
ಟೀ ಅಂಗಡಿ ಹುಡುಗನ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ದರ್ಪ ಮೆರೆದಿರುವ ಘಟನೆ ದೇವನಹಳ್ಳಿಯ ಕನ್ನಮಂಗಲ ಗ್ರಾಮದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೈವೆ ನೆಸ್ಟ್ ಟೀ ಶಾಪ್ ನಲ್ಲಿ ನಡೆದಿದೆ…
ರಾತ್ರಿ ವೇಳೆ ಟೀ ಅಂಗಡಿ ತೆಗೆದಿದ್ದ ಕಾರಣ ಟೀ ಅಂಗಡಿ ಯುವಕನ ಮೇಲೆ ದೇವನಹಳ್ಳಿ ಠಾಣೆ ಇನ್ಸ್ ಪೆಕ್ಟರ್ ರಾಕೇಶ್ ಹಲ್ಲೆ ಮಾಡಿದ್ದಾರೆ..

‘ಬೇಡ ಬಿಟ್ಬಿಡಿ ಸಾರ್’ ಅಂದ್ರು ಅಂಗಡಿಯಿಂದ ಎಳೆದುಕೊಂಡು ಲಾಟಿಯಿಂದ ಹೊಡೆದು ದರ್ಪ ಮೆರೆದಿದ್ದಾರೆ.. ‘ನನಗೇ ಹೊಡಿಬೇಡಿ ಅಂತೀಯ’ ಎಂದು ಮನಸ್ಸೋ ಇಚ್ಛೆ ಇನ್ಸಪೆಕ್ಟರ್ ಹಲ್ಲೆ ಮಾಡಿದ್ದಾರೆ.
ಕೆಲ ತಿಂಗಳ ಹಿಂದೆ ನಡೆಸಿರುವ ದೌರ್ಜನ್ಯದ ವಿಡಿಯೋ ಈಗ ವೈರಲ್ ಆಗುತ್ತಿದೆ..

ಹಲ್ಲೆಗೊಳಗಾದ ಹುಡುಗ ಬೆಳಗ್ಗಿನ ಜಾವ 4ಗಂಟೆ ಸುಮಾರಿಗೆ ಟೀ ಅಂಗಡಿ ಓಪನ್ ಮಾಡಿದ್ದ.
ಬರುವ ಗ್ರಾಹಕರಿಗೆ ಟೀ ಮಾಡಿಕೊಡಲು ಪೂರ್ವಸಿದ್ಧತೆ ನಡೆಸುತ್ತಿದ್ದ. ಈಗಿರುವಾಗ ಯಾವುದೇ ಕಾರಣ ನೀಡದೆ ಏಕಾಏಕಿ ಬಂದು ಹುಡುಗನ ಮೇಲೆ ಇನ್ಸ್ ಪೆಕ್ಟರ್ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ..

ಇನ್ಸಪೆಕ್ಟರ್ ರಾಕೇಶ್ ಮತ್ತು ಇನ್ನಿತರ ಪೊಲೀಸ್ ಸಿಬ್ಬಂದಿಯಿಂದ ದೌರ್ಜನ್ಯ ಆರೋಪ ಕೇಳಿಬಂದಿದೆ..
ಪೊಲೀಸರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ..

ದೌರ್ಜನ್ಯ ನಡೆಸಿದವರ ಮೇಲೆ ಪೊಲೀಸ್ ಇಲಾಖೆ ಕಾನೂನು ಕ್ರಮಕ್ಕೆ ಮುಂದಾಗುತ್ತಾ ಕಾದುನೋಡಬೇಕಿದೆ..