
ಕರ್ನಾಟಕ ರಾಜ್ಯ ಸರ್ಕಾರ ಪ್ರತೀ ವರ್ಷದಂತೆ ಈ ವರ್ಷವೂ ಸಹ ದಸರಾ ಕ್ರೀಡಾಕೂಟವನ್ನು ಮೈಸೂರಿನಲ್ಲಿ ಆಯೋಜನೆ ಮಾಡಲಾಗುತ್ತಿದೆ. ಈ ದಸರಾ ಕ್ರೀಡಾಕೂಟಕ್ಕೆ ದೊಡ್ಡಬಳ್ಳಾಪುರದ ಯೋಗ ಪ್ರತಿಭೆ ಜಿ.ಸಿ ಹೃತಿಕ್ ಆಯ್ಕೆ ಆಗಿದ್ದಾರೆ.
ಯೋಗ ಪ್ರತಿಭೆ ಜಿ.ಸಿ ಹೃತಿಕ್ ಅವರು ನಗರದ ಶ್ರೀ ಮಾರುತಿ ಯೋಗಾಸನ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದು ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಜಿ.ಸಿ ಹೃತಿಕ್ ಅವರು ಶಿವಮೊಗ್ಗದಲ್ಲಿ ನಡೆದ ವಿಭಾಗ ಮಟ್ಟದ ದಸರಾ ಯೋಗಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಂಪ್ರದಾಯಿಕ ಹಾಗೂ ಕಲಾತ್ಮಕ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದು ಈಗ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲೂ ಪ್ರಥಮ ಸ್ಥಾನ ಗಳಿಸಿ ದೊಡ್ಡಬಳ್ಳಾಪುರಕ್ಕೆ ಹೆಮ್ಮೆ ತರುವಂತಾಗಲಿ ಎಂದು ಶ್ರೀ ಮಾರುತಿ ಯೋಗಾಸನ ಕೇಂದ್ರದ ತರಬೇತುದಾರ ರಘು.ಎಚ್.ಜಿ, ಸುಗುಣಶ್ರೀ ಹಾಗೂ ಇತರರು ಜಿ.ಸಿ ಹೃತಿಕ್ ಅವರಿಗೆ ಶುಭ ಹಾರೈಸಿದ್ದಾರೆ.