75ನೇ ಗಣರಾಜ್ಯೋತ್ಸವ ಹಿನ್ನೆಲೆ: ಫೆ.10 ರಿಂದ 17 ರವರೆಗೆ ತಾಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಆಯೋಜನೆ

ದೊಡ್ಡಬಳ್ಳಾಪುರ: 75ನೇ ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಸಂವಿಧಾನ‌ ಜಾಗೃತಿ ಜಾಥಾ ಶನಿವಾರ ದೊಡ್ಡಬಳ್ಳಾಪುರ ತಾಲೂಕು ಪ್ರವೇಶಿಸಲಿದೆ.

ಫೆ.10 ರಿಂದ 17 ರವರೆಗೆ ತಾಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ‌ ನಿರ್ದೇಶಕ ಉಮಾಪತಿ ತಿಳಿಸಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶನಿವಾರ ಬೆಳಿಗ್ಗೆ 9ಕ್ಕೆ ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯ್ತಿಗೆ ಆಗಮಿಸಲಿದೆ. ಶಾಸಕರು ಸೇರಿ ಸ್ಥಳೀಯ ಜನಪ್ರತಿನಿಧಿಗಳು ಜಾಥಾದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಹೆಗ್ಗಡಿಹಳ್ಳಿ ಗ್ರಾ.ಪಂ ಬಳಿಕ ಜಾಗೃತಿ ಜಾಥಾ ಮೆಳೆಕೋಟೆ, ತೂಬಗೆರೆ, ಎಸ್.ಎಸ್.ಘಾಟಿಗೆ ತೆರಳಲಿದೆ. ಶ್ರೀಕ್ಷೇತ್ರ ಘಾಟಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ‌ ಮೊದಲ ದಿನದ ಜಾಗೃತಿ ಜಾಥಾ ಮುಕ್ತಾಯವಾಗಲಿದೆ.

ಫೆ. 11 ರಂದು ಹಾಡೋನಹಳ್ಳಿ, ರಾಜಘಟ್ಟ, ಕೊನಘಟ್ಟ, ಹೊಸಹಳ್ಳಿ ಗ್ರಾ.ಪಂ‌ ನಲ್ಲಿ ಜಾಥಾ ನಡೆಯಲಿದೆ. ಫೆ.12 ರಂದು ಆರೂಢಿ, ಸಾಸಲು, ಭಕ್ತರಹಳ್ಳಿ ಹಾಗೂ ಸಕ್ಕರೆ ಗೊಲ್ಲಹಳ್ಳಿಯಲ್ಲಿ ಜಾಥಾ ಸಾಗಲಿದೆ. ಫೆ.13 ರಂದು ದೊಡ್ಡಬೆಳವಂಗಲ, ಹುಲಿಕುಂಟೆ, ತಿಪ್ಪೂರು ಹಾಗೂ ಹಣಬೆ ಗ್ರಾ.ಪಂ.ಗಳಲ್ಲಿ ಸಂವಿಧಾನ ಜಾಥಾ ನಡೆಯಲಿದೆ.

ಫೆ.14 ರಂದು ಕೆಸ್ತೂರು, ಹೊನ್ನಾವರ, ಕನಸವಾಡಿ, ಚನ್ನದೇವಿ ಅಗ್ರಹಾರದಲ್ಲಿ ಜಾಥಾ ಸಾಗಲಿದೆ. ಫೆ.15 ರಂದು ಕಾಡನೂರು, ದೊಡ್ಡತುಮಕೂರು, ಮಜರಾ ಹೊಸಹಳ್ಳಿ, ಹಾದ್ರಿಪುರ ಗ್ರಾ.ಪಂ.ನಲ್ಲಿ ಜಾಥಾ ನಡೆಯಲಿದೆ.

ಫೆ.16 ರಂದು ಕಂಟನಕುಂಟೆ, ಕೊಡಿಗೇಹಳ್ಳಿ, ದರ್ಗಾ ಜೋಗಿಹಳ್ಳಿ, ಅರಳು ಮಲ್ಲಿಗೆ ಗ್ರಾ.ಪಂ.ನಲ್ಲಿ ಜಾಥಾ‌ ನಡೆಯಲಿದೆ. ಕೊನೆಯ ದಿನವಾದ ಫೆ.17 ರಂದು ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ‌ ಸಂವಿಧಾನ ಜಾಗೃತಿ ಜಾಥಾ ನಡೆಯಲಿದೆ. ಪ್ರತಿ ಪಂಚಾಯ್ತಿಯಲ್ಲಿ ನಡೆಯುವ ಜಾಗೃತಿ ಜಾಥಾದಲ್ಲಿ ಐದು ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಉಮಾಪತಿ ತಿಳಿಸಿದರು.

ಜಾಗೃತಿ ಜಾಥಾ ಯಶಸ್ವಿಗೆ ಎಲ್ಲ ದಲಿತಪರ, ಕನ್ನಡಪರ ಸಂಘಟನೆಗಳು ಶ್ರಮಿಸುವ ಜೊತೆಗೆ ಜಾಥಾದಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

Ramesh Babu

Journalist

Recent Posts

ಎಸ್ ಐ ಆರ್…..

ನಾವು ಅಕ್ರಮ ವಲಸಿಗರಲ್ಲ, ವಂಚಕರಲ್ಲ, ಈ ಮಣ್ಣಿನ ಮೂಲ ನಿವಾಸಿಗಳು. ದಯವಿಟ್ಟು ನಮ್ಮ ಅಸ್ತಿತ್ವವನ್ನು, ಸ್ವಾಭಿಮಾನವನ್ನು ಪ್ರಶ್ನಿಸಬೇಡಿ. ನಾವು ಭಾರತೀಯರು......…

1 hour ago

ಮಾರ್ಖಂಡೇಯ ಜಲಾಶಯದ ನೀರು ಪೋಲು ತಡೆಗೆ ಚಲುವರಾಯಸ್ವಾಮಿ ಖಡಕ್ ಸೂಚನೆ

ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ…

13 hours ago

ಪೊಲೀಸರೆಂದು ನಂಬಿಸಿ ವೃದ್ಧ ದಂಪತಿಗೆ ಚಿನ್ನಾಭರಣ ವಂಚನೆ: ಇಬ್ಬರು ಆರೋಪಿಗಳು ವಶಕ್ಕೆ: ದೂರುದಾರರಿಗೆ ಚಿನ್ನಾಭರಣ ಹಸ್ತಾಂತರ

ದೊಡ್ಡಬಳ್ಳಾಪುರ: ಪೊಲೀಸರೆಂದು ಪರಿಚಯಿಸಿಕೊಂಡು ವೃದ್ಧ ದಂಪತಿಯನ್ನು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು…

17 hours ago

ಮಳೆ ಕೊರತೆ; ಮತ್ಸ್ಯ ಕೃಷಿಗೂ ಹೊಡೆತ!

ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ…

20 hours ago

ಬರಿದಾಗುತ್ತಿರುವ ಕರ್ನಾಟಕದ ಖಜಾನೆ…….

ಬರಿದಾಗುತ್ತಿರುವ ಕರ್ನಾಟಕದ ಖಜಾನೆ....... ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ...... ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ…

22 hours ago

ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…

1 day ago