
ದೊಡ್ಡಬಳ್ಳಾಪುರ ತಾಲೂಕಿನ ಕರೆನಹಳ್ಳಿಯಲ್ಲಿರುವ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿಂದು “ಸೈನ್ಸ್ ಫೆಸ್ಟ್ – ಇನೋವೇಟಿವ್ ಅರೇನ” (ವಿಜ್ಞಾನ ಮೇಳ) ವನ್ನು ಆಯೋಜಿಸಲಾಗಿತ್ತು. ಈ ವಿಜ್ಞಾನ ಮೇಳವನ್ನು ಶಾಸಕ ಧೀರಜ್ ಮುನಿರಾಜು ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆ ಆಗಿ ಫನ್ ವಿಥ್ ಸೈನ್ಸ್ ಅಂಡ್ ಮ್ಯಾಥ್ಸ್ , ಆರ್ಟ್ ಗ್ಯಾಲರಿ, ಹ್ಯಾಲೋವಿನ್, ಮಾಥ್ಸ್ ಕಾರ್ನರ್, ಸೈನ್ಸ್ ಕಾರ್ನರ್, ಎಮ್ರಿಯೋ ಡೆವಲಪ್ಮೆಂಟ್ ಥೀಮ್, ಕಿಡ್ಸ್ ಕಾರ್ನಿವಲ್, ಇನ್ನು ಮುಂತಾದವು ಎಲ್ಲರ ಗಮನವನ್ನು ಸೆಳೆಯಿತು.

ಶಾಲೆಯಲ್ಲಿರುವ ಪ್ರತಿಯೊಂದು ವಿದ್ಯಾರ್ಥಿಯು ವಿವಿಧ ರೀತಿಯ ವಿಜ್ಞಾನ, ಗಣಿತ, ಕಲೆಗೆ ಸಂಬಂಧಿಸಿದ ಮಾದರಿಗಳನ್ನು ತಯಾರಿಸಿ ಅವುಗಳನ್ನು ಪ್ರಸ್ತುತಪಡಿಸಿದರು.

ಫನ್ ವಿಥ್ ಸೈನ್ಸ್ ಎಂಬ ಚಟುವಟಿಕೆಯ ಮೂಲಕ ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಿಸಿದ ಆಟಗಳು, ತಂತ್ರಗಳು ಹಾಗೂ ನೈಜ ಜೀವನದ ಪ್ರಾಯೋಗಿಕತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಅರಿವನ್ನ ಮೂಡಿಸಿತು.

ಫನ್ ವಿತ್ ಸೈನ್ಸ್ ಅಂಡ್ ಮ್ಯಾಚ್ ನ ಮೂಲಕ ಜನ್ಮ ದಿನಾಂಕವನ್ನು ತಿಳಿಯುವುದು. ಮ್ಯಾಜಿಕ್ ಸಂಖ್ಯೆಗಳ ಮೂಲಕ ಮೊಬೈಲ್ ನಂಬರ್ ತಿಳಿಯುವುದು. ಮನಸ್ಸಿನಲ್ಲಿರುವ ಸಂಖ್ಯೆಯನ್ನು ತಿಳಿಸಿದರೆ ಮಾನಸಿಕ ತಂತ್ರಗಳ ಬಳಕೆಯ ಬಗ್ಗೆ ತಿಳಿಸಿಕೊಡಲಾಯಿತು.

ಎಂಬ್ರಿಯೋ ಡೆವಲಪ್ಮೆಂಟ್ ಎಂಬ ಆಕರ್ಷಕ ಪ್ರದರ್ಶನದ ಮೂಲಕ ತಾಯಿಯ ಗರ್ಭದಲ್ಲಿ ಮಗುವು ಹೇಗೆ ವಿವಿಧ ಹಂತಗಳಲ್ಲಿ ಬೆಳವಣಿಗೆ ಆಗುತ್ತದೆ ಎಂಬುದನ್ನು ಮನಮುಟ್ಟುವಂತೆ ತೋರಿಸಲಾಯಿತು. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಾಯಿಯ, ತಾಯ್ತನದ ಮಹತ್ವದ ಬಗ್ಗೆ ಅರಿವು ಮೂಡಿತು.

ಹ್ಯಾಲೋವಿನ್ ರೂಮ್ ನ ಮೂಲಕ ನೆಗೆಟಿವ್ ವೈಬ್ಸ್ ಅಂದರೆ ಏನು? ಹೇಗಿರುತ್ತದೆ, ಮಕ್ಕಳೆಲ್ಲ ಹೇಗೆ ಭಯ ಬೀಳುತ್ತಾರೆ, ಅದನ್ನು ಸಾಮಾನ್ಯವಾಗಿ ಹೇಗೆ ವೀಕ್ಷಿಸುವುದು, ಭಯವನ್ನು ಹೇಗೆ ಹೋಗಲಾಡಿಸುವುದು ಎಂಬುದನ್ನು ವಿವಿಧ ರೀತಿಯ ಗೊಂಬೆಗಳನ್ನು ಅಲಂಕಾರ ಮಾಡಿ ಪ್ರಸ್ತುತಪಡಿಸಲಾಯಿತು.

ಸೈನ್ಸ್ ಫೆಸ್ಟ್ ನಂತರ ಮಧ್ಯಾಹ್ನ 2 ರಿಂದ 5:00 ವರೆಗೆ ಕಿಡ್ಸ್ ಕಾರ್ನಿವಲ್ ಚಟುವಟಿಕೆಯನ್ನು ಮಕ್ಕಳ ಮನರಂಜನೆ ಪ್ರಯುಕ್ತ ಆಯೋಜಿಸಲಾಗಿತ್ತು. ಇದರಲ್ಲಿ ಮಕ್ಕಳಿಗೆ ಅರ್ಚರಿ, ಬ್ಯಾಸ್ಕೆಟ್ಬಾಲ್, ನೆಟ್ ಬ್ಯಾಲೆನ್ಸಿಂಗ್, ವಿವಿಧ ಸಾಕುಪ್ರಾಣಿಗಳ ಪ್ರದರ್ಶನ, ಟ್ಯಾಟು ಹಾಕುವುದು, ಇನ್ನು ಮುಂತಾದ ಹಲವಾರು ಕ್ರೀಡಾ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮನರಂಜನೆ ಮತ್ತು ಉತ್ತಮ ಅನುಭವವನ್ನು ನೀಡಲಾಯಿತು.

ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಜ್ಞಾನ, ಪ್ರಾಯೋಗಿಕತೆ, ಚಟುವಟಿಕೆಯನ್ನು ಹೇಗೆ ಸಿದ್ಧಪಡಿಸುವುದು, ಅದನ್ನು ಹೇಗೆ ಪ್ರಸ್ತುತಪಡಿಸುವುದು ಎಂಬುದರ ಬಗ್ಗೆ ತಿಳಿದುಕೊಂಡರು. ಎಲ್ಲರೂ ಆಸಕ್ತಿ ಮತ್ತು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಎಲ್ಲಾ ಪೋಷಕರು ಸಹ ಕಾರ್ಯಕ್ರಮವನ್ನು ವೀಕ್ಷಿಸಿ ಈ ಕಾರ್ಯಕ್ರಮವು ತುಂಬಾ ಅದ್ಭುತವಾಗಿ ಮೂಡಿ ಬಂದಿದ್ದು, ನಮ್ಮ ಮಕ್ಕಳನ್ನು ಸಿದ್ಧಪಡಿಸಿರುವುದು ನಮಗೆ ತುಂಬಾ ಖುಷಿಯಾಗಿದೆ. ಇದು ನಮಗೆ ನಮ್ಮ ಮಕ್ಕಳಿಗೆ ಒಂದು ಉತ್ತಮ ಅವಕಾಶವಾಗಿದ್ದು ವೈಜ್ಞಾನಿಕ ಜ್ಞಾನ ಮತ್ತು ಅರಿವನ್ನ ನೀಡಿತು. ಈ ಶಾಲೆಯ ಮೂಲಕ ನಮ್ಮ ಮಕ್ಕಳಿಗೆ ಉತ್ತಮ ಜ್ಞಾನ ದೊರೆಯುತ್ತಿದೆ ಎಂದು ಎಲ್ಲರೂ ಉತ್ತಮ ಪ್ರಶಂಸೆ ನೀಡಿದರು.

ಈ ಕಾರ್ಯಕ್ರಮದಲ್ಲಿ ನ್ಯಾಷನಲ್ ಪ್ರೈಡ್ ಶಾಲೆಯ ಸಂಸ್ಥಾಪಕ ಸಿ ಎನ್ ನಾಗರಾಜುರವರು, ಕಾರ್ಯದರ್ಶಿಯಾದ ಸತೀಶ್ ರಾಜ್, ಮುಖ್ಯ ಶಿಕ್ಷಕಿಯಾದ ರಶ್ಮಿ, ಹಾಗೂ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು, ಎಲ್ಲಾ ಪೋಷಕರು ಪಾಲ್ಗೊಂಡಿದ್ದರು.