ಮುಸುಕುದಾರಿಯೊಬ್ಬ ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು ಕದ್ದೊಯ್ದಿದ್ದಾನೆ. ಈ ಘಟನೆ ತಾಲೂಕಿನ ಜಾಲಪ್ಪ ಕಾಲೇಜು ಹಿಂಭಾಗದ ಕುರುಬರಹಳ್ಳಿಯ ಮನೆಯೊಂದರ ಬಳಿ ಇಂದು ಸಂಜೆ ಸುಮಾರು 5 ಗಂಟೆ ಸಮಯದಲ್ಲಿ ನಡೆದಿದೆ.
ಕಳ್ಳನ ಚಲನವಲನ ಹಾಗೂ ಬೈಕ್ ಕಳವು ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್ ಮಾಲೀಕರು ಮನೆಯಲ್ಲಿರುವಾಗಲೇ ಯಾರಿಗೂ ಗೊತ್ತಾಗದೇ ಕಳ್ಳನ ಕೈಚಳಕ ನಡೆದಿದೆ.
ಕಳ್ಳನು ಬಾಯಿಗೆ ಮುಸುಕು ಧರಿಸಿ ಬೈಕ್ ಗಳು ನಿಲ್ಲಿಸಿದ್ದ ಮನೆ ಹತ್ತಿರ ಬಂದು ಬಿಳಿ ಬಣ್ಣದ ಆಕ್ಟೀವ್ ಹೋಂಡಾ ಬೈಕನ್ನು ನಕಲಿ ಕೀ ಬಳಸಿ ಕಳವು ಮಾಡಿದ್ದಾನೆ.
ಇದೇ ರೀತಿ ಇತ್ತೀಚೆಗೆ ತಾಲೂಕಿನ ಹಲವು ಕಡೆ ಬೈಕ್ ಗಳು ನಿಲ್ಲಿಸಿದ್ದ ಜಾಗದಲ್ಲೇ ಮಾಯವಾಗುತ್ತಿವೆ. ಬೈಕ್ ಗಳನ್ನು ಕಳೆದುಕೊಂಡವರು ಪೊಲೀಸ್ ಠಾಣಾ ಮೆಟ್ಟಿಲೇರುತ್ತಿದ್ದಾರೆ. ಬೈಕ್ ಕಳ್ಳರ ಹಾವಳಿಯನ್ನು ಮಟ್ಟಹಾಕಲು ಪೊಲೀಸರು ಯಶಸ್ವಿಯಾಗುತ್ತಾರಾ..? ಕಾದು ನೋಡಬೇಕಾಗಿದೆ….
ಬೆಂಗಳೂರು ಗ್ರಾಮಾಂತರ: ಮೊಬೈಲ್ ಫೋನ್ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್ ಕೇವಲ ಸಂಪರ್ಕ…
ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…
ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ರಿಂದ 60 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ…
ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…
ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…
ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…