ಹಾಡಹಗಲೇ ಬೈಕ್ ಕಳ್ಳತನ: ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದ್ದೊಯ್ದ ಕಳ್ಳ: ಕಳ್ಳನ‌ ಚಮತ್ಕಾರ ಸಿಸಿಟಿವಿಯಲ್ಲಿ ಸೆರೆ

ಮುಸುಕುದಾರಿಯೊಬ್ಬ ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು ಕದ್ದೊಯ್ದಿದ್ದಾನೆ. ಈ ಘಟನೆ ತಾಲೂಕಿನ ಜಾಲಪ್ಪ ಕಾಲೇಜು ಹಿಂಭಾಗದ ಕುರುಬರಹಳ್ಳಿಯ ಮನೆಯೊಂದರ ಬಳಿ ಇಂದು ಸಂಜೆ ಸುಮಾರು 5 ಗಂಟೆ ಸಮಯದಲ್ಲಿ ನಡೆದಿದೆ.

ಕಳ್ಳನ ಚಲನವಲನ ಹಾಗೂ ಬೈಕ್ ಕಳವು ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್ ಮಾಲೀಕರು ಮನೆಯಲ್ಲಿರುವಾಗಲೇ ಯಾರಿಗೂ ಗೊತ್ತಾಗದೇ ಕಳ್ಳನ ಕೈಚಳಕ ನಡೆದಿದೆ.

ಕಳ್ಳನು ಬಾಯಿಗೆ ಮುಸುಕು ಧರಿಸಿ ಬೈಕ್ ಗಳು ನಿಲ್ಲಿಸಿದ್ದ ಮನೆ ಹತ್ತಿರ ಬಂದು ಬಿಳಿ ಬಣ್ಣದ ಆಕ್ಟೀವ್ ಹೋಂಡಾ ಬೈಕನ್ನು ನಕಲಿ ಕೀ ಬಳಸಿ ಕಳವು ಮಾಡಿದ್ದಾನೆ.

ಇದೇ ರೀತಿ ಇತ್ತೀಚೆಗೆ ತಾಲೂಕಿನ ಹಲವು ಕಡೆ ಬೈಕ್ ಗಳು ನಿಲ್ಲಿಸಿದ್ದ ಜಾಗದಲ್ಲೇ ಮಾಯವಾಗುತ್ತಿವೆ. ಬೈಕ್ ಗಳನ್ನು ಕಳೆದುಕೊಂಡವರು ಪೊಲೀಸ್ ಠಾಣಾ ಮೆಟ್ಟಿಲೇರುತ್ತಿದ್ದಾರೆ.    ಬೈಕ್ ಕಳ್ಳರ ಹಾವಳಿಯನ್ನು ಮಟ್ಟಹಾಕಲು ಪೊಲೀಸರು ಯಶಸ್ವಿಯಾಗುತ್ತಾರಾ..? ಕಾದು ನೋಡಬೇಕಾಗಿದೆ….

Ramesh Babu

Journalist

Recent Posts

ಮೊಬೈಲ್ ಚಾರ್ಜಿಂಗ್ ಶಾರ್ಟ್ ಸರ್ಕಿಟ್: ಮನೆಯಲ್ಲಿ ದಟ್ಟ ಹೊಗೆ: ಭಯಭೀತರಾದ ಜನ: ತಪ್ಪಿದ ಭಾರೀ ಅನಾಹುತ

ಮೊಬೈಲ್ ಚಾರ್ಜ್ ಆಗುತ್ತಿರುವಾಗ ಶಾರ್ಟ್ ಸರ್ಕಿಟ್ ಆಗಿ ಮನೆಯಲ್ಲಿ ದಟ್ಟಹೊಗೆ ಆವರಿಸಿಕೊಂಡು ಕೆಲಕಾಲ ಎಲ್ಲರಲ್ಲಿ ಆತಂಕ ಮೂಡಿಸಿದ್ದ ಘಟನೆ ದೊಡ್ಡಬಳ್ಳಾಪುರ…

57 minutes ago

ವೈಚಾರಿಕ ( ವೈಜ್ಞಾನಿಕ ) ಅಧ್ಯಾತ್ಮ………

ಅಧ್ಯಾತ್ಮ ಮತ್ತು ಸದ್ಗುರು ಜಗ್ಗಿ ವಾಸುದೇವ್........ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯರಾದ ಅಧ್ಯಾತ್ಮ ಗುರು. ಅಧ್ಯಾತ್ಮಿಕ ಚಿಂತಕರಲ್ಲಿ ವಿವಿಧ ರೀತಿಯ…

2 hours ago

ಐಸಿಸಿ ಟಿ-20 ವಿಶ್ವಕಪ್ ಟೂರ್ನಿ: ಪಾಕಿಸ್ತಾನ ತಂಡವನ್ನು 61 ರನ್ ಗಳಿಂದ ಬಗ್ಗುಬಡಿದ ಭಾರತ: ದೇಶದ ಜನತೆಗೆ ಮಹಾಶಿವರಾತ್ರಿ ಗಿಫ್ಟ್

ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಭಾರತ…

3 hours ago

ಫೆ.26ರಂದು ಪ್ರಸಿದ್ದ ಮಧುರೆ ಶನಿಮಹಾತ್ಮಸ್ವಾಮಿ 71ನೇ ಬ್ರಹ್ಮರಥೋತ್ಸವ

ಫೆ.26ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ದ ಚಿಕ್ಕಮಧುರೆ ಶ್ರೀ ಶನಿಮಹಾತ್ಮಸ್ವಾಮಿಯ 71ನೇ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ನೆರವೇರಲಿದೆ ಎಂದು ದೇವಾಲಯದ ಪ್ರಧಾನ ಅರ್ಚಕ…

13 hours ago

Accident Update: ನೆಲಮಂಗಲದ ಜಿಂದಾಲ್‌ ಸಮೀಪ ಭೀಕರ ಅಪಘಾತ: ಅಪಘಾತದಲ್ಲಿ ದೊಡ್ಡಬಳ್ಳಾಪುರದ ಐವರ ಸಾವು ಕೇಸ್: ಮೃತರಲ್ಲಿ ಮೂವರ ಕಣ್ಣುಗಳ ದಾನ

ನೆಲಮಂಗಲದ ಜಿಂದಾಲ್‌ ಸಮೀಪ ನಡೆದ ಭೀಕರ ಅಪಘಾತದಲ್ಲಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ದುರ್ಮರಣಕ್ಕೀಡಾಗಿದ್ದಾರೆ. ಕಳೆದ ರಾತ್ರಿ 11 ಗಂಟೆಯ ಸುಮಾರಿಗೆ…

14 hours ago

ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಫಾರ್ಮ್ ಪಾರ್ಟಿ: ಸಂತಸದಿಂದ ಪ್ರಾಣಿಗಳ ಜೊತೆಯಲ್ಲಿ ಸಮಯ ಕಳೆದ ವಿದ್ಯಾರ್ಥಿಗಳು ಮತ್ತು ಪೋಷಕರು

ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಶನಿವಾರದಂದು ನಡೆದ ಸೈನ್ಸ್ ಫೆಸ್ಟ್ ನಂತರ ಮಕ್ಕಳಿಗೆ ಮತ್ತು ಪೋಷಕರಿಗೆ ಮನರಂಜನೆ ಉಣಬಡಿಸುವ ಪ್ರಯುಕ್ತ ಮಧ್ಯಾಹ್ನ…

14 hours ago