
ದೊಡ್ಡಬಳ್ಳಾಪುರ ನಗರ: ನವಚೇತನ ಆಸ್ಪತ್ರೆ ಉಷ್ಟ್ರತಿ ಎನ್‌ಜಿಓ, ಡಿ ಎಸ್ ಜಿ ಸ್ಪೋರ್ಟ್ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಯನ್ನು ದೊಡ್ಡಬಳ್ಳಾಪುರ ನಗರದ ದರ್ಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಆಯೋಜನೆ ಮಾಡಲಾಗಿತ್ತು.
ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ನಗರಸಭಾ ಉಪಾಧ್ಯಕ್ಷ ಎಂ ಮಲ್ಲೇಶ್, ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು, ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಮತ್ತು ಚಿಕಿತ್ಸೆಯ ವೆಚ್ಚವನ್ನು ಕಡಿಮೆ ಮಾಡಲು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಅತ್ಯಗತ್ಯ. ಬಡವರು ಒಳ್ಳೆಯ ಆಸ್ಪತ್ರೆಗಳಿಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಲು ಅಸಾಧ್ಯ. ಅದ್ದರಿಂದ ಇಂತಹ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುವುದರಿಂದ ಬಡ ಕೂಲಿ ಕಾರ್ಮಿಕ ವರ್ಗದವರಿಗೆ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಇದು ಕೊಲೆಸ್ಟ್ರಾಲ್, ರಕ್ತದ ಸಕ್ಕರೆ, ಬಿಪಿ, ಮತ್ತು ಕ್ಯಾನ್ಸರ್ ನಂತಹ ರೋಗಗಳ ಮುನ್ನೆಚ್ಚರಿಕೆ ವಹಿಸಲು, ಹಾಗೆಯೇ ಸರಿಯಾದ ಜೀವನಶೈಲಿ ಅಳವಡಿಸಿಕೊಳ್ಳಲು ವೈದ್ಯರ ಮಾರ್ಗದರ್ಶನ ಪಡೆಯಲು ಸಹಾಯ ಮಾಡುತ್ತದೆ.
ದೊಡ್ಡಬಳ್ಳಾಪುರ ನಗರದ ಹೃದಯ ಭಾಗವಾದ ಖಾಸಬಾಗ್ ದರ್ಗಾಪುರ, ರಂಗಪ್ಪ ಸರ್ಕಲ್ ಈ ಭಾಗದಲ್ಲಿ ಹೆಚ್ಚು ಬಡ ಕುಟಂಬಗಳು ಇದ್ದು, ದಿನ ನಿತ್ಯದ ದುಡಿಮೆ ಊಟ ಬಟ್ಟೆಗೆ ಸಾಲುವುದಿಲ್ಲ ಅದರೆ ಅರೋಗ್ಯ ತಪಾಸಣೆ ಇನ್ನೂ ಯಾವರೀತಿ ಮಾಡುತ್ತಾರೆ ಅದರಿಂದ ನವಚೇತನ ಆಸ್ಪತ್ರೆ ಉಷ್ಟ್ರತಿ ಎನ್ ಜಿ ಓ, ಡಿ ಎಸ್ ಜಿ ಸ್ಪೋರ್ಟ್ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಅಯೋಜಿಸಲಾಗಿದೆ ಎಂದರು.
ಆರೋಗ್ಯವೇ ಭಾಗ್ಯ. ಉತ್ತಮ ಆರೋಗ್ಯವು ದೈಹಿಕ, ಮಾನಸಿಕವಾಗಿ ಸದೃಢವಾಗಿರುವ ಸ್ಥಿತಿಯಾಗಿದ್ದು, ಸಂತೋಷದ ಮತ್ತು ಯಶಸ್ವಿ ಜೀವನಕ್ಕೆ ಅಡಿಪಾಯವಾಗಿದೆ. ಇದು ಕಾಯಿಲೆಗಳನ್ನು ತಡೆಗಟ್ಟಲು, ಜೀವನದ ಗುಣಮಟ್ಟವನ್ನು ಹೆಚ್ಚಿಸಲು, ದೈನಂದಿನ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ನಿರ್ಣಾಯಕವಾಗಿದೆ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ದೇಹದ ದೃಢವಾಗಿರುತ್ತೆ ಎಂದರು.
ಈ ಸಂದರ್ಭದಲ್ಲಿ ನವಚೇತನ ಆಸ್ಪತ್ರೆಯ ಎಂಡಿ ಡಾ.ರಾಜೇಶ್, ನೇತ್ರ ತಜ್ಞ ಡಾ.ವೈ.ಗಿರೀಶ್, ನಿರ್ದೇಶಕರಾದ ಪ್ರಕಾಶ್, ಮಾರ್ಕೆಟಿಂಗ್ ವಿಭಾಗದ ಮೊಹಮ್ಮದ್ ರಫೀ, ಆನಂದ್ ಮತ್ತಿತರರು ಹಾಜರಿದ್ದರು.