ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ: ಟ್ರ್ಯಾಕ್ಟರ್ ಚಾಲಕ ಸಾವು

ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಚಾಲಕ ಸಾವನ್ನಪ್ಪಿರುವ ಘಟನೆ ದಾಬಸ್ ಪೇಟೆ – ಹೊಸಕೋಟೆ ಹೆದ್ದಾರಿಯ ರಾಮೇಶ್ವರ ಗೇಟ್ ನಲ್ಲಿ ಇಂದು ಬೆಳಗ್ಗೆ ಸುಮಾರು 6 ಗಂಟೆಯಲ್ಲಿ ನಡೆದಿದೆ…

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮದ ಆನಂದ್(32), ಮೃತ ದುರ್ದೈವಿ.

ಇಂದು ಮುಂಜಾನೆ ಟೊಮೆಟೋ ಸಸಿಗಳಿಗೆ ಕಡ್ಡಿ ತರಲು ಚಿನ್ನಸಂದ್ರ ಗ್ರಾಮದಿಂದ ದಾಬಸ್ ಪೇಟೆ ಕಡೆಗೆ ಟ್ರ್ಯಾಕ್ಟರ್ ನಲ್ಲಿ ಹೋಗುತ್ತಿದ್ದಾಗ ಅದೇ ಮಾರ್ಗವಾಗಿ ಹಿಂದೆಯಿಂದ ಬರುತ್ತಿದ್ದ ಕ್ಯಾಂಟರ್ ರಾಮೇಶ್ವರ ಗೇಟ್ ನಲ್ಲಿ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ನಿಯಂತ್ರಣ ಕಳೆದುಕಡ ಟ್ರ್ಯಾಕ್ಟರ್ ಡಿವೈಡರ್ ಹಾರಿ ಪಕ್ಕದ ರಸ್ತೆಯಲ್ಲಿ ಪಲ್ಟಿ ಹೊಡೆದಿದೆ.. ಇದರ ಪರಿಣಾಮ ಟ್ರ್ಯಾಕ್ಟರ್ ಆನಂದ್ ಗೆ ಗಂಭೀರ ಗಾಯಗಳಾಗಿದ್ದವು, ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿತ್ತು.‌ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ…

ಘಟನೆಯಲ್ಲಿ ಕ್ಯಾಂಟರ್ ಚಾಲಕ ರವಿಗೂ ಕಾಲುಗಳಿಗೆ ಗಂಭೀರಗಾಯಳಾಗಿವೆ.

ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ….

Leave a Reply

Your email address will not be published. Required fields are marked *

error: Content is protected !!