Categories: ಸಿನಿಮಾ

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ರಾಷ್ಟ್ರಪತಿ ಅವರಿಂದ ಪ್ರಶಸ್ತಿ ಪ್ರದಾನ

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನ ದೆಹಲಿಯ ವಿಜ್ಞಾನ ಭವನದಲ್ಲಿ ಅಯೋಜನೆ ಮಾಡಲಾಗಿತ್ತು. ರಾಷ್ಟ್ರಪತಿ ದ್ರೌಪತಿ ಮುರ್ಮು ಪ್ರಶಸ್ತಿ ವಿಚೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಭಾರತವು ವಿಶ್ವದಲ್ಲೇ ಅತಿ ದೊಡ್ಡ ಚಲನಚಿತ್ರ ನಿರ್ಮಾಣ ರಾಷ್ಟ್ರವಾಗಿ ಹೊರಹೊಮ್ಮಿದೆ. ವಿಶ್ವದ ವಿಷಯ ಗಮ್ಯತಾಣ(ಕಂಟೆಂಟ್ ಹಬ್) ಆಗುವ ಎಲ್ಲಾ ಸಾಮರ್ಥ್ಯವನ್ನು ಭಾರತ ಹೊಂದಿದೆ. ಬಾಫ್ಟಾ ಪ್ರಶಸ್ತಿಯೇ ಆಗಿರಬಹುದು ಅಥವಾ ಆಸ್ಕರ್ ಪ್ರಶಸ್ತಿಯೇ ಆಗಿರಬಹುದು, ಎಲ್ಲಾ ಪ್ರಶಸ್ತಿಗಳನ್ನು ಗೆದ್ದು ಇಂದು ನಮ್ಮ ಚಲನಚಿತ್ರಗಳು ವಿಶ್ವಾದ್ಯಂತ ಗುರುತಿಸಲ್ಪಡುತ್ತಿವೆ.

“ರಾಕೆಟ್ರಿ: ದಿ ನಂಬಿ ಎಫೆಕ್ಟ್” ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾದರೆ, ಸೃಷ್ಟಿ ಲಖೇರಾ ನಿರ್ದೇಶನದ ಏಕ್ ಥಾ ಗಾಂವ್ ಅತ್ಯುತ್ತಮ ಸಾಕ್ಷ್ಯಚಿತ್ರ(ನಾನ್-ಫೀಚರ್) ಪ್ರಶಸ್ತಿ ಪಡೆದಿದೆ. RRR ಸಂಪೂರ್ಣ ಮನರಂಜನೆ ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ ಪ್ರಶಸ್ತಿ ಪಡೆದಿದೆ.

ಪುಷ್ಪ (ದಿ ರೈಸ್ ಭಾಗ-1) ಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. ಆಲಿಯಾ ಭಟ್ ಮತ್ತು ಕೃತಿ ಸನೋನ್ ಇಬ್ಬರೂ ಕ್ರಮವಾಗಿ ಗಂಗೂಬಾಯಿ ಕಥಿಯಾವಾಡಿ ಮತ್ತು ಮಿಮಿ ಅತ್ಯುತ್ತಮ ನಟಿ ಪ್ರಶಸ್ತಿ ವಿಜೇತರಾಗಿದ್ದಾರೆ.

ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಾಣ ಮಾಡಿ, ಕಿರಣ್ ರಾಜ್ ನಿರ್ದೇಶನ ಮಾಡಿರುವ ಸೂಪರ್ ಹಿಟ್ ಸಿನಿಮಾ ‘777 ಚಾರ್ಲಿ’ಗೆ ಕನ್ನಡ ಭಾಷೆಯ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದೊರಕಿದೆ.

ಪ್ರಶಸ್ತಿ ಪಟ್ಟಿ ಹೀಗಿದೆ

ಅತ್ಯುತ್ತಮ ಚಲನಚಿತ್ರ: ರಾಕೆಟ್ರಿ; ದಿ ನಂಬಿ ಎಫೆಕ್ಟ್‌

ಅತ್ಯುತ್ತಮ ನಟ: ಅಲ್ಲು ಅರ್ಜುನ್, ಪುಷ್ಪ

ಅತ್ಯುತ್ತಮ ನಟಿ: ಆಲಿಯಾ ಭಟ್ (ಗಂಗೂಬಾಯಿ ಕಾಥಿಯಾವಾಡಿ) ಕೃತಿ ಸನೋನ್ಮಿ ( ಮಿಮಿ)

ಅತ್ಯುತ್ತಮ ನಿರ್ದೇಶಕ: ನಿಖಿಲ್ ಮಹಾಜನ್, ಗೋದಾವರಿ (ಮರಾಠಿ)

ಅತ್ಯುತ್ತಮ ಜನಪ್ರಿಯ ಚಲನಚಿತ್ರ: ಆರ್‌ಆರ್‌ಆರ್‌

ನರ್ಗಿಸ್ ದತ್ ಪ್ರಶಸ್ತಿ: ದ ಕಾಶ್ಮೀರ್ ಫೈಲ್ಸ್ ಕುರಿತ ಅತ್ಯುತ್ತಮ ಚಲನಚಿತ್ರಕ್ಕಾಗಿ

ಅತ್ಯುತ್ತಮ ಪೋಷಕ ನಟ: ಪಂಕಜ್ ತ್ರಿಪಾಠಿ (ಮಿಮಿ)

ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ (ಕಾಶ್ಮೀರ್‌ ಫೈಲ್ಸ್‌)

ಅತ್ಯುತ್ತಮ ಚಿತ್ರಕಥೆ: ನಾಯಟ್ಟು (ಮಲಯಾಳಂ)

ಅತ್ಯುತ್ತಮ ಚಿತ್ರಕಥೆ: ಗಂಗೂಬಾಯಿ ಕಾಥಿಯಾವಾಡಿ (ಹಿಂದಿ)

ಅತ್ಯುತ್ತಮ ಸಂಗೀತ ನಿರ್ದೇಶನ: ಪುಷ್ಪ (ತೆಲುಗು)

ಅತ್ಯುತ್ತಮ ಹಿನ್ನೆಲೆ ಸಂಗೀತ ನಿರ್ದೇಶನ: ಎಂಎಂ ಕೀರವಾಣಿ (ಆರ್‌ಆರ್‌ಆರ್‌)

ಅತ್ಯುತ್ತಮ ಗಾಯಕ:‌ ಆರ್‌ಆರ್‌ಆರ್‌ (ಕಾಲ ಭೈರವ)

ಅತ್ಯುತ್ತಮ ಗಾಯಕಿ: ಇರೈವನ್‌ ನಿಝಾಲ್‌ (ಶ್ರೇಯಾ ಘೋಷಾಲ್)

ಅತ್ಯುತ್ತಮ ಸಾಹಿತ್ಯ: ಚಂದ್ರಭೋಸ್‌ (ಕೊಂಡ ಪೊಲಂ)

ಅತ್ಯುತ್ತಮ ನೃತ್ಯ ಸಂಯೋಜನೆ: ಪ್ರೇಮ್‌ ರಕ್ಷಿತ್‌ (RRR)

ಅತ್ಯುತ್ತಮ ಛಾಯಾಗ್ರಹಣ: ಸರ್ದಾರ್ ಉದ್ಧಮ್ (ಮುಖ್ಯೋಫಾಧ್ಯಾಯ)

ಅತ್ಯುತ್ತಮ ವಸ್ತ್ರ ವಿನ್ಯಾಸ: ವೀರ ಕಪೂರ್‌ (ಸರ್ದಾರ್ ಉಧಮ್)‌

ಅತ್ಯುತ್ತಮ ನಿರ್ಮಾಣ ವಿನ್ಯಾಸ: ಸರ್ದಾರ್ ಉಧಮ್

ಅತ್ಯುತ್ತಮ ಸಂಕಲನ: ಗಂಗೂಬಾಯಿ ಕಾಥಿಯಾವಾಡಿ

ಅತ್ಯುತ್ತಮ ಮೇಕಪ್: ಗಂಗೂಬಾಯಿ ಕಾಥಿಯಾವಾಡಿ

ಅತ್ಯುತ್ತಮ ಸಾಹಸ ನೃತ್ಯ ಸಂಯೋಜನೆ: ಆರ್‌ಆರ್‌ಆರ್‌

ಅತ್ಯುತ್ತಮ ಹಿಂದಿ ಚಿತ್ರ: ಸರ್ದಾರ್ ಉಧಮ್

ಅತ್ಯುತ್ತಮ ಕನ್ನಡ ಸಿನಿಮಾ: 777 ಚಾರ್ಲಿ

ಅತ್ಯುತ್ತಮ ಮಲಯಾಳಂ ಚಿತ್ರ: ಹೋಮ್

ಅತ್ಯುತ್ತಮ ಗುಜರಾತಿ ಚಿತ್ರ: ಚೆಲೋ ಶೋ

ಅತ್ಯುತ್ತಮ ತಮಿಳು ಚಿತ್ರ: ಕಡೈಸಿ ವಿವಾಸಾಯಿ

ಅತ್ಯುತ್ತಮ ತೆಲುಗು ಚಿತ್ರ: ಉಪ್ಪೇನ

ಅತ್ಯುತ್ತಮ ಮರಾಠಿ ಚಿತ್ರ: ಎಕ್ಡ್‌ ಕಾಯ್‌ ಝಾಲ

ಅತ್ಯುತ್ತಮ ಬಂಗಾಳಿ ಚಿತ್ರ: ಕಲ್ಕೊಕ್ಕೊ

ಅತ್ಯುತ್ತಮ ಅಸ್ಸಾಮಿ ಚಿತ್ರ: ಅನುರ್

ಅತ್ಯುತ್ತಮ ಬಾಲ ಕಲಾವಿದ: ಭವೀನ್‌ ರಬರಿ (ಚೆಲ್ಲೋ ಶೋ)

ಅತ್ಯುತ್ತಮ ಮಕ್ಕಳ ಚಿತ್ರ: ಗಾಂಧಿ ಆಂಡ್ ಕಂಪೆನಿ (ಗುಜರಾತಿ)

ಅತ್ಯುತ್ತಮ ನಾನ್‌ ಫೀಚರ್‌ ಸಿನಿಮಾ: ಏಕ್‌ ಥಾ ಗಾವ್‌ಂ

ಅತ್ಯುತ್ತಮ ಪರಿಸರ ಚಿತ್ರ: ಮುನ್ನಾಮ್‌ ಒಲವು (ಮಲಯಾಳಂ)

ಅತ್ಯುತ್ತಮ ತನಿಖಾ ಚಿತ್ರ: ಲುಕಿಂಗ್ ಫಾರ್ ಚಾಲನ್

ಸ್ಪೆಷಲ್ ಮೆನ್ಷನ್: ಬಾಳೆ ಬಂಗಾರ (ಕನ್ನಡ)

ಅತ್ಯುತ್ತಮ ನಾನ್-ಫೀಚರ್ ಚಿತ್ರ: ಏಕ್ ಥಾ ಗಾಂವ್ (ಗಢ್ವಾಲಿ ಮತ್ತು ಹಿಂದಿ)

ಅತ್ಯುತ್ತಮ ನಿರ್ದೇಶಕ: ಸ್ಮೈಲ್ ಪ್ಲೀಸ್ (ಹಿಂದಿ) ಚಿತ್ರಕ್ಕಾಗಿ ಬಾಕುಲ್ ಮತೀಯಾನಿ

ಕೌಟುಂಬಿಕ ಮೌಲ್ಯಗಳ ಮೇಲಿನ ಅತ್ಯುತ್ತಮ ಚಲನಚಿತ್ರ: ಚಾಂದ್ ಸಾನ್ಸೆ (ಹಿಂದಿ)

ಅತ್ಯುತ್ತಮ ಛಾಯಾಗ್ರಾಹಕ: ಪಾತಾಳ ಟೀ (ಭೋಟಿಯಾ) ಚಿತ್ರಕ್ಕಾಗಿ ಬಿಟ್ಟು ರಾವತ್

ಅತ್ಯುತ್ತಮ ತನಿಖಾ ಚಿತ್ರ: ಲುಕಿಂಗ್ ಫಾರ್ ಚಲನ್ (ಇಂಗ್ಲಿಷ್)

ಅತ್ಯುತ್ತಮ ಶೈಕ್ಷಣಿಕ ಚಿತ್ರ :ಸಿರ್ಪಿಗಲಿನ್ ಸಿಪಂಗಲ್ (ತಮಿಳು)

ಅತ್ಯುತ್ತಮ ಅನ್ವೇಷಣಾ ಚಿತ್ರ: ಆಯುಷ್ಮಾನ್

ಅತ್ಯುತ್ತಮ ಕಿರು ಕಾಲ್ಪನಿಕ ಚಿತ್ರ: ದಲ್ ಭಟ್

ಅತ್ಯುತ್ತಮ ಅನಿಮೇಷನ್ ಚಿತ್ರ: ಕಂಡಿತುಂಡು

ಅತ್ಯುತ್ತಮ ನಿರ್ದೇಶನ (ನಾನ್-ಫೀಚರ್ ಫಿಲ್ಮ್): ಬಕುಲ್ ಮತಿಯಾನಿ, ಸ್ಮೈಲ್ ಪ್ಲೀಸ್

ಅತ್ಯುತ್ತಮ ಛಾಯಾಗ್ರಹಣ (ನಾನ್-ಫೀಚರ್ ಫಿಲ್ಮ್): ಬಿಟ್ಟು ರಾವತ್, ಪಟಾಲ್

ಅತ್ಯುತ್ತಮ ನಿರ್ದೇಶಕ : ಸ್ಮೈಲ್ ಪ್ಲೀಸ್ (ಹಿಂದಿ) ಚಿತ್ರಕ್ಕಾಗಿ ಬಾಕುಲ್ ಮತೀಯಾನಿ

ಅತ್ಯುತ್ತಮ ಛಾಯಾಗ್ರಾಹಕ: ಪಾತಾಳ ಟೀ (ಭೋಟಿಯಾ) ಚಿತ್ರಕ್ಕಾಗಿ ಬಿಟ್ಟು ರಾವತ್

ಅತ್ಯುತ್ತಮ ಶೈಕ್ಷಣಿಕ ಚಿತ್ರ: ಸಿರ್ಪಿಗಲಿನ್ ಸಿಪಂಗಲ್ (ತಮಿಳು)

ಸಾಮಾಜಿಕ ಸಮಸ್ಯೆಗಳ ಮೇಲಿನ ಅತ್ಯುತ್ತಮ ಸಿನಿಮಾ: ಮಿಥು ದಿ (ಇಂಗ್ಲಿಷ್), ತ್ರೀಟೂ ಒನ್ (ಮರಾಠಿ ಮತ್ತು ಹಿಂದಿ)

ಅತ್ಯುತ್ತಮ ಪರಿಸರ ಚಲನಚಿತ್ರಗಳು : ಮುನ್ನಂ ವಲವು (ಮಲಯಾಳಂ)

ಸಿನಿಮಾ ಕುರಿತ ಅತ್ಯುತ್ತಮ ಪುಸ್ತಕ: ಲಕ್ಷ್ಮೀಕಾಂತ್

ಪ್ಯಾರೇಲಾಲ್ ಅವರ ಸಂಗೀತ: ರಾಜೀವ್ ವಿಜಯಕರ್ ಅವರ ಇನ್ಕ್ರೆಡಿಬ್ಲಿ ಮೆಲೋಡಿಯಸ್ ಜರ್ನಿ

ಅತ್ಯುತ್ತಮ ಚಲನಚಿತ್ರ ವಿಮರ್ಶಕ: ಪುರುಷೋತ್ತಮ ಚಾರ್ಯುಲು (ತೆಲುಗು)

ಅತ್ಯುತ್ತಮ ಬಯೋಗ್ರಫಿ ಚಿತ್ರ: ರುಕುಮಾತಿರ್ ದುಕುಮಾಜಿ (ಬೆಂಗಾಲಿ)

ಅತ್ಯುತ್ತಮ ಚಲನಚಿತ್ರ ವಿಮರ್ಶಕ (ವಿಶೇಷ ಉಲ್ಲೇಖ): ಬಿ.ಎನ್‌ ಸುಬ್ರಹ್ಮಣ್ಯ (ಕನ್ನಡ)

Ramesh Babu

Journalist

Recent Posts

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ…

7 hours ago

ನಟ ಪ್ರಥಮ್ ಗೆ ಜೀವ ಬೆದರಿಕೆ, ಹಲ್ಲೆ ಯತ್ನ ಪ್ರಕರಣ: ಆರೋಪಿ ಯಶಸ್ವಿನಿ‌ ಗೌಡ, ಬೇಕರಿ ರಘುಗೆ ನ್ಯಾಯಾಂಗ ಬಂಧನ: ಸತ್ಯಕ್ಕೆ ಸಿಕ್ಕ ಜಯ ಎಂದ ಪ್ರಥಮ್

ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ‌ ಗೌಡ,…

7 hours ago

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 25 ಪ್ರವಾಸಿ ತಾಣಗಳು ಗುರುತು

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…

11 hours ago

ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…

13 hours ago

ತಿರುಮಗೊಂಡನಹಳ್ಳಿ ರೈಲ್ವೆ ಮೇಲ್ಸೇತುವೆ ಅತೀ ಶೀಘ್ರದಲ್ಲಿ ನಿರ್ಮಾಣ- ಸಚಿವ ಕೆ.ಎಚ್ ಮುನಿಯಪ್ಪನವರು ಯಾರನ್ನೂ ಕಡೆಗಣಿಸುವುದಿಲ್ಲ- ಆರ್.ಮುರುಳಿಧರ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಾರ್ಗದಲ್ಲಿ…

16 hours ago

ಮದ್ದೂರಿನ ಗಣೇಶ – ಮಸೀದಿ – ಕಲ್ಲು ತೂರಾಟ ಮತ್ತು ಜನಸಾಮಾನ್ಯ……

ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ,…

20 hours ago