ಹುಣಸೆ ಮರಕ್ಕೆ ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಬೈಕ್ ನಲ್ಲಿ ತೆರಳುವ ವೇಳೆ ಹುಣಸೆಮರಕ್ಕೆ ಗುದ್ದಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಲ್ಲಹಳ್ಳಿಯ ಗುಟ್ಟೇ ಸಮೀಪ ನಡೆದಿದೆ.

ಬೈಕ್ ಸವಾರ ಚಿಕ್ಕಮಧುರೆ ಮೂಲದ ಯೋಗೇಶ್ (16) ವ್ಯಕ್ತಿ ಎಂದು ಗುರುತಿಸಲಾಗಿದೆ.

SSLC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿ, ಓದಿನ ವಿರಾಮದಲ್ಲಿ ಸ್ನೇಹಿತರನ್ನ ಭೇಟಿ ಮಾಡಲು ಬೈಕ್ ನಲ್ಲಿ ಬಂದಿದ್ದಾಗ, ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮರಕ್ಕೆ ಗುದ್ದಿದ ರಭಸಕ್ಕೆ ಬೈಕ್ ಸಂಪೂರ್ಣ ಜಖಂ ಆಗಿದೆ. ಇನ್ನು ಈ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಬಾಲಕನಿಗೆ ಬೈಕ್ ಕ್ರೇಜ್ ಇತ್ತು, ಅವನಿಗೆ ಬೈಕ್ ಸಿಗದಂತೆ ಕೀ ಯನ್ನು ಕದ್ದಿಟ್ಟಿದ್ದರು, ಪೋಷಕರು ತೋಟದ ಕೆಲಸಕ್ಕೆ ಹೋಗಿದ್ದಾಗ ಅವರಿಗೆ ಗೊತ್ತಾಗದಂತೆ ಸ್ನೇಹಿತರನ್ನು ಕಾಣಲು ಬೈಕ್ ನಲ್ಲಿ ಬಂದಿದ್ದ. ಈ ವೇಳೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.
Ramesh Babu

Journalist

Recent Posts

ಅಪ್ಪು5ನೇ ಪುಣ್ಯಸ್ಮರಣೆ: ಅಭಿಮಾನಿಗಳಿಂದ ಬಿರಿಯಾನಿ ವಿತರಣೆ: ನೆಚ್ಚಿನ ನಾಯಕನನ್ನು ನೆನೆದು ಭಾವುಕರಾದ ಅಭಿಮಾನಿಗಳು

ದೊಡ್ಡಬಳ್ಳಾಪುರ: ಕರ್ನಾಟಕ ರತ್ನ, ದಿವಂಗತ ಡಾ. ಪುನೀತ್ ರಾಜಕುಮಾರ್ ಅವರ ಐದನೇ ವರ್ಷದ ಪುಣ್ಯಸ್ಮರಣೆಯನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಎಳ್ಳುಪುರ ಗ್ರಾಮದಲ್ಲಿ…

7 hours ago

ಪೌರ ಕಾರ್ಮಿಕನಿಗೆ ಮಹಿಳೆಯಿಂದ ನಿಂದನೆ ಆರೋಪ: ಮನೆ ಮುಂದೆ ಕಸ ಸುರಿದು ಆಕ್ರೋಶ

ನೆಲಮಂಗಲ: ನಗರದ ವೀವರ್ಸ್ ಕಾಲೋನಿಯ ಮಾರುತಿ ನಗರದಲ್ಲಿ ಕಸ ತೆರವು ವಿಚಾರವಾಗಿ ಮಹಿಳೆ ಮತ್ತು ಪೌರ ಕಾರ್ಮಿಕನ ನಡುವೆ ವಾಗ್ವಾದ…

13 hours ago

ಜಿಲ್ಲೆಯಲ್ಲಿ 8,04,534 ಮತದಾರರು: 3814 ಮತದಾರರ ಹೆಸರು ಡಿಲಿಟ್

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಅಂತಿಮ ಮತದಾರರ ಪಟ್ಟಿಯುಲ್ಲಿ 8,04,534 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್…

1 day ago

ಅತಿಯಾದ ಆತ್ಮವಿಶ್ವಾಸದಿಂದ ಕಾಂಗ್ರೆಸ್‌ಗೆ ಹಿನ್ನಡೆ: ಸಚಿವ ಚಲುವರಾಯಸ್ವಾಮಿ

ವಿಧಾನ ಪರಿಷತ್ತಿನ ಎರಡು ಶಿಕ್ಷಕರ ಹಾಗೂ ಎರಡು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡಿರುವುದಕ್ಕೆ ಅತಿಯಾದ ಆತ್ಮವಿಶ್ವಾಸವೂ…

1 day ago

ಪ್ರಾಮಾಣಿಕತೆಯ ಪ್ರಾಯೋಗಿಕತೆ…….

ಪ್ರಾಮಾಣಿಕತೆ ಎಂಬುದು ಬರಹದಲ್ಲಿ - ಭಾಷಣಗಳಲ್ಲಿ ಅಥವಾ ಬೇರೆ ಯಾವುದೇ ವೇದಿಕೆಯಲ್ಲಿ ‌ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಹೇಳುವುದು ಮತ್ತು ಅದರಂತೆ…

2 days ago

ದೇವನಹಳ್ಳಿ ಬಳಿ ಆರ್‌ಟಿಒ ಮೆಗಾ ರೇಡ್‌: 50ಕ್ಕೂ ಹೆಚ್ಚು ಬಸ್‌ಗಳಿಂದ ತೆರಿಗೆ ವಸೂಲಿ

ದೇವನಹಳ್ಳಿ: ಕರ್ನಾಟಕ ರಾಜ್ಯಕ್ಕೆ ಪಾವತಿಸಬೇಕಾದ ತೆರಿಗೆಯನ್ನು ಕಟ್ಟದೆ ಸಂಚರಿಸುತ್ತಿದ್ದ ಹೊರರಾಜ್ಯಗಳಲ್ಲಿ ನೋಂದಣಿಯಾದ ಖಾಸಗಿ ಬಸ್‌ಗಳ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು…

2 days ago