
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಹಾಡೋನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘ(ವಿಎಸ್ಎಸ್ ಎನ್) ಚುನಾವಣೆ ನಡೆದಿದ್ದು, ವಿಎಸ್ಎಸ್ ಎನ್ ನ ನೂತನ ಅಧ್ಯಕ್ಷರಾಗಿ ರಾಮನಾಯ್ಕ್, ಉಪಾಧ್ಯಕ್ಷರಾಗಿ ಗಂಗಲಕ್ಷ್ಮಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನವಾಗಿ ವಿಎಸ್ಎಸ್ ಎನ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಮನಾಯ್ಕ್ ಹಾಗೂ ಗಂಗಲಕ್ಷ್ಮಮ್ಮ ಅವರನ್ನು ತೂಬಗೆರೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ರವಿಸಿದ್ದಪ್ಪ, ರಂಗಪ್ಪ, ಗಂಗಸಂದ್ರ ಶ್ರೀಧರ್, ಚಿದಾನಂದ, ಸೇರಿದಂತೆ ಇತರೆ ಗಣ್ಯರು ಅಭಿನಂದಿಸಿದ್ದಾರೆ.
ಅಭಿನಂದನೆ ಸ್ವೀಕರಿಸಿ ವಿಎಸ್ಎಸ್ ಎನ್ ನೂತನ ಅಧ್ಯಕ್ಷ ರಾಮನಾಯ್ಕ್ ಮಾತನಾಡಿ, ಪಹಣಿಗಳ ಆಧಾರದ ಮೇಲೆ ಲೋನ್ ನೀಡಲಾಗುವುದು. ಲೋನ್ ಗೆ ಶೇ.3ರಷ್ಟು ಬಡ್ಡಿ ಇರುತ್ತದೆ. ಸಂಘಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಾಣಕ್ಕಾಗಿ ಶ್ರಮಿಸಲಾಗುವುದು. ಪಡಿತರ ಕೇಂದ್ರ ಪ್ರಾರಂಭಿಸಲು ನಿರ್ಧಾರ ಮಾಡಿದ್ದೇವೆ. ರೈತರ ಅಭಿವೃದ್ಧಿಗೆ ಸದಾ ಬದ್ಧರಾಗಿರುತ್ತೇವೆ ಎಂದರು..