2025 ಹಣಕಾಸು ವರ್ಷದ ಮೊದಲಾರ್ಧದ ಹಣಕಾಸು ಫಲಿತಾಂಶ ಪ್ರಕಟಿಸಿದ ಅವಿವಾ ಇಂಡಿಯಾ

• *2025 ಹಣಕಾಸು ವರ್ಷದ ಮೊದಲಾರ್ಧದಲ್ಲಿ ₹ 63 ಕೋಟಿ ಲಾಭ. ಹಿಂದಿನ ಕಳೆದ ವರ್ಷದ ₹ 50 ಕೋಟಿಗೆ ಹೋಲಿಸಿದರೆ ಶೇ 25ರಷ್ಟು ಹೆಚ್ಚಳ*
• *ನಿರ್ವಹಣೆಯಲ್ಲಿರುವ ಸ್ವತ್ತುಗಳು (ಎಯುಎಂ) ಶೇ 13ರಷ್ಟು ಏರಿಕೆಯಾಗಿದ್ದು, ₹ 14,636 ಕೋಟಿಗೆ ತಲುಪಿದೆ*
• *ದೀರ್ಘಾವಧಿಯಲ್ಲಿನ ಹೊಣೆಗಾರಿಕೆಗಳನ್ನು ನಿಭಾಯಿಸುವ ಸಾಮರ್ಥ್ಯವು ಶೇ 189ರಿಂದ ಶೇ 194ಕ್ಕೆ ಏರಿಕೆಯಾಗಿದೆ*
• *ಅವಿವಾದ ವಿಶಿಷ್ಟ ಉತ್ಪನ್ನಗಳು ಲಾಭ ತಂದುಕೊಟ್ಟಿದ್ದು, ಗ್ರಾಹಕರು, ಮಾರಾಟಗಾರರು ಮತ್ತು ಷೇರುದಾರರಲ್ಲಿ ವಿಶ್ವಾಸ ಹೆಚ್ಚಿಸಿವೆ*

* 2, ಡಿಸೆಂಬರ್‌ 2024:* ಅವಿವಾ ಇಂಡಿಯಾ, ಹಣಕಾಸು ವರ್ಷ 2025ರ ಮೊದಲಾರ್ಧದ ತನ್ನ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಿದ್ದು ಪ್ರಮುಖ ಮಾನದಂಡಗಳಲ್ಲಿ ಸ್ಥಿರ ಪ್ರಗತಿ ಪ್ರದರ್ಶಿಸಿದೆ. ಈ ಅವಧಿಯಲ್ಲಿ ₹ 63 ಕೋಟಿ ಲಾಭ ಗಳಿಸಿದ್ದು, ಇದು ಹಿಂದಿನ ವರ್ಷದ ₹ 50 ಕೋಟಿಗೆ ಹೋಲಿಸಿದರೆ ಶೇ 25ರಷ್ಟು ಹೆಚ್ಚಳ ಸಾಧಿಸಿದೆ.

ನಿರ್ವಹಣೆಯಲ್ಲಿರುವ ಸ್ವತ್ತು (ಎಯುಎಂ) ಶೇ 13ರಷ್ಟು ಬೆಳವಣಿಗೆ ಕಂಡಿದ್ದು, ₹ 14,636 ಕೋಟಿಗೆ ತಲುಪಿದೆ.

ಇದು ಉತ್ತಮ ನಿಧಿ ನಿರ್ವಹಣೆ ಮತ್ತು ಹೂಡಿಕೆದಾರರ ವಿಶ್ವಾಸ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. ಮಾರಾಟ ಗುಣಮಟ್ಟವೂ ಭಾರಿ ಸುಧಾರಣೆ ಕಂಡಿದ್ದು, “ಪ್ರತಿ 10 ಸಾವಿರ ಪಾಲಿಸಿಗಳಿಗೆ ದೂರುಗಳು” ಹಿಂದಿನ ವರ್ಷದ ಇದೇ ಅವಧಿಯಲ್ಲಿನ 10.3 ರಿಂದ ಈಗ 8.8 ಆಗಿದೆ. ಗ್ರಾಹಕರ ಅನುಭವ ಸುಧಾರಿಸುವ ನಿಟ್ಟಿನಲ್ಲಿ ಅವಿವಾ ಇಂಡಿಯಾದ ಬದ್ಧತೆಗೆ ಇದು ನಿದರ್ಶನವಾಗಿದೆ.

ವಿಮೆ ಪಾಲಿಸಿಗಳಿಗೆ ಗ್ರಾಹಕರಿಂದ ಸಂಗ್ರಹಿಸಲಾದ ಒಟ್ಟಾರೆ ಮೊತ್ತವು (ಜಿಡಬ್ಲ್ಯುಪಿ) ₹ 548 ಕೋಟಿಗಳಷ್ಟಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 546 ಕೋಟಿಗೆ ಹೋಲಿಸಿದರೆ ಸಮಾನ ರೀತಿಯ ಬೆಳವಣಿಗೆ ಸೂಚಿಸುತ್ತದೆ. ಜಿಡಬ್ಲ್ಯುಪಿಗೆ ಕಾರ್ಯಾಚರಣೆ ವೆಚ್ಚ ಅನುಪಾತವು (ಒಪಿಇಎಕ್ಸ್‌) ಕಳೆದ ವರ್ಷದ ಶೇ 30 ರಿಂದ ಶೇ 27 ಕ್ಕೆ ಕುಸಿದಿದೆ. ಇದು ವೆಚ್ಚ ಕಡಿತ ಮತ್ತು ಸಂಪನ್ಮೂಲ ನಿರ್ವಹಣೆಯ ಸರಳೀಕರಣದ ಮೇಲೆ ಕಂಪನಿಯು ಹೆಚ್ಚಿನ ಒತ್ತು ನೀಡಿರುವುದನ್ನು ಸೂಚಿಸುತ್ತದೆ.

ಗ್ರಾಹಕರ ವಿಶ್ವಾಸಾರ್ಹತೆಯ ಪ್ರಮುಖ ಮಾನದಂಡವಾಗಿರುವ ವಿಮೆ ಪರಿಹಾರ ಇತ್ಯರ್ಥ ಅನುಪಾತವು ಶೇ 98.8ರಷ್ಟಿದ್ದು, ಪಾಲಿಸಿದಾರರ ವಿಶ್ವಾಸಾರ್ಹತೆ ಮತ್ತು ಬದ್ಧತೆಯ ವಿಷಯದಲ್ಲಿ ಅವಿವಾ ಇಂಡಿಯಾ ಹೊಂದಿರುವ ದೃಢ ನಂಬಿಕೆಯನ್ನು ಇದು ಸೂಚಿಸುತ್ತದೆ.

ಅವಿವಾ ಇಂಡಿಯಾದ ವಿತರಣಾ ಜಾಲದಲ್ಲಿ 5,600 ತರಬೇತಿ ಹೊಂದಿರುವ ವಿಮೆ ವೃತ್ತಿಪರರು ಇದ್ದಾರೆ. ದೇಶದಾದ್ಯಂತ 52 ಕಚೇರಿಗಳನ್ನು ಹೊಂದಿದೆ. ಈ ಮೂಲಕ ತನ್ನ ವೈವಿಧ್ಯಮಯ ಗ್ರಾಹಕ ಸಮೂಹಕ್ಕೆ ದಕ್ಷವಾಗಿ ಕಂಪನಿಯು ಸೇವೆ ಸಲ್ಲಿಸುತ್ತಿದೆ.

ಅವಿವಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಸಿತ್ ರಥ್ ಅವರು ಮಾತನಾಡಿ, ʼನಮ್ಮ ಗ್ರಾಹಕ-ಕೇಂದ್ರಿತ ಉತ್ಪನ್ನಗಳು ಮತ್ತು ಕಾರ್ಯಾಚರಣೆಯ ದಕ್ಷತೆಯಿಂದ ಲಾಭ ಹೆಚ್ಚಳವಾಗಿದ್ದು, ಈ ನಿರಂತರ ಬೆಳವಣಿಗೆಯು ಮಾರುಕಟ್ಟೆಯಲ್ಲಿ ವಹಿವಾಟು ಹೆಚ್ಚುತ್ತಿರುವ ನಮ್ಮ ಸಾಮರ್ಥ್ಯವನ್ನು ಇದು ಪ್ರತಿಬಿಂಬಿಸುತ್ತದೆ. ನಮ್ಮ ಗ್ರಾಹಕರಿಗೆ ಆರ್ಥಿಕ ಭದ್ರತೆ ಮತ್ತು ಸಮಗ್ರ ಯೋಗಕ್ಷೇಮವನ್ನು ಉತ್ತೇಜಿಸಲು ನಾವು ಬದ್ಧರಾಗಿದ್ದೇವೆʼ ಎಂದು ಹೇಳಿದ್ದಾರೆ.

*ಭವಿಷ್ಯದ ಕ್ರಮಗಳು:*

ಮುಂಬರುವ ತ್ರೈಮಾಸಿಕಗಳಲ್ಲಿ ಅವಿವಾ ಇಂಡಿಯಾ ಪರಿವರ್ತನೀಯ ಬ್ರ್ಯಾಂಡ್ ಪರಿಚಯಿಸಲು ಸಜ್ಜಾಗಿದೆ. ಈ ಬದಲಾವಣೆಯು ಗ್ರಾಹಕರು ಮತ್ತು ಪಾಲುದಾರರನ್ನು ಆರೋಗ್ಯಕರ ನಿರ್ಧಾರ ಕೈಗೊಳ್ಳಲು ಆದ್ಯತೆ ನೀಡುವುದಕ್ಕೆ ಪ್ರೇರೇಪಿಸುವ ಗುರಿ ಹೊಂದಿದೆ.

ಕಡಿಮೆ ವಿಮೆ ಪರಿಹಾರದ ಹಾಗೂ ಕಡಿಮೆ ಪ್ರೀಮಿಯಂನ ವಿಮೆ ಉತ್ಪನ್ನಗಳನ್ನು ಕಂಪನಿಯು ಭವಿಷ್ಯದಲ್ಲಿ ಪರಿಚಯಿಸಲಿದ್ದು, ಇವು ಜನಸಾಮಾನ್ಯರಿಗೆ ಹೆಚ್ಚು ಉಪಯುಕ್ತವಾಗಿರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

Ramesh Babu

Journalist

Recent Posts

ಸ್ಟಿಂಗ್ ಆಪರೇಷನ್ ಹಿಂದೆ ಜೆಡಿಎಸ್ ಕೈವಾಡ: ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ

"ಕುಮಾರಸ್ವಾಮಿ ಯಾರು? Who is kumaraswmay. ಡಿ.ಕೆ. ಶಿವಕುಮಾರ್ ಸಿಎಂ ಆಗಿರುವುದನ್ನು ಒಪ್ಪದಿರುವುದಕ್ಕೆ ಅವರು ಯಾರು? ಅವರಿಗೂ ಇದಕ್ಕೂ ಏನು…

52 minutes ago

ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ: ಅ.21 ರಿಂದ ಅ.23 ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ-2026ರ ಸಂಬಂಧ ಅಕ್ಟೋಬರ್ 23 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ…

5 hours ago

ಸಮಾಜಸೇವೆ ಮೂಲಕ ಹುಟ್ಟುಹಬ್ಬ ಆಚರಣೆ ಎಲ್ಲರಿಗೂ ಮಾದರಿ: ಸಂಜೀವ್ ನಾಯಕ್

ದೊಡ್ಡಬಳ್ಳಾಪುರ: ಅದ್ದೂರಿ ಆಚರಣೆಗಳಿಗೆ ಸೀಮಿತವಾಗದೆ, ಸಮಾಜಮುಖಿ ಕಾರ್ಯಗಳ ಮೂಲಕ ಹುಟ್ಟುಹಬ್ಬ ಆಚರಿಸುವುದು ಇತರರಿಗೂ ಮಾದರಿಯಾಗಲಿದೆ ಎಂದು ಕನ್ನಡ ಪಕ್ಷದ ರಾಜ್ಯ…

6 hours ago

ನಾಡಕಚೇರಿ, ಕಾವೇರಿ ತಂತ್ರಾಂಶಕ್ಕೆ ತಾಂತ್ರಿಕ ಗ್ರಹಣ! ಸರ್ವರ್ ಸಮಸ್ಯೆಯಿಂದ ಸರ್ಕಾರಿ ಸೇವೆಗಳಿಗೆ ಬ್ರೇಕ್‌; ಕಚೇರಿಗಳಿಗೆ ಅಲೆದು ಹೈರಾಣಾದ ಜನರು

ಸರ್ಕಾರಿ ಸೇವೆಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ, ತ್ವರಿತವಾಗಿ ತಲುಪಿಸಬೇಕೆಂಬ ಉದ್ದೇಶದಿಂದ ಜಾರಿಗೆ ತಂದಿರುವ ಡಿಜಿಟಲ್ ವ್ಯವಸ್ಥೆಗಳೇ ಇದೀಗ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿವೆ.…

7 hours ago

ದೊಡ್ಡಬಳ್ಳಾಪುರದಲ್ಲಿ 4 ಲಕ್ಷ ಮೌಲ್ಯದ ಗಾಂಜಾ ವಶ: ಆರೋಪಿ ಬಂಧನ

ದೊಡ್ಡಬಳ್ಳಾಪುರ: ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ,…

9 hours ago

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆ

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆಲಂಚ ಸ್ವೀಕಾರ ಆರೋಪಕ್ಕೆ ಸಂಬಂಧಿಸಿದಂತೆ ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್‌ (MIL)…

12 hours ago