ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತ: ಆನೇಕ ಸಾವು-ನೋವು: ಅಂಡರ್ ಪಾಸ್ ನಿರ್ಮಾಣಕ್ಕೆ ಹೆದ್ದಾರಿಯಲ್ಲಿ ಶವ ಇಟ್ಟು ಜನ ಪ್ರತಿಭಟನೆ

ದೇವನಹಳ್ಳಿ: ಮೇ.6ರ ರಾತ್ರಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಹಿಟ್ ಅಂಡ್ ರನ್ ಗೆ ದೇವನಹಳ್ಳಿ ತಾಲೂಕಿನ ಮುದುಗುರ್ಕಿ ಗ್ರಾಮದ ವ್ಯಕ್ತಿ ಸುಧಾಕರ್(35) ಸಾವನ್ನಪ್ಪಿದ್ದ. ಈ ಹಿನ್ನೆಲೆ ಸತತವಾಗಿ ಅಪಘಾತಗಳಿಂದ ನಲುಗಿಹೋಗಿರುವ ಗ್ರಾಮಸ್ಥರಿಂದ ಇಂದು (ಮೇ.7) ರಾಷ್ಟ್ರೀಯ ಹೆದ್ದಾರಿಯಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದರು.

ಮೃತ ಸುಧಾಕರ್ ಅತ್ತೆ, ತಾಯಿ, ಅಕ್ಕ ಇದೇ ಸ್ಥಳದಲ್ಲಿ ಅಪಘಾತದಿಂದ ಸಾವನ್ನಪ್ಪಿದ್ದರು. ಇದೀಗ ಹಿಟ್ ಅಂಡ್ ರನ್ ಗೆ ಸುಧಾಕರ್ ಕೂಡ ಮೃತನಾಗಿದ್ದಾನೆ.

ಬೆಂಗಳೂರು ಟೂ ಬಳ್ಳಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಡಿಕ್ಕಿ ವ್ಯಕ್ತಿಗೆ ಹೊಡೆದು ಎಸ್ಕೇಪ್ ಆಗಿದೆ. ಇದೇರೀತಿ ಮುದುಗುರ್ಕಿ ಗ್ರಾಮದ ಅನೇಕ ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಅಪಘಾತಗಳಿಂದ ಪಾರಾಗಲು ಅಂಡರ್ ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ ಗ್ರಾಮಸ್ಥರೆಲ್ಲ ಸೇರಿ ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ ಮಾಡಿದ್ದಾರೆ.

ಮೃತರ ಕುಟುಂಬಕ್ಕೆ ಪರಿಹಾರವನ್ನು ಒದಗಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ರಸ್ತೆ ಮಧ್ಯದಿಂದ ಶವ ಎತ್ತಿಸಲು ಕೆಲಕಾಲ ಅಧಿಕಾರಿಗಳು ಹರಸಾಹಸಪಟ್ಟರು.

ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು, ದೇವನಹಳ್ಳಿ ತಹಶೀಲ್ದಾರ್ ಅನಿಲ್, ಬೆಂ ಗ್ರಾ ಎಎಸ್ ಪಿ 2  ಎ ವಿ ಲಕ್ಷ್ಮಿನಾರಾಯಣ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಮಂಜುನಾಥ್‌ ಟಿ.ಆರ್, ಪೊಲೀಸ್ ಅಧಿಕಾಗಳು ಆಗಮಿಸಿ ಹೆದ್ದಾರಿಯಲ್ಲಿ ಅಪಘಾತಗಳು ನಡೆಯದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು. ಅಧಿಕಾರಿಗಳ ಭರವಸೆ ಮೇರೆಗೆ ಪ್ರತಿಭಟನಾ ಸ್ಥಳದಿಂದ ಶವವನ್ನು ತೆಗೆದರು.

Leave a Reply

Your email address will not be published. Required fields are marked *

error: Content is protected !!