ಯುವತಿಯಿಂದ ಮದ್ವೆಗೆ ನಿರಾಕರಣೆ: HIV ಇಂಜೆಕ್ಷನ್ ಚುಚ್ಚಿದ ಯುವಕ.!

ಹೈದರಾಬಾದ್: ಮದುವೆಯಾಗಲು ನಿರಾಕರಿಸಿದ ಯುವತಿಯೊಬ್ಬಳಿಗೆ ಆಕೆಯ ಪ್ರಿಯಕರನೇ HIV ಪಾಸಿಟಿವ್ ಇಂಜಕ್ಷನ್ ಚುಚ್ಚಿದ ಆಘಾತಕಾರಿ ಘಟನೆ ಹೈದರಾಬಾದ್‌ನ ಮೆಡ್ಚಲ್ ಪ್ರದೇಶದಲ್ಲಿ ನಡೆದಿದೆ.

ಪ್ರೀತಿ ವಿಫಲವಾದ ಕೋಪದಲ್ಲಿ ಯುವಕನೊಬ್ಬ ಈ ಅಮಾನವೀಯ ಕೃತ್ಯ ಎಸಗಿದ್ದಾನೆ. ಘಟನೆ ಸಂಬಂಧ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಹೈದರಾಬಾದ್‌ನ ಮೆಡ್ಮಿಲ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮನೋಹರ್ ಎಂಬ ಯುವಕನೊಂದಿಗೆ ಯುವತಿಯ ಮದುವೆ ನಿಶ್ಚಯವಾಗಿತ್ತು. ಕುಟುಂಬಗಳ ಸಹಮತಿಯೊಂದಿಗೆ ಈ ಮದುವೆಯ ಮಾತುಕತೆ ನಡೆದಿತ್ತು. ಆದರೆ ನಂತರ ಯುವಕನಿಗೆ HIV ಪಾಸಿಟಿವ್ ಇರುವ ಮಾಹಿತಿ ಯುವತಿಗೆ ತಿಳಿದುಬಂದಿದೆ. ಈ ವಿಷಯ ತಿಳಿದ ನಂತರ ಯುವತಿ ಮದುವೆಗೆ ನಿರಾಕರಿಸಿದ್ದಾಳೆ.

ಯುವತಿಯ ಈ ನಿರ್ಧಾರ ಮನೋಹರ್‌ಗೆ ತೀವ್ರ ಕೋಪ ತಂದಿದೆ ಎಂದು ತಿಳಿದುಬಂದಿದೆ. ಹಲವು ಬಾರಿ ಯುವಕ ಯುವತಿಯನ್ನು ಸಂಪರ್ಕಿಸಿ ಮದುವೆಯಾಗಲೇಬೇಕು ಎಂದು ಒತ್ತಾಯಿಸಿದ್ದಾನೆ. ಆದರೆ ಯುವತಿ ತನ್ನ ನಿರ್ಧಾರದಲ್ಲಿ ಬದಲಾವಣೆ ಮಾಡದೇ ಮದುವೆಗೆ ನಿರಾಕರಿಸಿದ್ದಾಳೆ.

ಮಾರ್ಚ್ 11ರಂದು ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಆ ದಿನ ಮನೋಹರ್ ಯುವತಿಯನ್ನು ಭೇಟಿಯಾಗಲು ಕರೆಸಿಕೊಂಡಿದ್ದಾನೆ. ಈ ವೇಳೆ ಮತ್ತೊಮ್ಮೆ ಮದುವೆ ಬಗ್ಗೆ ಒತ್ತಾಯಿಸಿದ್ದಾನೆ. ಆದರೆ ಯುವತಿ ಮತ್ತೊಮ್ಮೆ ನಿರಾಕರಿಸಿದಾಗ ಕೋಪಗೊಂಡ ಮನೋಹರ್, ತನ್ನ ಬಳಿ ಇದ್ದ ಇಂಜಕ್ಷನ್ ಮೂಲಕ ಯುವತಿಗೆ ಚುಚ್ಚಿದ್ದಾನೆ.

ಈ ಇಂಜಕ್ಷನ್‌ನಲ್ಲಿ HIV ಸೋಂಕು ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಇಂಜಕ್ಷನ್ ನೀಡಿದ ಕೆಲವೇ ಗಂಟೆಗಳಲ್ಲಿ ಯುವತಿಗೆ ತೀವ್ರ ಜ್ವರ ಮತ್ತು ಅಸ್ವಸ್ಥತೆ ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡ ಯುವತಿ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದಾಳೆ. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಅಗತ್ಯ ವೈದ್ಯಕೀಯ ಪರೀಕ್ಷೆಗಳು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಯುವತಿ ನಡೆದ ಘಟನೆ ಬಗ್ಗೆ ತನ್ನ ಕುಟುಂಬದವರಿಗೆ ಮಾಹಿತಿ ನೀಡಿದ್ದಾಳೆ. ಈ ವಿಷಯ ತಿಳಿದ ಕುಟುಂಬದವರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿಯ ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ಆರೋಪಿ ಮನೋಹರ್ ಅನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಯುವತಿಗೆ ಮದುವೆಯಾಗಲು ಒತ್ತಾಯಿಸಿದ್ದ ವಿಚಾರ ಹೊರಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!