ಬೈಕ್ ನಲ್ಲಿ ತೆರಳುವ ವೇಳೆ ಹುಣಸೆಮರಕ್ಕೆ ಗುದ್ದಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಲ್ಲಹಳ್ಳಿಯ ಗುಟ್ಟೇ ಸಮೀಪ ನಡೆದಿದೆ.
ಬೈಕ್ ಸವಾರ ಚಿಕ್ಕಮಧುರೆ ಮೂಲದ ಯೋಗೇಶ್ (16) ವ್ಯಕ್ತಿ ಎಂದು ಗುರುತಿಸಲಾಗಿದೆ.
SSLC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿ, ಓದಿನ ವಿರಾಮದಲ್ಲಿ ಸ್ನೇಹಿತರನ್ನ ಭೇಟಿ ಮಾಡಲು ಬೈಕ್ ನಲ್ಲಿ ಬಂದಿದ್ದಾಗ, ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮರಕ್ಕೆ ಗುದ್ದಿದ ರಭಸಕ್ಕೆ ಬೈಕ್ ಸಂಪೂರ್ಣ ಜಖಂ ಆಗಿದೆ. ಇನ್ನು ಈ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.