
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ, ಡಿವೈಎಸ್ ಪಿ ಕಚೇರಿ ಮುಂಭಾಗ ಒಂದು ಕೋಟಿ 25 ಲಕ್ಷ ವೆಚ್ಚದಲ್ಲಿ ರೇಷ್ಮೆ ಸೀರೆ ಮಾರಾಟ ಮಳಿಗೆಗಳ ಭವನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಧೀರಜ್ ಮುನಿರಾಜ್.
ಬಿಜೆಪಿ ಶಂಕುಸ್ಥಾಪನೆ / ಕಾಂಗ್ರೆಸ್ ಪ್ರತಿಭಟನೆ

ಶಿಷ್ಟಾಚಾರ ಪಾಲನೆ ಮಾಡದೇ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಸಭೆ ಸದಸ್ಯರನ್ನು ಕಡೆಗಣಿಸಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ನಗರದ ಪ್ರವಾಸಿ ಮಂದಿರ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ. ಇತ್ತ ನಗರದ ನಗರ ಪೊಲೀಸ್ ಠಾಣೆ ಎದುರಿನಲ್ಲಿ ನುಗದು ಪಡಿಸಿರುವ ಜಾಗದಲ್ಲಿ ಶಾಸಕ ಧೀರಜ್ ಮುನಿರಾಜ್ ಅವರು ತಮ್ಮ ಪಾಡಿಗೆ ತಾವು ಕಾಮಗರಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ….