ಬಿಹಾರದಿಂದ ಹೈದರಾಬಾದ್ ಗೆ 2.15ಕೋಟಿ ಮೌಲ್ಯದ ವಿವಿಧ ಬ್ರಾಂಡ್‌ಗಳ ನಕಲಿ ಸಿಗರೇಟ್‌ಗಳನ್ನು ಸಾಗಿಸಿದ ಆರೋಪದ ಮೇಲೆ ಸೈಬರಾಬಾದ್ ವಿಶೇಷ ಕಾರ್ಯಾಚರಣೆ ತಂಡ ಹಾಗೂ RGIA ಪೊಲೀಸರ ಸಹಕಾರದೊಂದಿಗೆ ನಾಲ್ವರನ್ನು ಬಂಧಿಸಿದೆ.
ಏಪ್ರಿಲ್ 10 ರಂದು ರಂಗಾ ರೆಡ್ಡಿ ಜಿಲ್ಲೆಯ ಶಂಶಾಬಾದ್‌ನ ಗಗನ್ ಪಹಾಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಟ್ರಕ್‌ನಿಂದ ನಿಷೇಧಿತ ಸಿಗರೇಟ್‌ಗಳ ಹಲವಾರು ಪೆಟ್ಟಿಗೆಗಳನ್ನು ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ನಕಲಿ ಸಿಗರೇಟ್‌ಗಳನ್ನು ಡಿಟರ್ಜೆಂಟ್ ಪೌಡರ್ ಎಂದು ಹೇಳುವ ಚೀಲಗಳಲ್ಲಿ ಬಚ್ಚಿಟ್ಟು ಬಿಹಾರದಿಂದ ಪಾಟ್ನಾ ಮೂಲಕ ಹೈದರಾಬಾದ್‌ಗೆ ಕಂಟೈನರ್ ಟ್ರಕ್‌ನಲ್ಲಿ ಮುಶೀರಾಬಾದ್‌ನ ಕಂಪನಿಗೆ ತಲುಪಿಸಲು ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಟ್ರಕ್ ಮಾಲೀಕರು ಸಂವಹನಕ್ಕಾಗಿ ವಾಹನದಲ್ಲಿ ಜನರಲ್ ಪ್ಯಾಕೆಟ್ ರೇಡಿಯೊ ಸರ್ವಿಸ್ (ಜಿಪಿಆರ್‌ಎಸ್) ವ್ಯವಸ್ಥೆಯನ್ನು ಮಾಡಿದ್ದರು ಎಂದು ತಿಳಿದುಬಂದಿದೆ.
ಬಂಧಿತರು ಎಷ್ಟು ದಿನಗಳಿಂದ ಅಕ್ರಮ ದಂಧೆಯಲ್ಲಿದ್ದಾರೆ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದು. ಅವರು ಮುಶೀರಾಬಾದ್‌ನಿಂದ ಸರಕು ಸ್ವೀಕರಿಸುವವರ ವಿವರಗಳನ್ನು ಸಹ ಪಡೆಯಲಾಗುತ್ತಿದೆ.
"ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ " - ಡಾಕ್ಟರ್ ಬಾಬಾ ಸಾಹೇಬ್…
Cheap Emotional Support Animal Letter: Your Guide Understanding Cheap Emotional Support Animal Letters In recent…
Understanding ESA Letters for Mental Health Support The Role of ESA Letters in Mental Health…
ತಲಾ ಆದಾಯದಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ. ಆದ್ದರಿಂದ ದೇಶಕ್ಕೆ ಕಾಂಗ್ರೆಸ್ ಬೇಕು. ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ…
ದೇವಿಯ ಕರಗ ಉತ್ಸವದಲ್ಲಿ ಅಶ್ಲೀಲ ನರ್ತನ ಮಾಡಿದ್ದರಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ…
ಬಾಬು ಜಗಜೀವನ್ ರಾಮ್ ಜಯಂತಿ ಪ್ರಯುಕ್ತ ಏ.5ರ ಭಾನುವಾರ ತೂಬಗೆರೆ ಸರ್ಕಾರಿ ಶಾಲೆಯಲ್ಲಿ ಬಾಬು ಜಗಜೀವನ ರಾಮ್ ರಾಷ್ಟ್ರೀಯ ಶಿಕ್ಷಣ…