ಬದುಕಿದ್ದ ಗಂಡನಿಗೆ ಸೋಷಿಯಲ್ ಮೀಡಿಯಾದಲ್ಲಿ “RIP” ಹಾಕಿದ ಹೆಂಡತಿ.?: ಬಿಟ್ಟೋದ ಹೆಂಡತಿಯನ್ನು ಕರೆತರಲು ಹೋದ ಗಂಡನ ಮೇಲೆ ಮಾರಣಾಂತಿಕ ಹಲ್ಲೆ…?

ಶೋಕಿಗೆ ಬಿದ್ದ ಹೆಂಡತಿ ಹೈಪೈ ಜೀವನಕ್ಕಾಗಿ ಗಂಡನಿಗೆ ಊರು ಬಿಡಿಸಿ ಸಿಟಿ ಸೇರಿದ್ದರು.. ಗಂಡನ ಕೈತುಂಬಾ ಕಾಸಿದ್ದಾಗ ಚಿನ್ನ, ರನ್ನ ಅಂದವಳು.. ಗಂಡನ ಬಳಿ ಕಾಸು ಕಮ್ಮಿ ಆಗುತ್ತಿದ್ದಂತೆ ಮನೆಯಲ್ಲಿ ತಕರಾರು ತೆಗೆದು ಮನೆ ಬಿಟ್ಟು, ಸೋಷಿಯಲ್ ಮೀಡಿಯಾದಲ್ಲಿ ಗಂಡನ ಫೋಟೋ ಹಾಕಿ RIP ಅಂತ ಹಾಕಿದ್ದಳು, 

ಇತ್ತ ಗಂಡ ಮಾತ್ರ ಹೆಂಡತಿ, ಮಕ್ಕಳಿಗಾಗಿ ಪ್ರತಿದಿನ ಗೋಗರೆದು ಹೆಂಡತಿ ಮತ್ತು ಮಕ್ಕಳನ್ನು ಕರೆ ತರಲು ಊರಿಗೆ ಹೋಗಿದ್ದೆ ತಡ ಹೆಂಡತಿಯ ಅಣ್ಣತಮ್ಮಂದಿರು, ಸಂಬಂಧಿಕರು ಕಾರದ ಪುಡಿ ಎರಚಿ, ರಾಡ್, ದೋಣ್ಣೆ, ಕಲ್ಲುಗಳಿಂದ ಮನಸ್ಸೋ ಇಚ್ಚೆ ಹಲ್ಲೆ ಮಾಡಿ ಪರಾರಿಯಾಗಿರುವ ಆರೋಪ ಕೇಳಿ ಬಂದಿದೆ.

ಹೀಗೆ ಕಾರು ಪುಡಿಪುಡಿಯಾಗಿರುವ ಕಾರು ಮತ್ತೊಂದು ಕಡೆ ಪೊಲೀಸ್ ಠಾಣೆ ಮುಂದೆ ಸೇರಿರುವ ಜನರು.. ಈ ದೃಶ್ಯಗಳ ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ. ಹೌದು.. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೊಡ್ಡತೇಕಹಳ್ಳಿಯ ಕುಮಾರ್ ಎಂಬುವವರು, ಗೌರಿಬಿದನೂರು ತಾಲೂಕಿನ ಸಾಗಾನಹಳ್ಳಿಯ ಅನುಜಾ ಜೊತೆ ಒಂಬತ್ತು ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದರು.. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಕುಮಾರ್ ಬೆಂಗಳೂರಿನಲ್ಲಿ ಕಾರು ಚಾಲಕ ಹಾಗೂ ಕಾರು ಮಾಲೀಕರಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕುಮಾರ್ ತನ್ನ ಹೆಂಡತಿಯ ಆಸೆಯಂತೆ ಪೋಷಕರನ್ನು ಬಿಟ್ಟು ಕಳೆದ ಐದು ವರ್ಷಗಳಿಂದ ದೇವನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿ ವಾಸವಾಗಿದ್ದರು ಎನ್ನಲಾಗಿದೆ.. ಆದರೆ ಕಳೆದ ಐದಾರು ತಿಂಗಳಿಂದ ದಂಪತಿಯ ನಡುವೆ ಕುಟುಂಬ ಕಲಹ ಹೆಚ್ಚಾಗಿತ್ತು. ಪ್ರತಿನಿತ್ಯ ದಂಪತಿಗಳ ನಡುವೆ ಜಗಳ ಆರಂಭವಾಗಿ ಹೆಂಡತಿ ಅನುಜಾಳಿಂದ ಮಾನಸಿಕ ಕಿರುಕುಳದಿಂದ ಕುಮಾರ್ ಆರ್ಥಿಕ ಸಂಕಷ್ಟಕ್ಕೂ ಒಳಗಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ನಡುವೆ ಇದ್ದಕ್ಕಿದ್ದಂತೆ ಹೆಂಡತಿ, ಗಂಡನಿಗೆ ತಿಳಿಯದ ಹಾಗೆ ತನ್ನ ಮಕ್ಕಳ ಜೊತೆ ದೇವನಹಳ್ಳಿಯ ಬಾಡಿಗೆ ಮನೆ ಕಾಲಿ ಮಾಡ್ಕೊಂಡು ಹುಟ್ಟೂರು ಗೌರಿಬಿದನೂರಿಗೆ ಬಂದಿದ್ದಾಳೆ.. ಇದ್ರಿಂದ‌ ಆತಂಕಗೊಂಡ ಕುಮಾರ್, ಹೆಂಡತಿ ಫೋನ್ ಮಾಡಿ ಹಿಂತಿರುಗುವಂತೆ ಗೋಗರೆದಿದ್ದಾನಂತೆ.. ಇದನ್ನು ಲೆಕ್ಕಿಸದ ಹೆಂಡತಿ ನಿನ್ನ ಸಹವಾಸವೇ ಬೇಡವೆಂದು ಸೋಷಿಯಲ್ ಮೀಡಿಯಾದಲ್ಲಿ ಗಂಡನು ಸತ್ತಿದ್ದಾನೆಂದು ಫೋಟೋ ಹಾಕಿದ್ದಾಳೆ. ಇದೇ ವಿಚಾರವಾಗಿ ಕೋಪ ವಿಕೋಪಗೊಂಡು ಫೋನ್‌ನಲ್ಲಿ ಪತ್ನಿಯ ಅಣ್ಣ ಭಾಸ್ಕರ್ ಜೊತೆ ವಾಗ್ವಾದ ನಡೆದಿದ್ದು, ಕುಮಾರ್ ತನ್ನ ಸಂಬಂಧಿಕರ ಯುವಕರ ಜೊತೆ ಹೆಂಡತಿಯ ಹುಟ್ಟೂರಿಗೆ ಬಂದಿದ್ದಾನೆ. ಬಳಿಕ ಅದೇನ್ಯಾಯ್ತೋ ಗೊತ್ತಿಲ್ಲ ಕುಮಾರ್ ಮತ್ತು ಭಾಸ್ಕರ್ ಜಟಾಪಟಿ ಶುರುವಾಗಿ ಭಾಸ್ಕರ್ ತನ್ನ ಸಂಬಂಧಿಕರಾದ ಸುರೇಶ್, ವೆಂಕಟೇಶ್ ಸೇರಿದಂತೆ ಇತರರನ್ನು ಕರೆಸಿ ಕಾರನ್ನು ಪುಡಿ ಪುಡಿ ಮಾಡಿ ಕುಮಾರ್, ಮತ್ತು ಸಂಬಂಧಿಕರ ಮೇಲೆ ಮಹಿಳೆಯರು ಕಾರದ ಪುಡಿ ಎರಚಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಕುಮಾರ್ ಸಂಬಂಧಿಕರು ಆರೋಪ ಮಾಡಿದ್ದಾರೆ..

ಇನ್ನು ಬದುಕಿದ್ದ ಗಂಡನ ಫೋಟೋ ಹಾಕಿ ಸಾಮಾಜಿಕ ಜಾಲತಾಣದಲ್ಲಿ “RIP” ಎಂದು ಹೆಂಡತಿ ಪೋಸ್ಟ್ ಮಾಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಅಸಲಿಗೆ ಕುಮಾರ್ ಹೆಂಡತಿ ಅನುಜಾ ತುಂಬಾ ಶೋಕಿಲಾಲಿ ಅಂತೆ, ಸಿಕ್ಕ ಸಿಕ್ಕ ಕಡೆ ತಿರುಗುವುದು, ಸ್ನೇಹಿತರ ಜೊತೆ ಹೋಟೆಲ್ ಡಾಬಾ ಅಂತ ತಿರುಗಿ ಕುಡಿದು ಮೋಜು ಮಸ್ತಿ ಮಾಡುವುದು.. ಸರ್ವೇ ಸಾಮಾನ್ಯವಾಗಿದ್ದವಂತೆ.. ಇದನ್ನು ಕಂಡಿದ್ದ ಕುಮಾರ್ ಪೋಷಕರು ಸೊಸೆಯನ್ನು ಬೈದು ಬುದ್ದಿವಾದ ಹೇಳಿದ್ದಾರೆ.. ಅದ್ರೆ ಅವರ್ಯಾರಿಗೂ ಕ್ಯಾರೆ ಅನ್ನದೆ ವರ್ತಿಸುತ್ತಿದ್ದಳೆಂದು ಆರೋಪಿಸಲಾಗಿದೆ.

ಸದ್ಯ ಹೆಂಡತಿ ಕಡೆಯವರು ನಡೆಸಿರುವ ಹಲ್ಲೆಯಿಂದ ತಲೆಗೆ ಗಂಭೀರ ಗಾಯಗಳಾಗಿ ಕುಮಾರ್ ಕುಟುಸ್ಥರಿಬ್ಬರು ಬೆಂಗಳೂರಿನ ನಿಮಾಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ.. ಕುಟುಂಬ ಕಲಹ ಇದೀಗ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಪ್ರಕರಣ ದಾಖಲಿಸಿದ್ದು…. ಒಟ್ಟಾರೆ ಕುಟುಂಬ ಕಲಹದ ನಡುವೆ ಗಂಡನ ಮೇಲಿನ ಹಲ್ಲೆ ಆರೋಪ ಹಾಗೂ ಸಾಮಾಜಿಕ ಜಾಲತಾಣದ ಪೋಸ್ಟ್ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಪ್ರಕರಣದ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.

Leave a Reply

Your email address will not be published. Required fields are marked *

error: Content is protected !!