ಎಲ್‌ಪಿಜಿ ಸಿಲಿಂಡರ್ ಗಾಗಿ ಮುಗಿಬಿದ್ದ ಜನ

ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಕ್ಕಟ್ಟು ಭಾರತಕ್ಕೂ ತಟ್ಟಿರುವ ಹಿನ್ನೆಲೆ ದೇಶಾದ್ಯಂತ ಅಡುಗೆ ಅನಿಲ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಪ್ರಸ್ತುತ ಎಲ್‌ಪಿಜಿ ಸಿಲಿಂಡರ್ ಕೊರತೆ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಅಭಾವ ಉಂಟಾಗಬಹುದು ಎಂಬ ಭೀತಿಯಿಂದ, ಸಿಲಿಂಡ ರ್ ಗಾಗಿ ಜನರು ಮುಗಿಬಿದ್ದಿದ್ದಾರೆ.

ಇಂತಹ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹಿರೇಮುದ್ದೇನಹಳ್ಳಿ ಗ್ರಾಮದಲ್ಲಿಂದು ಎಲ್‌ಪಿಜಿ ಸಿಲಿಂಡರ್ ಗಾಗಿ ಇಡೀ ಗ್ರಾಮವೇ ಮುಗಿಬಿದ್ದಿರುವ ದೃಶ್ಯ ಕಂಡುಬಂದಿದೆ…

ಜಿಲ್ಲೆಯಾದ್ಯಂತ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಸಾರ್ವಜನಿಕ ಕುಂದುಕೊರತೆಗಳು ಕಂಡು ಬಂದಲ್ಲಿ ತಾಲ್ಲೂಕಿನ ಆಹಾರ ಶಾಖೆಯ ಆಹಾರ ನಿರೀಕ್ಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಅವರು ತಿಳಿಸಿದ್ದಾರೆ‌.

ಗೃಹ ಬಳಕೆ ಸಿಲಿಂಡರ್ರನ್ನು 25 ದಿನಗಳ ಬಳಿಕವೇ ಬುಕ್ ಮಾಡಲು ಅವಕಾಶಕಲ್ಪಿಸಲಾಗಿದೆ. ಆದ್ದರಿಂದ ಗ್ರಾಹಕರು ಅಡುಗೆ ಅನಿಲವನ್ನು ಮಿತಬಳಕೆ ಮಾಡುವಂತೆ ಡಿಸಿ ಕೋರಿದ್ದಾರೆ.

ಗ್ಯಾಸ್ ಸರಬರಾಜುನಲ್ಲಿ ಏನಾದರೂ ಸಮಸ್ಯೆ ಉಂಟಾದಲ್ಲಿ ಆಹಾರ ನೀರಿಕ್ಷಕರು/ಶಿರಸ್ತೇದಾರ್ ಅವರ ದೂರವಾಣಿ ಸಂಖ್ಯೆಗಳು ದೇವನಹಳ್ಳಿ-9449269001, ದೊಡ್ಡಬಳ್ಳಾಪುರ-9483482766, ನೆಲಮಂಗಲ-9036434552, ಹೊಸಕೋಟೆ-9902805563 ಸಂಪರ್ಕಿಸಬಹುದಾಗಿದೆ.

ಯಾವುದೇ ಅನಧಿಕೃತ ಗ್ಯಾಸ್ ಸಿಲಿಂಡರ್ ಸಂಗ್ರಹಣೆ ಅಥವಾ ಅಕ್ರಮ ಮಾರಾಟ ಕಂಡುಬಂದಲ್ಲಿ ಅಗತ್ಯ ವಸ್ತುಗಳ ಕಾಯ್ದೆ ಹಾಗೂ 1955 Petroleum Products(Maintenace of Production, Storage and Supply) Order 1999 and LPG Control Order 2000  2000 ಸಂಬಂಧಿತ ನಿಯಂತ್ರಣ ಆದೇಶಗಳಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!