ಜೆಡಿಎಸ್ ಕಾರ್ಯಕರ್ತರನ್ನ ಮುಟ್ಟಬೇಡಿ- ಶಾಸಕ ಧೀರಜ್ ಮುನಿರಾಜುಗೆ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಖಡಕ್ ಮಾತು: ಮುಂದಿನ 20 ದಿನದೊಳಗಾಗಿ ತಾಲೂಕು ಪದಾಧಿಕಾರಿಗಳ ನೇಮಕ

ನಮ್ಮ ಕಾರ್ಯಕರ್ತರನ್ನು ಮುಟ್ಟಬೇಡಿ, ಆಸೆ ಆಮಿಷವೊಡ್ಡಿ ನಿಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ. ನಮ್ಮ ಕಾರ್ಯಕರ್ತರನ್ನು ನಿಮ್ಮ ಪಕ್ಷಕ್ಕೆ ಸೇರಿಸುತ್ತೇವೆ ಎಂದು ಹೇಳಿಲ್ಲ. ನಮ್ಮ ಪಕ್ಷಕ್ಕೆ, ಕಾರ್ಯಕರ್ತರಿಗೆ ತನ್ನದೇ ಆದ ಶಕ್ತಿ ಇದೆ. ನಮ್ಮರನ್ನ ನಿಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನ ಇಲ್ಲಿಗೆ ಬಿಡಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ ಮಂಜುನಾಥ್ ಹೇಳಿದರು..

ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ನಂತರ ಮೊದಲ‌ ಬಾರಿಗೆ ದೊಡ್ಡಬಳ್ಳಾಪುರಕ್ಕೆ ಆಗಮಿಸಿ ಮಾತನಾಡಿದರು.

ಪಕ್ಷದ ಸಂಘಟನೆಗೆ ಒತ್ತು ನೀಡಲಾಗುವುದು, ಮುಖಂಡರು, ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.

ಯಾವುದನ್ನು ಮನಸ್ಸಿನಲ್ಲಿ ಇಟ್ಟಿಕೊಳ್ಳದೇ ಪಕ್ಷದ ಸಂಘಟನೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಮಾಜಿ ಜಿಲ್ಲಾಧ್ಯಕ್ಷ ಬಿ.ಮುನೇಗೌಡರನ್ನ ಒಳಗೊಂಡಂತೆ ಎಲ್ಲರೂ ಪಕ್ಷ‌ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇವೆ. ಜಿಲ್ಲಾವಾರು ಪ್ರವಾಸ ಮಾಡುತ್ತೇನೆ. ನಾನು ಪ್ರತಿನಿತ್ಯ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಎಲ್ಲರೂ ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಬೇಕು. ಜಾತ್ಯಾತೀತವಾಗಿ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು. ಎಲ್ಲಾ ಧರ್ಮ, ಜಾತಿಯವರನ್ನ ಒಗ್ಗೂಡಿಸುವುದೇ ನಮ್ಮ ಪಕ್ಷದ ಗುರಿ. ಮುಂದಿನ ದಿನಗಳಲ್ಲಿ ಜಿಲ್ಲಾ, ತಾಲೂಕು, ಹೋಬಳಿ, ಬೂತ್ ಸಮಿತಿ ಮಾಡಿ ಪಕ್ಷ ಬಲವರ್ಧನೆ ಮಾಡುತ್ತೇವೆ‌ ಎಂದು ತಿಳಿಸಿದರು.

ಎನ್ ಡಿಎ ಮೈತ್ರಿಕೂಟ ಇದೆ, ಆದರೆ ಪಕ್ಷಾಂತರ ಇಲ್ಲ. ನಾನು ಯಾರಿಂದಲೂ ಒತ್ತಡ ಹಾಕಿಸಿ‌ ಅಧ್ಯಕ್ಷನಾಗಿಲ್ಲ. ಪಕ್ಷದ ವರಿಷ್ಠರು ನನ್ನ ಪಕ್ಷ ನಿಷ್ಠೆ ನೋಡಿ ಈ ಒಂದು ಸ್ಥಾನ‌ಮಾನ‌ಕೊಟ್ಟಿದ್ದಾರೆ. ಮುಂದಿನ 20 ದಿನಗಳಲ್ಲಿ ತಾಲೂಕು ಸಮಿತಿ ರಚನೆ ಮಾಡುತ್ತೇವೆ ಎಂದರು.

ಈ ವೇಳೆ ಹರೀಶ್ ಗೌಡ, ಡಾ.ವಿಜಯ್ ಕುಮಾರ್, ತ.ನಾ ಪ್ರಭುದೇವ್, ವೆಂಕಟೇಶ್ ಬಾಬು, ಸತ್ಯನಾರಾಯಣ ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *

error: Content is protected !!