
ಆಕೆ ನೂರಾರು ಕನಸುಗಳನ್ನ ಹೊತ್ತು ಪೋಷಕರ ವಿರೋಧದ ನಡುವೆಯೂ ಪ್ರೀತಿಸಿ ಮದುವೆ ಆಗಿದ್ದಳು. ಇವರಿಬ್ಬರ ಪ್ರೀತಿಗೆ ಎರಡು ಗಂಡು ಮಕ್ಕಳು ಕೂಡ ಇವೆ. ಮದುವೆ ಆಗಿ 18 ವರ್ಷ ಆದ ನಂತರ ಗಂಡ ಈಗ ಎರಡನೇ ಮದುವೆ ಆಗೋದಕ್ಕೆ ಮುಂದಾಗಿದ್ದಾನೆ. ಆದರೆ, ಸಡನ್ ಆಗಿ ಎಂಟ್ರಿ ಕೊಟ್ಟ ಮೊದಲ ಹೆಂಡತಿ ಮದುವೆಗೆ ಸಿದ್ಧನಿದ್ದ ಗಂಡನನ್ನ ಪೊಲೀಸ್ ಠಾಣೆ ಮೆಟ್ಟಿಲು ಏರಿಸುವಂತೆ ಮಾಡಿದ್ದಾಳೆ. ಅಷ್ಟಕ್ಕೂ ಆ ಘಟನೆ ನಡೆದಿದ್ದು ಎಲ್ಲಿ ಅಂತಿರಾ ಈ ಸ್ಟೋರಿ ಓದಿ………

ಹೌದು… ಹೀಗೆ ಮದುವೆ ಮನೆಯ ಬಳಿ ಪೊಲೀಸರೊಂದಿಗೆ ಮಾತನಾಡುತ್ತಿರುವ ಮಹಿಳೆ, ಮದುವೆಗೆ ಸಿದ್ಧನಾಗಿದ್ದ ಮಧುಮಗ ಪೊಲೀಸ್ ಜೀಪ್ ಹತ್ತುತ್ತಿರುವ ಅಕ್ಕ ಪಡೆಯ ಸಿಬ್ಬಂದಿ, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೋಡಗುರ್ಕಿ ಗ್ರಾಮದ ಹೊರವಲಯದ ಮುನೇಶ್ವರ ದೇವಾಲಯದ ಬಳಿ.
ಸುರೇಶನನ್ನು ನೊಂದ ಮಹಿಳೆ ಕಳೆದ 18 ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದಳು. ಪೋಷಕರ ವಿರೋಧದ ನಡುವೆಯೂ ಸುರೇಶನೇ ಬೇಕೆಂದು ಸಾಕಷ್ಟು ನಂಬಿಕೆಯಿಟ್ಟು ಮದುವೆ ಆಗಿದ್ದಳು. ಮೊದ ಮೊದಲು ಚೆನ್ನಾಗಿ ಇದ್ದ ಸಂಸಾರ, ಸುರೇಶನ ಕುಡಿತದ ಚಟಕ್ಕೆ ಬಿರುಕು ಪ್ರಾರಂಭವಾಯಿತು. ನಂತರ ಇವರಿಬ್ಬರ ಮಧ್ಯೆ ಸಾಕಷ್ಟು ಗಲಾಟೆಗಳಾಗಿ ರಾಜಿ ಪಂಚಾಯತಿ ಕೂಡ ನಡೆದಿವೆ. ಎದೆ ಎತ್ತರಕ್ಕೆ ಎರಡು ಗಂಡು ಮಕ್ಕಳಿದ್ದರೂ ಈಗ ಸುರೇಶ ಮತ್ತೊಂದು ಮದುವೆಗೆ ಮುಂದಾಗಿದ್ದಾನೆ.

ಇನ್ನೂ ನೊಂದ ಮಹಿಳೆ ಮತ್ತು ಸುರೇಶನ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿತ್ತು. ಆಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಗ ಇಬ್ಬರೂ ಕೂಡ ಕಳೆದ ಒಂದೂವರೆ ವರ್ಷದ ಹಿಂದೆ ದೂರವಾಗಿದ್ದರು. ಈ ವೇಳೆ ಮಕ್ಕಳ ಪೋಷಣೆಗೆ ಜೀವನಾಂಶ ಕೊಡುತ್ತೇನೆ ಎಂದು ಒಪ್ಪಿಕೊಂಡಿದ್ದ ಸುರೇಶ್, ಇದೀಗ ನಾಟಕವಾಡಲು ಪ್ರಾರಂಭ ಮಾಡಿದ್ದಾನೆ. ನಂತರ ಮೊದಲ ಹೆಂಡತಿಗೆ ತಿಳಿಯದೇ ಎರಡನೇ ಮದುವೆಗೆ ಮುಂದಾಗಿದ್ದಾನೆ.ಈ ವಿಷಯ ತಿಳಿದ ಮೊದಲ ಹೆಂಡತಿ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿ, ನಂತರ ಅಕ್ಕಪಡೆಯ ಸಹಾಯದಿಂದ ಎರಡನೇ ಮದುವೆ ನಡೆಯುತ್ತಿದ್ದ ದೇವಾಲಯದ ಬಳಿಗೆ ಹೋಗಿ ಮದುವೆ ನಿಲ್ಲಿಸಿದ್ದಾಳೆ. ಪೊಲೀಸರು ಅರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆದುತ್ತಿದ್ದಾರೆ.

ಒಟ್ಟಾರೆ, ಪ್ರೀತಿಸಿ ಮದುವೆ ಆದ ಸುರೇಶ, ಮೊದಲ ಹೆಂಡತಿಯನ್ನೂ ಸರಿಯಾಗಿ ನೋಡಿಕೊಳ್ಳದೆ ಈಗ ಎರಡನೇ ಮದುವೆ ಆಗಲು ಹೋಗಿ ಇನ್ನೊಂದು ಮಹಿಳೆಯ ಬಾಳಲ್ಲಿ ಕುಡ ವಿಲನ್ ಆಗಿದ್ದಾನೆ. ಮದುವೆಗೆ ಲಕ್ಷಾಂತರ ರುಪಾಯಿ ಹಣ ಖರ್ಚು ಮಾಡಿದ್ದ ಪೋಷಕರು ಈಗ ದಿಕ್ಕೇ ತೋಚದ ಸ್ಥಿತಿಗೆ ತಲುಪಿದ್ದಾರೆ.