖದ ಮೇಲೆ ಬಿಸಾಕಿ”

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಾಚ್‌ ವಿವಾದವನ್ನು ಪ್ರಸ್ತಾಪಿಸಿ ತೀವ್ರ ವಾಗ್ದಾಳಿ ನಡೆಸಿದರು.

ಹೆಚ್‌ಡಿಕೆ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಧರಿಸಿದ್ದ 62 ವಾಚ್‌ಗಳ ಫೋಟೋಗಳನ್ನು ನಾನು ಬಿಡುಗಡೆ ಮಾಡಿದ್ದೇನೆ. ಗೋಲ್ಡ್‌ ಕಲರ್‌ ವಾಚ್‌ಗಳು ಸೇರಿದಂತೆ ಹಲವು ದುಬಾರಿ ವಾಚ್‌ಗಳನ್ನು ಧರಿಸಿದ್ದಾರೆ. ಈಗ ಹೆಚ್‌ಎಂಟಿ ವಾಚ್‌ ಕಟ್ಟಿಕೊಂಡು ಬಂದರೆ ಜನರು ನಂಬಬೇಕಾ? ಎಂದು ಪ್ರಶ್ನಿಸಿದರು.

ತಮ್ಮ ಟ್ರಸ್ಟ್‌ಗೆ ಹಣ ಬಂದ ಬಗ್ಗೆ ಪ್ರಶ್ನೆ ಕೇಳಿದಾಗ ದಾಖಲೆಗಳನ್ನು ನೀಡಿದ್ದೇನೆ ಎಂದು ಹೇಳಿದ ಅವರು, ನಾನು ಡಾಕ್ಯುಮೆಂಟ್‌ಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಅದೇ ರೀತಿ ನಿಮ್ಮ 32 ಎಕರೆ ಆಸ್ತಿ ಹೇಗೆ ಬಂತು ಎಂಬ ದಾಖಲೆಗಳನ್ನು ನನ್ನ ಮುಖದ ಮೇಲೆ ಬಿಸಾಕಿ, ಎಂದು ಕುಮಾರಸ್ವಾಮಿಗೆ ಸವಾಲು ಹಾಕಿದರು.

ಮುಂದುವರಿದು ವ್ಯಂಗ್ಯವಾಡಿದ ಅವರು, ನಮ್ಮ ತೋಟದಲ್ಲಿ ಬೆಳೆದ ಬದನೆಕಾಯಿಯನ್ನು ಕೆಜಿಗೆ 500ಕ್ಕೆ ಮಾರಿದೆ, ಟೊಮ್ಯಾಟೊವನ್ನು ಕೆಜಿಗೆ 2,000ಕ್ಕೆ ಮಾರಿದೆ. ಅದರಿಂದ ಬಂದ ಹಣದಲ್ಲಿ ವಾಚ್‌ ಖರೀದಿಸಿದ್ದೇನೆ ಎಂದು ದಾಖಲೆ ತೋರಿಸಿ. ನಂತರ ನಿಮ್ಮನ್ನು ಪ್ರಶ್ನಿಸುವುದೇ ಇಲ್ಲ, ಎಂದು ಟಾಂಗ್ ನೀಡಿದರು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!