3 ಮದುವೆಯಾದ ಐನಾತಿ..? ಪ್ರೀತಿಸಿ ಮದುವೆ ಆಗಿ ಯುವಕರಿಂದ ಹಣ ದೋಚಿರುವ ಆರೋಪ: ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಗಂಡಂದಿರು.!

ಆಕೆ ನೋಡಲು ಸುರ ಸುಂದರಿ. ತನ್ನ ಅಂದವನ್ನೇ ಬಂಡವಾಳ ಮಾಡಿಕೊಂಡು ಯುವಕರಿಗೆ ಬಲೆ ಬೀಸುತ್ತಿದ್ದಳು. ಇವಳ ಮಾಯಾ ಜಾಲಕ್ಕೆ ಬಲಿಯಾಗಿದ್ದು ಮಾತ್ರ ಡಿಲಿವರಿ ಬಾಯ್. ಊರೂರು ಅಲೆದು ಜೀವನ ಸಾಗಿಸುತ್ತಿದ್ದ ಯುವನ ಬಳಿ ಮದುವೆಯ ಆಟ ಆಡಿ ಲಕ್ಷ ಲಕ್ಷ ಹಣ ದೋಚಿರುವ ಆರೋಪ ಕೇಳಿ ಬಂದಿದೆ.

ಹೌದು ಹೀಗೆ ಪೋಲೀಸ್ ಠಾಣೆಯ ಮುಂದೆ ಹೆಂಡತಿ ಜೊತೆಗೆ ಇರುವ ಫೋಟೋ ತೋರಿಸುತ್ತಿರುವ ಗಂಡ, ತನ್ನ ಬಳಿ ಹಣ ಹಾಕಿಸಿಕೊಂಡಿರುವ ಲಿಸ್ಟ್ ತೋರಿಸುತ್ತಿರುವ ಮತ್ತೊಬ್ಬ ಯುವಕ, ನ್ಯಾಯ ಬೇಕು ಎಂದು ಇಬ್ಬರು ಅಳಲು ತೋಡಿಕೊಳ್ಳುತ್ತಿರುವ ಇಬ್ಬರು ಗಂಡಂದಿರು, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ  ದೊಡ್ಡಬೆಳವಂಗಲ ಪೋಲೀಸ್ ಠಾಣೆ ಬಳಿ.

ಹೌದು ದೊಡ್ಡಬಳ್ಳಾಪುರದ‌ ಹಣಬೆ ಗ್ರಾಮದ ಸುಧಾರಾಣಿ(31) ಇಬ್ಬರು ಗಂಡಂದಿರಿಗೆ ಮೋಸ ಮಾಡಿರುವ ಆರೋಪ ಹೊತ್ತ ಮಹಿಳೆ.

ಈಕೆ ಕಳೆದ ಏಳೆಂಟು ವರ್ಷಗಳ ಹಿಂದೆ ಹಿರೇಗೌಡ ಎಂಬ ವ್ಯಕ್ತಿಯೊಂದಿಗೆ ಮದುವೆ ಆಗಿದ್ದಳಂತೆ. ಇಬ್ಬರೂ ಪ್ರಾರಂಭದಲ್ಲಿ ಅನ್ಯೋನ್ಯವಾಗಿಯೇ ಇದ್ದರು. ಇವರಿಬ್ಬರ ಪ್ರೀತಿಗೆ ಒಂದು ಗಂಡು ಮತ್ತೊಂದು ಹೆಣ್ಣು ಮಗಿವಿದೆ. ಆದರೆ ಇವರ ಸಂಸಾರದಲ್ಲಿ ಬಿರುಕು ಬಂದ ಹಿನ್ನಲೆ ಕಳೆದ ಮೂರು ವರ್ಷದಿಂದ ಇಬ್ಬರು ದೂರವಿದ್ದರಂತೆ. ಇದನ್ನೆ ಬಂಡವಾಳ ಮಾಡಿಕೊಂಡ ಮಹಿಳೆ ಬೇರೆ ಬೇರೆ ಯುವಕರಿಗೆ ಬಲೆ ಬೀಸಿದ್ದಾಳೆ.

ಇನ್ನೂ ಡಿಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅನಂತಮೂರ್ತಿ ಎಂಬ ಯುವಕನಿಗೆ ಸುಧಾರಾಣಿ ಬಲೆ ಬೀಸಿದ್ದಾಳೆ. ಆನ್ ಲೈನ್ ನಲ್ಲಿ ವಸ್ತುಗಳನ್ನು ಬುಕ್ ಮಾಡಿಕೊಂಡಿದ್ದ ವೇಳೆ ಡಿಲಿವರಿಗೆ ಬಂದಾಗ ನಂಬರ್ ತೆಗೆದುಕೊಂಡು ಮೊದಲು ಸ್ನೇಹ ಬೆಳೆಸಿದ್ದಾಳೆ. ಸ್ನೇಹ ನಂತರ ಪ್ರೀತಿಯಾಗಿ, ನನ್ನ ಗಂಡ ತೀರಿಹೋಗಿದ್ದಾನೆ ಎಂದು ಸುಳ್ಳು ಹೇಳಿ ಮದುವೆ ಆಗಿದ್ದಳಂತೆ. ಪಾಪ ಒಂಟಿ ಮಹಿಳೆ ಜೀವನ ಕಟ್ಟಿಕೊಡೋಣಾ ಅಂತ ಹೇಳಿ, ಒಳ್ಳೆಯ ಮನಸ್ಸಿನಿಂದ ಮದುವೆ ಆಗಿದ್ದಾನೆ. ಇಬ್ಬರೂ ಸೇರಿ ಒಂದು ವರ್ಷಕ್ಕೂ ಹೆಚ್ಚು ದಿನ ಸಂಸಾರ ಮಾಡಿದ್ದರಂತೆ. ಈ ವೇಳೆ ಆರೋಗ್ಯ ಸರಿ ಇಲ್ಲ, ಸಂಬಂಧಿಕರಿಗೆ ಸಮಸ್ಯೆ ಆಗಿದೆ ಎಂದು ಕುಂಟು ನೆಪ ಹೇಳಿಕೊಂಡು 15 ರಿಂದ 20 ಲಕ್ಷ ಹಣ ದೋಚಿದ್ದಾಳೆ ಎಂದು ಎರಡನೇ ಗಂಡ ಅನಂತಮೂರ್ತಿ ಆರೋಪ ಮಾಡಿದ್ದಾನೆ. ಆದರೆ ಈಗ ಇವರಿಬ್ಬರನ್ನೂ ಬಿಟ್ಟು ಮೂರನೇ ಮದುವೆ ಆಗಿದ್ದಾಳೆ ಎಂದು ಇಬ್ಬರು ಗಂಡಂದಿರು ಆರೋಪ ಮಾಡುತ್ತಿದ್ದಾರೆ. ಇನ್ನೂ ಎರಡನೇ ಗಂಡ ನಾನು ಕೊಟ್ಟ ಹಣ ವಾಪಸ್ ಕೊಡಿ ಎಂದು ಕೇಳಿಕೊಂಡರೆ, ಮೊದಲನೇ ಗಂಡ ನನ್ನ ಮಕ್ಕಳನ್ನು ನನ್ನ ಬಳಿಗೆ ಕಳಿಸಿಕೊಡಿ ಎಂದು ಆಗ್ರಹಿಸುತ್ತಿದ್ದಾನೆ. ಇನ್ನೂ ಘಟನೆ ಕುರಿತು ಮಹಿಳೆ ಮತ್ತು  ಎರಡನೇ ಗಂಡ ದೂರು ಮತ್ತು ಪ್ರತಿ ದೂರು ನೀಡಿದ್ದಾರೆ.

ಒಟ್ಟಾರೆ ತನ್ನ ಅಂದವನ್ನೇ ಬಂಡವಾಳ ಮಾಡಿಕೊಂಡ ಮಹಿಳೆ ಗಂಡಂದಿರಿಗೆ ಮೋಸ ಮಾಡಿ ಪೋಲೀಸ್ ಠಾಣೆ ಮೆಟ್ಟಿಲು ತುಳಿದ್ದಾಳೆ‌. ಪೋಲೀಸರು ಯುವಕರಿಗೆ ಯಾವ ರೀತಿ ನ್ಯಾಯ ಒದಗಿಸುತ್ತಾರೆ ಕಾದು ನೋಡಬೇಕಿದೆ.

Ramesh Babu

Journalist

Recent Posts

ಮಾರಕಾಸ್ತ್ರಗಳಿಂದ ಶಿಕ್ಷಕಿಯ ಕ್ರೂರ ಹತ್ಯೆ: ಕೊಲೆ ಬಳಿಕ ದುಷ್ಕರ್ಮಿಗಳಿಂದ ಶವಕ್ಕೆ ಬೆಂಕಿ

ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯ ಮೇಲೆ ನಡೆದ ಕ್ರೂರ ಹತ್ಯೆ ಪ್ರಕರಣ ಎಲ್ಲರಲ್ಲೂ ಆತಂಕ ಮೂಡಿಸಿದೆ. ಕಮಲಾಪುರ ತಾಲೂಕಿನ…

20 minutes ago

ಲಾಕಪ್ ಡೆತ್ ಮತ್ತು ಮರಣದಂಡನೆ….

ಸುಮಾರು ಆರು ವರ್ಷಗಳ ಹಿಂದೆ ಅಂದರೆ 2020ರಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದ ಅಮಾನುಷ ಲಾಕಪ್ ಡೆತ್ ಬಗ್ಗೆ ಬರೆದ…

2 hours ago

ತಂದೆ-ಮಗನ ಲಾಕಪ್ ಡೆತ್ ಕೇಸ್; ತಮಿಳುನಾಡಿನ 9 ಪೊಲೀಸರಿಗೆ ಗಲ್ಲು ಶಿಕ್ಷೆ

2020ರಲ್ಲಿ ತಮಿಳುನಾಡಿನಲ್ಲಿ ನಡೆದ ಸಾತಂಕುಲಂ ಕಸ್ಟಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮದ್ರಾಸ್ ಹೈಕೋರ್ಟ್‌ ಪೀಠವು 9 ಪೊಲೀಸ್ ಸಿಬ್ಬಂದಿಗೆ…

11 hours ago

ಇಂಧನ ತೈಲ ಮತ್ತು ಅನಿಲ ಪೂರೈಕೆ ಸಮಸ್ಯೆ – ರಾಜ್ಯದ ಜನತೆಗೆ ತೀವ್ರ ಸಂಕಷ್ಟ- ಸಚಿವ ಕೆ.ಎಚ್ ಮುನಿಯಪ್ಪ ಪ್ರತಿಕ್ರಿಯೆ

ರಾಜ್ಯದಲ್ಲಿ ಇಂಧನ ತೈಲ ಮತ್ತು ಅನಿಲ ಪೂರೈಕೆಯ ಸಮಸ್ಯೆ ಗಂಭೀರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ, ಆಹಾರ, ನಾಗರಿಕ ಸರಬರಾಜು ಮತ್ತು…

12 hours ago

ಆಟೋ ಎಲ್‌ಪಿಜಿಗಾಗಿ ಸಾಲುಗಟ್ಟಿ ನಿಂತ ನೂರಾರು ಆಟೋಗಳು

ಆಟೋ ಎಲ್‌ಪಿಜಿಗಾಗಿ ಡಿಕ್ರಾಸ್ ರಸ್ತೆಯ ಸೂಪರ್ ಗ್ಯಾಸ್ ಬಂಕ್ ಬಳಿ ನೂರಾರು ಆಟೋಗಳು ಸಾಲುಗಟ್ಟಿ ನಿಂತಿವೆ. ಆಟೋ ಎಲ್ಪಿಜಿ ಇಲ್ಲದೆ…

14 hours ago

ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

2026-27 ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ(ಆಂಗ್ಲ ಮಾಧ್ಯಮ)ಗೆ ಸೇರಲು ಪರಿಶಿಷ್ಟ ಪಂಗಡದ ಪ್ರತಿಭಾವಂತ…

16 hours ago