ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಬಾರದು ಹೆಣ್ಣು ಸಂಸಾರದ ಕಣ್ಣು ಆಗಬೇಕು ಪ್ರತಿಯೊಬ್ಬ ಮಹಿಳೆಯ ಗ್ರಾಮೀಣ ಮಹಿಳಾ ಗುಂಪುಗಳು ಕರ ಕುಶಲ ಮತ್ತು ವೌಲ್ಯವರ್ಧಿತ ಉತ್ಪನ್ನಗಳನ್ನು ತಾವೇ ತಯಾರಿಸಿ ಮಾರಾಟ ಮಾಡುವ ಮೂಲಕ ಆದಾಯ ಅಭಿವೃದ್ಧಿಯನ್ನು ಮಾಡಿಕೊಂಡು ಸ್ವಯಂ ದುಡಿಮೆಯಿಂದ ಸ್ವವಲಂಭಿಯಾಗಿ ಜೀವನ ನಡೆಸಬೇಕು ಎಂದು ಸಮಾಜ ಸೇವಕಿ ಶಾರದಮ್ಮ ಅಭಿಪ್ರಾಯಪಟ್ಟರು
ಶಿಡ್ಲಘಟ್ಟ ನಗರದ ಕೆಕೆ ಪೇಟೆಯಲ್ಲಿ ಇಂದು ನೆಹರು ಯುವ ಕೇಂದ್ರದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಶ್ರೀ ದಿವ್ಯ ಜ್ಯೋತಿ ಮಹಿಳಾ ಸಂಘ ಹಾಗೂ ಆರುಂಧತಿ ಮಹಿಳಾ ಸಂಘ ಇವರ ಸಹಯೋಗದಲ್ಲಿ ಮಹಿಳಾ ಸಬಲೀಕರಣದ ಕುರಿತು ಅರಿವು ಮತ್ತು ನಾರಿ ಶಕ್ತಿ ಪಿಟ್ ನೆಸ್ ರನ್ಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆಯರು ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಿಸಬೇಕು.ಆಗ ಅವಳು ತನ್ನ ಕುಟುಂಬದ ಎಲ್ಲರಲ್ಲೂ ತಿಳಿವಳಿಕೆ ಮೂಡಿಸುತ್ತಾಳೆ ಆದ್ದರಿಂದ ಮಹಿಳಾ ಸಶಸ್ತ್ರೀಕರಣಕ್ಕೆ, ಸಬಲೀಕರಣಕ್ಕೆ ಶಿಕ್ಷಣವೇ ಮೂಲವಾಗಿದೆ ಎಂದರು. ಇದರ ಜೊತೆಗೆ ಪ್ರತಿಯೊಬ್ಬರು ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಸಹ ಕೇವಲ ಒಂದು ಜಾತಿಗೆ ಸೀಮಿತವಲ್ಲ. ಆದರೆ ಆಡಳಿತ ಸರಕಾರಗಳು ಹಾಗೆ ಮಾಡಿವೆ.ಇವತ್ತಿನ ದಿನ ನೀವೆಲ್ಲ ನಿಮ್ಮ ತಂದೆ ಆಸ್ತಿಯಲ್ಲಿ ಹಕ್ಕನ್ನು ಪಡೆಯಬೇಕು ಎಂದರೆ.ಸರಕಾರಿ ಸೇವೆಯಲ್ಲಿರುವ ಹೆಣ್ಣು ಮಕ್ಕಳಿಗೆ ಹೆರಿಗೆ ಸಮಯದಲ್ಲಿ ಹೆರಿಗೆ ರಜಾ. ಸಮಾನ ಶಿಕ್ಷಣ, ಸೇರಿದಂತೆ ಮೂಲಭೂತ ಹಕ್ಕುಗಳನ್ನು ಸಂವಿಧಾನ ನಮಗೆ ಒದಗಿಸಿಕೊಟ್ಟಿದೆ. ಎಲ್ಲಾ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು ಎಂದರು.
ಇನ್ನು ಇದೆ ಸಂದರ್ಭದಲ್ಲಿ ಆರುಂಧತಿ ಮಹಿಳಾ ಸಂಘ ಅಧ್ಯಕ್ಷರು ಮುನಿರತ್ನ, ಧರ್ಮ ಸ್ಥಳ ಸಂಘದ ಮಾಲಾವತಿ, ಮಂಜುಳಾ ಸೇರಿದಂತೆ ಮತ್ತಿತ್ತರರು ಹಾಜರಿದ್ದರು.
ದೊಡ್ಡಬಳ್ಳಾಪುರ ನಗರದ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಇಂದು ದಿಢೀರ್ ಭೇಟಿ ನೀಡಿ, ಆಸ್ಪತ್ರೆಯಲ್ಲಿನ…
ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸಭೆಯಲ್ಲಿ…
ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.... ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು…
ದ್ವೇಷ ಭಾಷಣ ತಡೆ ಮಸೂದೆಯ ಬಗ್ಗೆ ಬಿಜೆಪಿಗೆ ಮಾತ್ರ ಏಕೆ ಆತಂಕ? ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು…
ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್ಪಿ ಗುಂಜನ್…
ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…