ಹೊಸ ವರ್ಷಾಚರಣೆಗೆ ಇನ್ನೇನು ಎರಡು ದಿನಗಳು ಬಾಕಿ ಇದ್ದು, 2025ನೇ ಸಾಲನ್ನು ಬರಮಾಡಿಕೊಂಡು ಅದ್ಧೂರಿ ಸಂಭ್ರಮಾಚರಣೆ ಮಾಡಲು ಸಕಲ ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಸಮುದ್ರಮಟ್ಟದಿಂದ 1,486 ಮೀಟರ್ ಎತ್ತರದಲ್ಲಿರುವ ನಂದಿ ಗಿರಿಧಾಮ ಯುವಕ-ಯುವತಿಯರ ನೆಚ್ಚಿನ ತಾಣ ಹಾಗೂ ಹಾಟ್ ಸ್ಪಾಟ್. ಇಲ್ಲಿನ ತಂಪಾದ ಹವಾಗುಣ, ತುಂತುರು ಮಳೆ, ಗಿಡ, ಮರ, ಬಳ್ಳಿಗಳ ಸೊಬಗು, ನಕ್ಕು ನಲಿಯುವ ಬಣ್ಣಬಣ್ಣ ಹೂಗಳ ವಯ್ಯಾರ. ಸೂರ್ಯೋದಯ ಹಾಗೂ ಸೂರ್ಯಸ್ತ ನೋಡಲು ಲವ್ ಬರ್ಡ್ಸ್, ಪಾರ್ಟಿ ಪ್ರಿಯರು, ನವ ವಿವಾಹಿತರು, ಟೆಕ್ಕಿಗಳು, ಸ್ನೇಹಿತರು ಸೇರಿದಂತೆ ಇತರರು ಇಲ್ಲಿ ಬಂದು ಎಂಜಾಯ್ ಮಾಡುತ್ತಾರೆ. ಪ್ರಕೃತಿ ಮಡಿಲಲ್ಲಿ ಕುಳಿತು ಸೌಂದರ್ಯ ಸವಿಯುತ್ತಾ ಹೊಸ ವರ್ಷವನ್ನು ಅದ್ಧೂರಿಯಾಗಿ ಸೆಲಬ್ರೇಟ್ ಮಾಡಬೇಕು ಎಂದು ಕನಸು ಕೂಡ ಕಂಡಿರುತ್ತಾರೆ. ಆದರೆ, ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಏರಿಕೆ ಮಾಡಿ ಎಲ್ಲರಿಗೂ ಶಾಕ್ ನೀಡಿದೆ.
ಅತಿಥಿ ಗೃಹಗಳ ಕಾಯ್ದಿರಿಸುವಿಕೆ ಕೂಡ ರದ್ದು ಮಾಡಲಾಗಿರುತ್ತದೆ. ನಂದಿ ಬೆಟ್ಟದಲ್ಲಿ ಹಲವಾರು ಸೂಕ್ಷ್ಮ , ಅಪಾಯಕಾರಿ ಪ್ರದೇಶಗಳು ಇದ್ದು, ಜನಸಂದಣಿಯ ಹೆಚ್ಚಾಗಿ ಅನಾಹುತ ಸಂಭವಿಸುವ ಸನ್ನಿವೇಶ ಇರುತ್ತದೆ. ಅದೇರೀತಿ ಹೊಸಬರಿಗೆ ಇಂತಹ ಸ್ಥಳ ಪರಿಚಯ ಇರುವುದಿಲ್ಲ. ಅನಾಹುತ, ಪ್ರಾಣಿ ಹಾನಿ, ಅಪಾಯ ತಪ್ಪಿಸಲು ಸಲುವಾಗಿ, ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ಬಂಧ ಹೇರಲಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ದೊಡ್ಡಬಳ್ಳಾಪು ಉಪವಿಭಾಗದ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ…
ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಳೆ(ಡಿಸೆಂಬರ್ 25) ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ…
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಎಲೆಕ್ಷನ್: ಗೆದ್ದ ಅಭ್ಯರ್ಥಿ ಪಡೆದ ಮತ ಎಷ್ಟು ಗೊತ್ತಾ...? ವಾರ್ಡ್ ನಂ.: 1 ಹೆಸರು: ಶ್ವೇತಾ…
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಮತದಾನ ಡಿ.21ರಂದು ನಡೆದಿತ್ತು. ಇಂದು (ಡಿ.24)ರಂದು ಮತ ಎಣಿಕೆ ನಡೆದಿದ್ದು, ಬಿಜೆಪಿ 14, ಕಾಂಗ್ರೆಸ್…
ಮರ್ಯಾದಾ ಹತ್ಯೆ........ ಕ್ಷಮಿಸಿ ಬಿಡು ಮಾನ್ಯ ಎಂಬ ಹುಬ್ಬಳ್ಳಿ ಹತ್ತಿರದ ನನ್ನ ಗರ್ಭಿಣಿ ತಂಗಿಯೇ..... ನಮ್ಮದೇ ದೇಶದ, ನಮ್ಮದೇ…
ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್ ನಿಂದ ಫೋನ್ ಪೇ ಮೂಲಕ 80 ಸಾವಿರ ಮೋಸದಿಂದ ಪಡೆದು ಆಸ್ಪತ್ರೆಗೂ ಸಹ ದಾಖಲಿಸದೇ…