ಭಕ್ತಿ ಭಾವ ಉತ್ಸವದಲ್ಲಿ ಅಸಭ್ಯ ನೃತ್ಯ: ಸಾರ್ವಜನಿಕರಿಂದ ತೀವ್ರ ಅಸಮಾಧಾನ

ದೇವಿಯ ಕರಗ ಉತ್ಸವದಲ್ಲಿ ಅಶ್ಲೀಲ ನರ್ತನ ಮಾಡಿದ್ದರಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ​ಫ್ಲವರ್ ಸರ್ಕಲ್‌ನಲ್ಲಿ ನಡೆದಿದೆ.

ಪವಿತ್ರ ಕರಗ ಉತ್ಸವದಲ್ಲಿ ಅಸಭ್ಯತೆ ಮಿತಿಮೀರಿದ್ದು, ನಂಗನಾಚ್ ಡ್ಯಾನ್ಸ್ ಕಂಡು ​ಸಾರ್ವಜನಿಕರು ಛೀ.. ಥೂ …ಎಂದು ಕಿಡಿಕಾರಿದ್ದಾರೆ.

ಭಕ್ತಿ ಭಾವದ ಉತ್ಸವದಲ್ಲಿ ಅಶ್ಲೀಲ ನೃತ್ಯ ಕಂಡು ಜನರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರ್ಕೆಸ್ಟ್ರಾ ನೋಡಲು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು . ಕುಟುಂಬ ಸಮೇತರಾಗಿ ಕರಗ ನೋಡಲು ಬಂದವರಿಗೆ ಡ್ಯಾನ್ಸ್ ಕಂಡು ಬಾರಿ‌ ಮುಜುಗರವಾಗಿದೆ.

ಅಸ್ಲೀಲ ಡ್ಯಾನ್ಸ್ ಕರಗದಮ್ಮ ದೇವಿಯ ​ಸಂಪ್ರದಾಯಕ್ಕೆ ಧಕ್ಕೆ ತಂದಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ನಂಗನಾಚ್ ಮಾಡಿಸಿದ್ದಕ್ಕೆ ಸಾರ್ವಜನಿಕರಿಂದ ತೀವ್ರವಾಗಿ ಖಂಡನೆ ಮಾಡಿದ್ದಾರೆ..

Leave a Reply

Your email address will not be published. Required fields are marked *

error: Content is protected !!